Loading Now

ಹಾಸ್ಯದ ಮೂಲಕ ಸಂದೇಶ ಹೇಳುವ ಶುಗರ್ ಲೆಸ್ ಈವಾರ ತೆರೆಗೆ.

ಡಾಟರ್ ಆಫ್ ಪಾರ್ವತಮ್ಮ ನಿರ್ಮಾಪಕ ಕೆ.ಎಂ. ಶಶಿಧರ್ ಈಗ ಶುಗರ್ ಲೆಸ್ ಚಿತ್ರದ ಮೂಲಕ ನಿರ್ದೇಶಕರೂ ಆಗಿದ್ದಾರೆ. ಸಕ್ಕರೆ ಖಾಯಿಲೆ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿರುವ ಚಿತ್ರ ಇದಾಗಿದ್ದು ಪೃಥ್ವಿ ಅಂಬಾರ್ ಹಾಗೂ ಪ್ರಿಯಾಂಕ ತಿಮ್ಮೇಶ್ ಇದರಲ್ಲಿ ನಾಯಕ -ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮೂಲಕ ದಿವ್ಯ ಶಶಿಧರ್ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಅವರ ನಿರ್ಮಾಣದ ಚಿತ್ರವಿದು.
ಇದೇ 8 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ. ಪೃಥ್ವಿ ಅಂಬಾರ್, ಚಿತ್ರದ ಟೈಟಲ್ ಅಷ್ಟೇ ಶುಗರ್ ಲೆಸ್, ಸಿನಿಮಾದ ತುಂಬಾ ಸ್ವೀಟ್ ಇದೆ. ಇದರಿಂದ ನಮ್ಮ ಲೈಫ್ ಸ್ಟೈಲ್ ಬದಲಾಗಬೇಕು, ಅನುಪ್ ಸೀಳನ್ ಅವರು ಅದ್ಭುತವಾದ ಮ್ಯೂಸಿಕ್ ಮಾಡಿದ್ದಾರೆ. ಇದು ಸೀರಿಯಸ್ ಸಿನಿಮಾ ಅಲ್ಲ ಮನರಂಜನಾತ್ಮಕ ಚಿತ್ರ ಎಂದು ಹೇಳಿದರು.
ಪ್ರಿಯಾಂಕ ತಿಮ್ಮೆಶ್ ಚಿತ್ರದ ನಾಯಕಿಯಾಗಿದ್ದಾರೆ.‌
ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರೂ ಆದ ಶಧಿಧರ್‌ಮಾತನಾಡುತ್ತ, ಇದೊಂದು ವಿಶೇಷವಾದಂತ ಸಿನಿಮಾ, ಹಿಂದೆ ಬಂದಂಥ ಕಂಟೆಂಟ್ ಒರಿಯಂಟೆಡ್ ಚಿತ್ರಗಳು ಗೆದ್ದಿವೆ. ಇದು ಪ್ರತಿಯೊಂದು ಮನೆಗೆ ಸಂಬಂದಿಸಿದ ಸಿನಿಮಾ ಆಗಿದೆ. ಇಂದು ನಮ್ಮ ಲೈಫ್ ಸ್ಟೈಲ್ ಬದಲಾಗಿದ್ದು ಈಗ ಚಿಕ್ಕ ಮಕ್ಕಳಲ್ಲೂ ಸಹ ಶುಗರ್ , ಬಿಪಿ,‌ ಹಾರ್ಟ್ ಅಟ್ಯಾಕ್ ನಂಥ ಖಾಯಿಲೆಗಳು ಬರುತ್ತಿದ್ದು ಇವುಗಳ ಜೊತೆ ನಾವು ಹೇಗೆ ಬದುಕಬೇಕು, ನಮ್ಮ ಲೈಫ್ ಸ್ಟೈಲ್ ಹೇಗಿರಬೇಕು ಎಂಬುದರ ಜೊತೆಗೆ ಮನರಂಜನೆಯ ಮೂಲಕ ಮೆಸೇಜ್ ಹೇಳುವ ಪ್ರಯತ್ನ ಚಿತ್ರದಲ್ಲಿದೆ.‌ ಹಾಗೂ ವಿದೇಶಗಳಲ್ಲಿ ಕೂಡ ನಮ್ಮ ಚಿತ್ರ ರಿಲೀಸ್ ಆಗಲಿದೆ. ಅಲ್ಲದೆ ನಮ್ಮ ‘ವೀರಂ’ ಚಿತ್ರ ಕೂಡ ರಿಲೀಸ್ ಗೆ ಸಿದ್ದವಾಗಿದೆ. ಚಿತ್ರ ನೋಡುಗರಿಗೆ ತುಂಬಾ ಎಂಜಾಯ್ ಮಾಡಿಸುತ್ತದೆ, ಕೊನೆಗೊಂದು ಮೆಸೇಜ್ ಕೂಡ ಇದೆ. ಎಲ್ಲರೂ ನೋಡಬೇಕಾದ ಚಿತ್ರ ಇದಾಗಿದೆ. ಶುಗರ್ ಲೆಸ್ ಎಲ್ಲರಿಗೂ ಆಪ್ತವಾದ್ದರಿಂದ ಚಿತ್ರಕ್ಕೆ ಈ ಟೈಟಲ್ ಇಟ್ಟಿದ್ದೇವೆ ಎಂದು ಹೇಳಿದರು.
ನಟ ಹಾಗೂ ಸಹ ನಿರ್ಮಾಪಕರಾದ ಕೃಷ್ಣೇಗೌಡ ಮಾತನಾಡುತ್ತ. ಲಾಕ್ ಡೌನ್ ಸಂದರ್ಭದಲ್ಲಿ ಈ ಚಿತ್ರವನ್ನು ಶುರು ಮಾಡಿದೆವು ಎಂದರು. ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರು ಡಾಕ್ಟರ್ ಪಾತ್ರ ಮಾಡಿದ್ದು, ನಟ ದತ್ತಣ್ಣ ಅವರ ಮೂಲಕ ಚಿತ್ರದಲ್ಲಿ ಮೂರು ಜನರೇಷನ್ ಅಂದರೆ ಮಗು ಯುವಕ ಹಾಗೂ ವಯಸ್ಸಾದವರ ತೊಂದರೆ ಹೇಳಲಾಗಿದೆ. ಇಡೀ ಚಿತ್ರವನ್ನು ಕಾಮಿಡಿಯಾಗಿ ಹೇಳಲಾಗಿದ್ದು, ಈಗಾಗಲೇ ಹಿಂದಿ ಸೇರಿದಂತೆ ಬೇರೆ ಭಾಷೆಗೆ ರೈಟ್ಸ್ ಮಾರಾಟವಾಗಿದ್ದು, ನಾನು ಸೇಪ್ ಆಗಿದ್ದೇನೆ ಎಂದೂ ಶಶಿಧರ್ ಹೇಳಿದರು.
ನಟ ನಿತೇಶ್ ಮಾತನಾಡಿ ಕಾಮಿಕ್‌ ಆದಂಥ ಪಾತ್ರ ಮಾಡಿರುವುದಾಗಿ ಹೇಳಿದರು.
ನಟ ರಘು ರಾಮನಕೊಪ್ಪ ಮಾತನಾಡಿ ಇದು ಡಯಾಬಿಟಿಸ್ ನವರಿಗೆ ಅಷ್ಟೇ ಅಲ್ಲ, ಎಲ್ಲರೂ ನೋಡಬೇಕಾದ ಚಿತ್ರ, ಯೋಗದಿಂದ ಶುಗರ್ ಕಂಟ್ರೋಲ್ ಮಾಡಬಹುದೆಂದೂ ಹೇಳಿದ್ದೇವೆ ಎಂದರು. ಅನೂಪ್ ಸೀಳನ್ ಅವರ ಸಂಗೀತ, ಲವಿತ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ

Post Comment

You May Have Missed