ಶ್ರೀ ಬಸವಣ್ಣನವರ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಚಾಲನೆ.
ಕೊಳ್ಳೇಗಾಲ ಜು 22 : ಧನಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಗನೀಯ ಗ್ರಾಮದಲ್ಲಿ,
ಹೊಂಡರಬಾಳು ಪಟ್ಟದ ಮಠದ ಶ್ರೀ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮಿಗಳು ಸಮ್ಮುಖದಲ್ಲಿ ವಿಶ್ವಗುರು ಶ್ರೀ ಬಸವಣ್ಣನವರ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಜನರು ಬಸವಣ್ಣನವರ ತತ್ವಾದರ್ಶಗಳನ್ನು ಅನುಸರಿಸಬೇಕೆಂಬ ಉದ್ದೇಶದಿಂದ ಈ ಪುತ್ಥಳಿ ನಿರ್ಮಾಣದ ಜವಾಬ್ದಾರಿಯನ್ನು ಜನಧ್ವನಿ ಜಿಲ್ಲಾ ಬಿಜೆಪಿ ಬಿಸಿ ಸಂಯೋಜಕ, ಹನೂರು ಬಿಜೆಪಿ ಮುಖಂಡ ಬಿ.ವೆಂಕಟೇಶ್ ಅವರು ವಹಿಸಿಕೊಂಡು. ಅವರ ಅನುಪಸ್ಥಿತಿಯಲ್ಲಿ ಕಚೇರಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಊರು ಗೌಡ್ರು ಬಸವಣ್ಣ, ಯಜಮಾನರಾದ ಬಂಗಾರಪ್ಪ, ಕುಮಾರ್, ಸೇಟಪ್ಪ, ಬೆಳ್ಳುಳ್ಳಿ ಶಿವಪ್ಪ, ಬಸವರಾಜ, ಕೆಂಪಣ್ಣ, ವೀರಶೈವ ಮಹಾಸಭಾ ಕಾರ್ಯದರ್ಶಿಗಳು, ಗ್ರಾ. ಪಂ ಸದಸ್ಯರಾದ ಶ್ರೀ ಮಂಜುನಾಥ, ಮಾದೇವಣ್ಣ, ರೇವಣ್ಣ, ಪ್ರಕಾಶ್, ಸುರೇಶ್, ನಾಗಣ್ಣ, ಮಾದೇಸ್ವಾಮಿ, ಯುವ ಮುಖಂಡರಾದ ಗಿರೀಶ್, ಗುರು, ಅಂಗಡಿ ಜಗ್ಗಣ್ಣ, ಸಂತೋಷ, ರುದ್ರಸ್ವಾಮಿ, ಸುರೇಶಕುಮಾರ, ದೊಡ್ಡ ಸೊಮಣ್ಣ, ಬಸವರಾಜ, ಬಸವಣ್ಣ, ಶಿವಪ್ಪ ಹಾಗೂ ಇತರರು ಉಪಸ್ಥಿತರಿದ್ದರು.



Post Comment