Loading Now

ಹನೂರು ತಾಲೂಕುನಲ್ಲಿ ಮನೆ ಗೋಡೆ ಕುಸಿತ.

ಹನೂರು ನ 07 :ಪೋನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ತಡ ರಾತ್ರಿ ಮನೆ ಗೋಡೆ ಕುಸಿದಿದ್ದು ಯಾವುದೇ ಪ್ರಾಣಪಾಯವಾಗಿಲ್ಲ ಎಂದು ತಿಳಿದುಬಂದಿದೆ.

ಮರೂರು ಗ್ರಾಮದ ಆಲಮರದದೊಡ್ಡಿ ಶಿವಕ್ಕಿ ಎಂಬುವವರು ಕುಟುಂಬ ಸಮೇತ ತಡ ರಾತ್ರಿ ಊಟ ಮಾಡಿ ಮಲಗಿದ್ದಾರೆ ಬೆಳಗಿನ ಜಾವ ಸರಿಸುಮಾರು ಗಂಟೆಯಲ್ಲಿ ಗೋಡೆ ಕುಸಿತ ಕಂಡಿದ್ದು ಮನೆಯವರೆಲ್ಲ ಭಯಭಿತಾರಾಗಿದ್ದಾರೆ,ತಕ್ಷಣ ಎದ್ದು ನೋಡಿದಾಗ ಗೋಡೆ ಮನೆಯ ಹೊರಭಾಗಕ್ಕೆ ಬಿದ್ದಿದ್ದು ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಪೋನ್ನಾಚಿ ಸಾಮಾಜಿಕ ಕಾರ್ಯಕರ್ತ ಸ್ನೇಹಜೀವಿ ರಾಜ್ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದು ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ತಂದು ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

ನೊಂದ ಮನೆ ಮಾಲೀಕರಾದ ಶಿವಕ್ಕಿ ಮಾತನಾಡಿ ಬೆಳಗಿನ ಜಾವ ಆದ ಅನಾಹುತಕ್ಕೆ ನಮ್ಮ ಮಕ್ಕಳು ಸೇರಿ 5 ಜನ ಪ್ರಾಣಪಾಯದಿಂದ ಪಾರಾಗಿದ್ದೇವೆ, ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನೊಂದ ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಿದರು.

ಈ ಕುರಿತು ಪಿಡಿಒ ಲೋಕೇಶ್ ಮಾತನಾಡಿ ಮನೆ ಗೋಡೆ ಕುಸಿದು ಬಿದ್ದಿರುವ ವಿಚಾರ ತಿಳಿಯಿತ್ತು ಆದಷ್ಟು ಬೇಗ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಸಂಬಂಧಪಟ್ಟ ಮೇಲಾಧಿಕಾರಿ ರವರಿಗೆ ವರದಿ ನೀಡಿ ಮನೆ ಕೊಡುವ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ ಎಂದರು.

Post Comment

You May Have Missed