ಶಿಕ್ಷಕರಿಗೆ ಸನ್ಮಾನ
ಮೈಸೂರು ಸೆ.೬: ಇಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಚಾಮುಂಡೇಶ್ವರಿ ಕ್ಷೇತ್ರದ ವತಿಯಿಂದ ಮೋರ್ಚಾ ಅಧ್ಯಕ್ಷರಾದ ಜೆ. ಸ್ಟೀಫನ್ ಸುಜೀತ್ ರವರ ಅಧ್ಯಕ್ಷತೆಯಲ್ಲಿ ಅಲ್ಪಸಂಖ್ಯಾತ ಉರ್ದು ಹಾಗೂ ಕ್ರೈಸ್ತ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು ಹಾಗೂ ಇದೆ ಸಂದರ್ಭದಲ್ಲಿ ಕ್ಷೇತ್ರದ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಮಾಡಲಾದ ೧೮ತಿಂಗಳ ಕಾರ್ಯಕ್ರಮಗಳ ವರದಿ ಪುಸ್ತಕ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಬಿ. ಎಂ. ರಘು, ನಗರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಕಲೀಂ ಪಾಷಾ, ಉಪಾಧ್ಯಕ್ಷ ತೋಮಸ್, ರೋಸಿಟಾ ಮೇರಿ, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಪಾಲ್, ನವೀದ್, ಕ್ಷೇತ್ರದ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷರಾದ ಸಮೀರ್, ಪ್ರಧಾನ ಕಾರ್ಯದರ್ಶಿಗಳಾದ ರೋಸ ಲಿನ ನೋಯೆಲ್, ಸಿಕಂದರ್, ಕಾರ್ಯದರ್ಶಿಗಳಾದ ಅಜಯ್ ಕುಮಾರ್, ಲಾಲ್ ಬಾಬು ಜಾ, ನಗರಮಂಡಲದ ಉಪಾಧ್ಯಕ್ಷ ಗಿರೀಶ್, ಶಶಿಕಾಂತ್, ಚಾಮರಾಜ ಕ್ಷೇತ್ರದ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ತನವೀರ ಅಹಮೇದ್, ಪ್ರಧಾನ ಕಾರ್ಯದರ್ಶಿ ತಬರೇಜ್, ಅನಿಲ್ ಹಾಗೂ ಸನ್ಮಾನಿತ ಶಿಕ್ಷಕರು ಉಪಸ್ಥಿತರಿದ್ದರು


Post Comment