ಸಿದ್ಧಾಂತ್ ಮತ್ತು ಶಾರ್ವರಿ ವೈಆರ್‍ಎಫ್‍ನ ಬಂಟಿಔರ್‍ಬಬ್ಲಿ 2ರಲ್ಲಿ ರೊಮ್ಯಾಂಟಿಕ್ ಗೀತೆಗೆ ಸಾಲ್ಸಾ ಕಲಿತು ಲವ್ ಜು ಎಂದು ಪರಸ್ಪರ ಹೇಳುತ್ತಾರೆ!
ಸಿದ್ಧಾಂತ್ ಮತ್ತು ಶಾರ್ವರಿ ವೈಆರ್‍ಎಫ್‍ನ ಬಂಟಿಔರ್‍ಬಬ್ಲಿ 2ರಲ್ಲಿ ರೊಮ್ಯಾಂಟಿಕ್ ಗೀತೆಗೆ ಸಾಲ್ಸಾ ಕಲಿತು ಲವ್ ಜು ಎಂದು ಪರಸ್ಪರ ಹೇಳುತ್ತಾರೆ!
ಗಲ್ಲಿ ಬಾಯ್ ನಟ ಸಿದ್ಧಾಂತ್ ಚತುರ್ವೇದಿ ಮತ್ತು ಮೋಹಕ ನಟಿ ಶಾರ್ವರಿ ಅತ್ಯಂತ ಹೊಸ ಬಾಲಿವುಡ್ ಜೋಡಿಯಾಗಿ ಯಶ್ ರಾಜ್ ಫಿಲ್ಮ್ಸ್ ಅವರ ಬಂಟಿಔರ್‍ಬಬ್ಲಿ 2ರಲ್ಲಿ ಆನ್-ಸ್ಕ್ರೀನ್‍ನಲ್ಲಿ ಮಿಂಚಲಿದ್ದಾರೆ. ಆಸಕ್ತಿದಾಯಕ ಅಂಶವೆಂದರೆ ಈ ಚಲನಚಿತ್ರವು ಅವರನ್ನು ಮೊಟ್ಟಮೊದಲ ಬಾರಿಗೆ ಅವರಿಬ್ಬರನ್ನೂ ಕಮರ್ಷಿಯಲ್ ಹೀರೋ ಮತ್ತು ಹೀರೋಯಿನ್ ಆಗಿ ಪ್ರಸ್ತುತಪಡಿಸಲಿದೆ. ಆದ್ದರಿಂದ, ಸಿದ್ಧಾಂತ್ ಮತ್ತು ಶಾರ್ವರಿ ಇಬ್ಬರಿಗೂ ಬಂಟಿಔರ್‍ಬಬ್ಲಿ 2 ಹಲವು ಪ್ರಥಮಗಳ ಚಲನಚಿತ್ರವಾಗಿದೆ. ಅವರು ತಮ್ಮ ವೃತ್ತಿಯ ಮೊದಲ ರೊಮ್ಯಾಂಟಿಕ್ ಗೀತೆ `ಲವ್ ಜು’ನಲ್ಲಿ ನಟಿಸುವುದಕ್ಕೆ ಸಾಲ್ಸಾ ಕಲಿತಿದ್ದಾರೆ.
ಈ ಕುರಿತು ಸಿದ್ಧಾಂತ್, “ಪಂಜಾಬಿಯಲ್ಲಿ ಲವ್ ಯು ಎನ್ನಲು ಲವ್ ಜು ಎನ್ನುತ್ತಾರೆ. ಯುವಜನರು ಲವ್ ಜು ಎಂದು ಹೇಳುವಾಗ ಒಂದು ಬಗೆಯ ಕಂಪನ ಮತ್ತು ಸ್ಟೈಲ್ ಇದೆ ಮತ್ತು ಈ ಗೀತೆ ಅದನ್ನು ಪ್ರಯತ್ನರಹಿತ, ಫೀಲ್-ಗುಡ್ ಗೀತೆಯಾಗಿ ಸೆರೆ ಹಿಡಿಯುತ್ತದೆ ಇದು ಹೇಗೆ ಹೊಸ ಬಂಟಿ ಮತ್ತು ಬಬ್ಲಿ ಅವರ ಬೃಹತ್ ಡಕಾಯಿತಿ ನಂತರ ತಪ್ಪಿಸಿಕೊಳ್ಳುತ್ತಾರೆ ಎನ್ನುವುದನ್ನು ತೋರಿಸುತ್ತದೆ. ಅವರು ಪ್ರೀತಿಸುತ್ತಾರೆ, ಅವರು ಪರಸ್ಪರ ಅತ್ಯಂತ ಆಕರ್ಷಣೆ ಹೊಂದಿರುತ್ತಾರೆ. ಆದ್ದರಿಂದ ಈ ಗೀತೆಯು ಅವರ ಪ್ರೇಮದ ಚೆಲ್ಲಾಟದ ಕೆಮಿಸ್ಟ್ರಿಯನ್ನು ಸೆರೆ ಹಿಡಿಯುತ್ತದೆ” ಎಂದರು.
ಶಾರ್ವರಿ, “ಲವ್ ಜು ಗೀತೆ ಸಿದ್ ಮತ್ತು ನನ್ನ ವೃತ್ತಿಯಲ್ಲಿ ಮೊದಲ ರೊಮ್ಯಾಂಟಿಕ್ ಗೀತೆಯಾಗಿದೆ ಇದರಿಂದ ಈ ಪ್ರೀತಿಯ ಗೀತೆಯನ್ನು ಚಿತ್ರೀಕರಿಸುವ ಪ್ರಕ್ರಿಯೆಯಲ್ಲಿ ಸಹಜವಾಗಿ ಅತ್ಯಂತ ಉತ್ಸಾಹದಲ್ಲಿದ್ದೇನೆ. ಈ ಗೀತೆಯಲ್ಲಿ ಪ್ರತ್ಯೇಕವಾಗಿ ನಿಲ್ಲುವ ಅಂಶವೆಂದರೆ ಇದು ರೊಮ್ಯಾಂಟಿಕ್ ಗೀತೆಯಾಗಿದೆ ಇದು ಸೂಪರ್ ಚಿಲ್, ಯಂಗ್ ಮತ್ತು ಕೂಲ್ ಆಗಿದ್ದು ದೂರ ಪ್ರಯಾಣಗಳಿಗೆ ಅತ್ಯಂತ ಸೂಕ್ತ ಗೀತೆಯಾಗಿಸಿದೆ. ಇದು ಅದ್ಭುತ ಕಂಪನಗಳನ್ನು ತಂದಿದೆ ಮತ್ತು ಇಡೀ ಚಿತ್ರತಂಡ ಪ್ರತಿನಿತ್ಯ ಚಿತ್ರೀಕರಣ ಪೂರ್ಣಗೊಂಡಾಗ ವಿದಾನ ಹೇಳುವ ಬದಲು ಲವ್ ಜು ಎನ್ನುವುದನ್ನು ಅಭ್ಯಾಸ ಮಾಡಿಕೊಂಡಿತು. `ಲವ್ ಜು’ ಖಂಡಿತವಾಗಿಯೂ ಬಹಳ ಸೆಳೆಯುವುದರಿಂದ ಅತ್ಯಂತ ಕೂಲೆಸ್ಟ್ ಗೀತೆಯಾಗಲಿದೆ!” ಎಂದರು.



Post Comment