ಹನೂರು ತಾಲೂಕು ಟೈಲರ್ಸ್ ಅಸೋಸಿಯನ್ ಸಂಘದ ಉದ್ಘಾಟನಾ ಸಮಾರಂಭ.
ಹನೂರು ಅ 08 : ಪಟ್ಟಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಹನೂರು ತಾಲೂಕು ಟೈಲರ್ಸ್ ಅಸೋಸಿಯನ್ ಸಂಘ (ರಿ)ದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
08.08.2022ರಂದು ಪಟ್ಟಣದ ಚಂದ್ರು ಮೆನ್ಸ್ ವೇರ್ ಅಂಗಡಿ ಹತ್ತಿರ ಹನೂರು ತಾಲೂಕು ಟೈಲರ್ಸ್ ಅಸೋಸಿಯನ್ ಸಂಘ ಉದ್ಘಾಟನವನ್ನು ಸಂಘದ ಅಧ್ಯಕ್ಷ ಚಂದ್ರು ಉದ್ಘಾಟಿಸಿ ಮಾತನಾಡಿದರು.
ಟೈಲರ್ ವೃತ್ತಿಯಲ್ಲಿ ಜೀವನ ನಡೆಸುತ್ತಿರುವ ನಾವೆಲ್ಲರೂ ಒಟ್ಟಾಗಿ ಸೇರಿ ಹನೂರು ತಾಲೂಕಿನಲ್ಲಿ ಪ್ರಥಮ ಬಾರಿಗೆ ಸಂಘವನ್ನು ಕಟ್ಟಿದ್ದೇವೆ, ನಮ್ಮ ಸಂಘವು ಉಳಿಸಿ, ಬೆಳಸಬೇಕಾದರೆ ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕಾದರೆ ನಿಮ್ಮ ಸಹಕಾರ ಅಗತ್ಯ ಎಂದು ನೂತನ ಪದಾಧಿಕಾರಿಗಳು, ಸದಸ್ಯರಲ್ಲಿ ಮನವಿ ಮಾಡಿದರು.
ಹನೂರು ತಾಲೂಕು ಟೈಲರ್ ಸದಸ್ಯನ ಸಂಘದ ಅಧ್ಯಕ್ಷರಾಗಿ ಚಂದ್ರು, ಉಪಾಧ್ಯಕ್ಷರಾಗಿ ಶೇಕ್ ಜಿಯಾವುಲ್ಲಾ,ಗೌರವ ಅಧ್ಯಕ್ಷ ಗಂಗಧರ್, ಗೌರವ ಅತಿಥಿಗಳಾಗಿ ತಿಪ್ಪಣ್ಣ, ಅಬ್ದುಲ್ ಮುನೀರ್, ಗೌರವ ಸದಸ್ಯ ರಂಗಣ್ಣ, ಕಾರ್ಯದರ್ಶಿ ಶಿವು, ಖಜಾಂಜಿಯಾಗಿ ಬಸವರಾಜ್, ಎಲ್ಲರೂ ಸೇರಿದಂತೆ ಸಂಘದ ಸದಸ್ಯರು ಪದಾಧಿಕಾರಿಗಳು ಸೇರಿ ನೂತನ ಸಂಘ ಅಸ್ತಿತ್ವಕ್ಕೆ ತಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಇದೇ ಸಮಯದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಟೈಲರ್ಸ್ ಅಸೋಸಿಯನ್ ಸಂಘದ ವತಿಯಿಂದ ಸನ್ಮಾನಿಸಲಾಯಿತ್ತು
ಈ ಸಂದರ್ಭದಲ್ಲಿ ಹನೂರು ಪೊಲೀಸ್ ಠಾಣೆಯ ಎಎಸ್ ಐ ಶಿವರಾಜ್,ಕೆನರಾ ಬ್ಯಾಂಕ್ ವ್ಯವಸ್ಥಾಪಕ,ಬಿನ್ನಿಸ್, ಮಹಿಳಾ ಟೈಲರ್ ಪ್ರಿಯಾ, ರೂಪಿಕಾ, ಮಮತಾ, ಸುರೇಶ್ ಸೌಜನ್ಯ ಹಾಗೂ ಇನ್ನಿತರರು ಇದ್ದರು.

Post Comment