Loading Now

ಹರ್ ಘರ್ ತಿರಂಗ .

ಹರ್ ಘರ್ ತಿರಂಗ ಆಭಿಯಾನದ ಸಂದರ್ಭದಲ್ಲಿ ಮನೆ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ಅದಕ್ಕೆ ಸಾಕ್ಷಿಯಾದದ್ದು ಹೀಗೆ. ಮನೆ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಜೊತೆಗೆ ನಮ್ಮೆಲ್ಲರಲ್ಲೂ ದೇಶಾಭಿಮಾನ, ದೇಶಭಕ್ತಿ ಮತ್ತು ರಾಷ್ಟ್ರೀಯ ಪ್ರಜ್ಞೆ ಜಾಗೃತವಾಗ ಬೇಕು. ಓಚಿಣioಟಿ ಜಿiಡಿsಣ, ಚಿಟತಿಚಿಥಿs ಜಿiಡಿsಣ – ದೇಶ ಮೊದಲು, ಸದಾ ಮೊದಲು ಎಂಬ ಘೋಷವಾಕ್ಯ ಧ್ವನಿ ಮನೆಗಳಲ್ಲಿ, ಮನಗಳಲ್ಲಿ ಮೂಡುವಂತಾಗಲಿ. ಆತ್ಮನಿರ್ಭರ ಭಾರತ ಈ ದೇಶವಾಸಿಗಳಾದ ನಮ್ಮಗಳ ಜ್ಞಾನ, ಪರಿಶ್ರಮದಿಂದ ರೂಪಗೊಳ್ಳಬೇಕು. ದೇಶದ ವಿಚಾರ ಬಂದಾಗ ನಮ್ಮ ಎಲ್ಲಾ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಾವು ಒಂದಾಗಬೇಕಾದ ಅನಿವಾರ್ಯತೆ ಎಂದು ಕಾಣುತ್ತಿದೆ. ಈ ದೇಶದ ಯುವಪಡೆ ನಮ್ಮ ಪ್ರಾಚೀನರ ತ್ಯಾಗಬಲಿದಾನಗಳ ಇತಿಹಾಸವನ್ನು ಅರಿಯುವಂತಾಗಬೇಕು. ಆ ಮೂಲಕ ದೇಶದ ಮಾನವೀಯ ಮೌಲ್ಯಧಾರಿತ ವಿಚಾರಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು. ಅಂತಹಾ ಶೈಕ್ಷಣಿಕ ಮಾರ್ಗದರ್ಶನ ಯುವಜನತೆಗೆ ದೊರಕುವಂತಾ ವ್ಯವಸ್ಥೆ ನಮ್ಮಲ್ಲಿ ಬರಬೇಕು. ನಾವು ಈ ದೇಶವಾಸಿಗಳು ಅಲ್ಪಸಂಖ್ಯಾತ ಮಾನಸಿಕತೆಯಿಂದ ಹೊರಬರಬೇಕು, ಮೀಸಲಾತಿಗೆ ತಾತ್ವಿಕ ಅಂತ್ಯವನ್ನು ಹುಡಕಬೇಕು, ಆರ್ಥಿಕ ಅಸಮಾನತೆಯನ್ನು ದೂರವಾಗಿಸುವ ಕಡೆ ದೇಶ ಮುಂದಾಗಬೇಕು, ಹೆಣ್ಣು ಮಕ್ಕಳನ್ನು ಗೌರವಿಸುವಂತಹಾ ಸಾಮಾಜಿಕ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು, ಗೋಹತ್ಯೆಯಂತಾ ಪೈಶಾಚಿಕ ಕೃತ್ಯ ಅಂತ್ಯವಾಗಬೇಕು, ಭ್ರಷ್ಟಾಚಾರವನ್ನು ಸ್ವಯಂ ಪ್ರೇರಣಿ ‘ ನಾ ಕಾವೂಂಗ, ನಾ ಕಾನೇದೂಂಗ ‘ ಎಂಬು ಪ್ರತೀ ಭಾರತೀಯನ ಮಾನಸಿಕತೆಯಾಗ ಬೇಕು. ತನ್ನಂತೆ ಪರರ ಬಗೆದೊಡೆ ಕೈಲಾಸ ಭಿನ್ನಾಣವಕ್ಕು ಎಂಬ ವಚನಗಾರರ ಮಾತು ಪ್ರತೀ ಭಾರತೀಯನ ಮನಸ್ಸಿನಲ್ಲಿ ಧ್ವನಿಸಬೇಕು ಅದನ್ನು ನಾವು ಭಗವಂತನ ಅರ್ಚಾನಾ ರೂಪದಲ್ಲಿ ಆಚರಿಸುವುದನ್ನು ಪ್ರಾರಂಭಿಸಬೇಕು. ದೇಶವಾಸಿಗಳು ಜ್ಞಾನ ಪರಂಪರೆಯ ವಾರಸುದಾರರಾಗಿ ಭಾರತವನ್ನು ವಿಶ್ವಗುವಾಗಿಸಬೇಕು. ವಿಶ್ವದ ಹಲವು ದೇಶಗಳು ಇಡೀ ವಿಶ್ವದ ಮೇಲೆ ಅಧಿಕಾರದ, ಆರ್ಥಿಕ ಒಡೆತನವನ್ನು ಸಾಧಿಸಲು ಹಪಹಪಿಸುತ್ತಿವೆ. ಭಾರತ ವಿಶ್ವಗುರುವಾಗ ಬಯಸುತ್ತಿದೆ. ಅಂದರೆ ಭಾರತ ವಿಶ್ವದ ಸಕಲ ಪ್ರಾಣಿ ಸಮುದಾಯದಲ್ಲೂ ಪ್ರೀತಿ, ವಾತ್ಸಲ್ಯ, ಬ್ರಾತೃತ್ವ, ಸ್ನೇಹ ಸಹಕಾರ ಮುಂತಾದ ಮಾನವೀಯ ವಿಚಾರಗಳನ್ನು ವಿಶ್ವ ಸಮುದಾಯದಲ್ಲಿ ಸಾಕಾರವಾಗುವ ಕಡೆ ಕರೆದೊಯ್ಯುವ ಮಾರ್ಗದರ್ಶನ ಮಾಡುತ್ತಾ ದ್ವೇಷ ರಹಿತ, ಸ್ವಾರ್ಥ ರಹಿತ, ಕ್ರೌರ್ಯ ರಹಿತ ವಿಶ್ವವನ್ನು ಕಟ್ಟು ಕಡೆ ವಿಶ್ವದ ಎಲ್ಲಾ ದೇಶಗಳೂ ಸಾಗವಂತೆ ಮಾಡುವ ಮುಂದಾಳುತ್ವವನ್ನು ತೆಗೆದುಕೊಂಡು ವಸುಧೈವ ಕುಟುಂಬಕಂ ಎಂದು ವಿಶ್ವೇ ಒಂದು ಕುಟುಂಬ. ಅಲ್ಲಿರುವುದು ನಮ್ಮನೆ, ಇಲ್ಲಿ ಬಂದಿಹೆವು ಸುಮ್ಮನೆ ಎಂಬ ಜಾಗೃತಿ ಮಾನಸಿಕತೆಯಲ್ಲಿ ಬದುಕುವಂತೆ ವಿಶ್ವವನ್ನು ಮುನ್ನಡಿಸುವ ಗುರುಸ್ವರೂಪಿ ವಿಶ್ವಗುರುವಾಗ ಬಯಸುವ ಆಶಯ ಭಾರತದ್ದು. ಈ ಎಲ್ಲಾ ವಿಶಾಲ ಚಿಂತನೆಯ ಹಿನ್ನೆಲೆಯಲ್ಲಿ ಭಾರತ ಇಂದು ತನ್ನ ಸ್ವಾತಂತ್ರ್ಯ ದ ಅಮೃತ ಮಹೋತ್ಸವನ್ನು ಆಚರಿಸುತ್ತಿದೆ. ಈ ದೇಶ ಸರ್ವೇ ಜನಾಃ ಸುಖಿನೋ ಭವಂತು ಎಂಬ ಮಂತ್ರ ಇಂದು ವಿಶ್ವದ ಎಲ್ಲಾ ಸಮುದಾಯದ ಜನರಲ್ಲಿ ಮೊಳಗುವಂತೆ ಈ ಅಮೃತಮಹೋತ್ಸವ ರೂಪಗೂಳ್ಳಲಿ. ಈ ಚಿಂತನೆಗಳೊಂದಿಗೆ ಸ್ವಾತಂತ್ರ್ಯ ದ ಅಮೃತಮಹೋತ್ಸವನ್ನು ಆಚರಿಸು ಸಮಸ್ತ ಭಾರತೀಯರಿಗೂ ಶುಭಾಶಯಗಳು.

—ರಂಗನಾಥ ನಂಜನಗೂಡು

Post Comment

You May Have Missed