ಹಸುಗಳಿಗೆ ಕಾಣಿಸಿಕೊಂಡ ಗಂಟು ರೋಗ.
ಮೈಸೂರು ನ 05 : ಹನೂರು ಪೊನ್ನಾಚಿ ಗ್ರಾಮಕ್ಕೂ ಹರಡಿದ ಹಸುಗಳ ಗಂಟು ರೋಗ…ಗೇರಟ್ಟಿ ಗ್ರಾಮದ ಸದಾಶಿವಪ್ಪ ಎಂಬುವವರ ಹಸುಗೆ ಕಾಲು ಉದ್ದಿಕೊಂಡು ಇವಾಗ ಗಂಟು ಬಂದಿರುವುದು ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿದೆ..ಮೊದಲು ಪಕ್ಕದ ಗ್ರಾಮ ಕಕ್ಕೇಹೊಲದ ತಂಗವೇಲು ಎಂಬವವರ ಹಸುಗಳಿಗೆ ಬಂದ ರೋಗ ಒಂದು ಹಸುವನ್ನು ಬಲಿ ತೆಗೆದು ಇವಾಗ ಸರಿಸುಮಾರು 20 ರಿಂದ ಹೆಚ್ಚು ಹಸುಗಳಿಗೆ ಅಂಟು ಕೊಂಡಿದೆ.. ರೈತಾಪಿ ವರ್ಗದವರು ರಾಸುಗಳನ್ನೇ ನಂಬಿ ವ್ಯವಸಾಯ ನಡೆಸುತ್ತಿದ್ದೂ ಇದೀಗ ಬರಸಿಡಿಲು ಬಂಡಿದಂತೆ ಆಗಿದೆ.. ಕೂಡಲೇ ಸಂಭಂದ ಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಚಿಕಿತ್ಸೆ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಜೀವಿ ರಾಜ್ ಮನವಿ ಮಾಡಿದ್ದಾರೆ.

Post Comment