ಶ್ರೀರಾಮಚಂದ್ರಾಪುರ ಮಠದಿಂದ ಸಾಮೂಹಿಕ ಯಜುರುಪಾಕರ್ಮ.
ಮೈಸೂರು ಅ-11 : ಶ್ರೀರಾಮಚಂದ್ರಾಪುರ ಮಠದ ಮೈಸೂರು ವಲಯದ ವೈದಿಕ ವಿಭಾಗದಿಂದ ಸಾಮೂಹಿಕ ಯಜುರುಪಾಕರ್ಮವನ್ನು ಬೋಗಾದಿಯ ಸಾಯಿ ಸರಸ್ವತಿ ವಿದ್ಯಾಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವೈದಿಕ ವಿಭಾಗದ ಶಂಭು ಉಪಾಧ್ಯಾಯ ಮತ್ತು ಹೋ.ಕೆ. ಸುಬ್ರಹ್ಮಣ್ಯರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೋಮ, ಮಹಾತರ್ಪಣ, ಪಿತೃ ತರ್ಪಣ, ನೂತನ ಯಜ್ಞೋಪವೀತ ಧಾರಣೆ ಯುಜುರ್ವೇದದ ಪ್ರಕಾರ ನಡೆಯಿತು.
ಶ್ರೀ ಮಠದ ಮೈಸೂರು ವಲಯದ ಅಧ್ಯಕ್ಷರಾದ ಜಿ.ಆರ್.ಮೋಹನ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್, ಸಂಘಟನಾ ಕಾರ್ಯದರ್ಶಿ ಸಂಪ ಕೃಷ್ಣಮೂರ್ತಿ, ಪ್ರಮುಖರಾದ ಕೆ.ಎಸ್. ಸದಾಶಿವ, ಗಿರಿಜಾ ಶಂಕರ್, ಶಿವಕುಮಾರ್, ಬೇತ ಕೃಷ್ಣ ಭಟ್, ಮೋಹನ ಪ್ರಶಾಂತ ಸೇರಿದಂತೆ ಹಿರಿಯರು, ಗೃಹಸ್ಥರು ಹಾಗೂ ಬ್ರಹ್ಮಚಾರಿಗಳು ಭಾಗವಹಿಸಿದ್ದರು.

Post Comment