ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿಯ ಎಣಿಕೆ ನಡೆಯಿತು .
ಹನೂರು :ಶ್ರೀ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದ ಗೋಲಕದ ಹುಂಡಿಯ ಕಾಣಿಕೆಯ ಹಣದ ಎಣಿಕೆ ಕಾರ್ಯಕ್ರಮ ನಡೆಯಿತ್ತು, ಕಾರ್ಯಕ್ರಮದಲ್ಲಿ 300 ಸಿಬ್ಬಂದಿಗಳು ಭಾಗವಹಿಸಿದ್ದರು.
ವಸತಿ ಗೃಹದಲ್ಲಿ ನಡೆದ ಹಣದ ಕಾರ್ಯಕ್ರಮದಲ್ಲಿ ಪೊಲೀಸರ ಬಂದೋಬಸ್ತ್ ಸಿಸಿ ಕ್ಯಾಮರಾ ಅಳವಡಿಸಿರುವ ಮತ್ತು ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲಿ ದಿನಾಂಕ 08. 04.2022 ರಿಂದ 12.05.2022 ವರಗೆ ಗೋಲಕದಲ್ಲಿ 34 ದಿನಗಳಲ್ಲಿ ಸಂಗ್ರಹವಾದ ಹಣ ಮತ್ತು ಬೆಳ್ಳಿ, ಚಿನ್ನ ಪದಾರ್ಥಗಳ ವಿವರ
ಗೋಲಕದಲ್ಲಿ 2,57,25,859 ರೂ ಹಣ, ಚಿನ್ನ 127 ಗ್ರಾಂ, 3 ಕೆಜಿ, 447 ಗ್ರಾಂ ಬೆಳ್ಳಿ ಪದಾರ್ಥಗಳು ಸಂಗ್ರಹ ವಾಗಿದೆ ಇದರ ಮೇಲುಸ್ತುವಾರಿಯನ್ನು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ವಹಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ,ಉಪ ಕಾರ್ಯದರ್ಶಿ ಎಂ.ಬಸವರಾಜ್, ಲೆಕ್ಕಾಧೀಕ್ಷಕ ಪ್ರವೀಣ್ ಪಟೀಲ್, ಅಧೀಕ್ಷಕ ಚಂದ್ರಶೇಖರ್, ಇನ್ನಿತರರು ಹಾಜರಿದ್ದರು.

Post Comment