ವಿದ್ಯಾರ್ಥಿಗಳು ಪರೀಕ್ಷೆಯಲಿ ಗುರಿ ತಲುಪುವುದು ಅಗತ್ಯ.
ತಿ.ನರಸೀಪುರ. ಆ.08:- ಪ್ರತಿಭಾ ಪುರಸ್ಕಾರದ ಅವಕಾಶ ಕೇವಲ ಒಂದು ಅಥವಾ ಎರಡು ಅಂಕಗಳಿಂದ ತಪ್ಪಿರುವ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಯಲ್ಲಿ ತಮ್ಮ ಗುರಿಯನ್ನು ತಲುಪುವತ್ತ ಗಮನ ಹರಿಸಬೇಕೆಂದು ನಿವೃತ್ತ ಬ್ಯಾಂಕ್ ಅಧಿಕಾರಿ ಮೂಗೂರು ನಂಜಪ್ಪ ಕಿವಿ ಮಾತು ಹೇಳಿದರು.
ಪಟ್ಟಣದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ತಾಲ್ಲೂಕು ನಾಯಕ ಸಂಘ, ತಾಲೂಕು ನಾಯಕ ನೌಕರರ ಸಂಘ ಹಾಗೂ ತಾಲ್ಲೂಕು ನಾಯಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇವರ ಸಹಯೋಗದೊಂದಿಗೆ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 80 ಕಿಂತ್ತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಮ್ಮಿ ಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಸಾಧನೆಗೆ ಗುರಿ ಮುಖ್ಯ ಈ ಬಾರಿಯ ಪರೀಕ್ಷೆಯಲ್ಲಿ ಯಾರು ತಮ್ಮ ನಿರೀಕ್ಷಿಸಿದ್ದ ಗುರಿಯನ್ನು ಕಡಿಮೆ ಅಂತರದಿಂದ ತಪ್ಪಿಸಿಕೊಂಡಿದ್ದೀರೊ ಅಂತವರು ದೃಡಸಂಕಲ್ಪ ಮಾಡಿಕೊಂಡರೆ ಮುಂದಿನ ತರಗತಿಗಳ ಪರೀಕ್ಷೆಯಲ್ಲಿ ನೀವು ಅಂದು ಕೊಂಡಂತ್ತೆ ನಿಮ್ಮ ಗುರಿ ತಲುಪ ಬಹುದು ಇದೇ ವೇದಿಕೆಯಲ್ಲಿ ನೀವು ಪ್ರತಿಭಾ ಪುರಸ್ಕಾರಕ್ಕೆ ಭಾಜೀನರಾಗಬಹುದು ಎಂದು ವಿದ್ಯಾರ್ಥಿಗಳಲ್ಲಿ ಆಶಾಭಾವನೆ ತುಂಬಿದರು.
ಮುಂದುವರಿದು ಮಾತನಾಡಿದ ಮೂಗೂರು ನಂಜಪ್ಪ ಈ ದಿನ ತಮ್ಮ ಪ್ರತಿಭೆಯಿಂದ ಪುರಸ್ಕೃತರಾದ ಮಕ್ಕಳು ತಮ್ಮ ಶಾಲೆಯ ಶಿಕ್ಷಕರು ಹಾಗೂ ನಿಮ್ಮ ಪೋಷಕರನ್ನ ಮರೆಯಬಾರದು ಹಾಗೆ ಅವರ ಮಾರ್ಗ ದರ್ಶನವನ್ನು ಮುಂದಿನ ವಿದ್ಯಾಭ್ಯಾಸಕ್ಕೆ ಬಳಸಿಕೊಂಡು ಉತ್ತಮ ವ್ಯಾಸಂಗ ಮಾಡಿ ಉನ್ನತ ಸ್ಥಾನ ಮಾನ ಹೊಂದಬೇಕು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಬೇಕು ಅಲ್ಲದೆ ನಾಯಕ ಸಂಘದಿಂದ ಸನ್ಮಾನಿತರಾದ ನೀವು ಉನ್ನತ ಸ್ಥಾನಕ್ಕೆ ಹೋದ ನಂತರ ಇಂತಹ ಕಾರ್ಯಕ್ರಮ ಗಳನ್ನು ಮುಂಚೂಣಿಯಲ್ಲಿ ನಿಂತು ಮುಂದುವರಿಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಸುಮಾರು 108 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ನಗದು ನೀಡಿ ಗೌರವಿಸಲಾಯಿತು ಹಾಗೂ ಪ್ರತಿ ವರ್ಷದಂತ್ತೆ ಈ ವರ್ಷ ಕೂಡ ದಿವಂಗತ ದೇನಾ ಬ್ಯಾಂಕ್ ಸಿದ್ದಪ್ಪ ರವರ ಹೆಸರಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ಅವರ ಕುಟುಂಬದ ಸದಸ್ಯರಾದ ಗೋವಿಂದ ರಾಜ್ ನೀಡಿದರು ಹಾಗೂ ಮುಂದಿನ ಬಾರಿ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ದಿವಂಗತ ಮಹದೇವಮ್ಮ ಹೆಸರಿನಲ್ಲಿ 25 ಸಾವಿರ ನಗದು ಬಹುಮಾನ ನೀಡುತ್ತೇನೆ ಎಂದು ಗೋವಿಂದ ರಾಜ್ ಘೋಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಬನ್ನೂರು ಚಿಕ್ಕಯ್ಯ, ಮಾಜಿ ಅಧ್ಯಕ್ಷ ಗದ್ದೆಮೋಳೆ ಹೊನ್ನನಾಯಕ, ಚಿನ್ನಸ್ವಾಮಿ,ನಾಯಕ ನೌಕರರ ಸಂಘದ ಅಧ್ಯಕ್ಷ ಶಶಿಧರ್, ಪ್ರಧಾನ ಕಾರ್ಯದರ್ಶಿ ಶಾಂತರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟಾಚಲ, ಜಿ.ಪಂ. ಮಾಜಿ ಸದಸ್ಯ ಲೋಕೇಶ್ ಚಿಕ್ಕಮಾದ ನಾಯಕ,ರಂಗಸಮುದ್ರ ಗ್ರಾ.ಪಂ.ಅಧ್ಯಕ್ಷೆ ಸೌಮ್ಯ,ಭೈರಾಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಕರಿಯಪ್ಪ,ಹೆಮ್ಮಿಗೆ ಗ್ರಾ.ಪಂ.ಸದಸ್ಯ ಹೊನ್ನನಾಯಕ ಮುಖಂಡರಾದ ಬೂದಹಳ್ಳಿ ಸಿದ್ದರಾಜು,ಶಿವಶಂಕರ್ ನಾಯಕ,ಸಿಜಿಬಿ ಮಹದೇವಯ್ಯ, ನಿವೃತ್ತ ಮುಖ್ಯ ಶಿಕ್ಷಕ ರಾಜು,ಪಿಡಿಓ ಗಣೇಶ್ ಮೂರ್ತಿ,ಪೋಲೀಸ್ ಸಿದ್ದಪ್ಪ,ಆರ್.ಪಿ.ಹುಂಡಿ ನಾಗರಾಜು, ಇಂಡವಾಳು ಬಸವರಾಜು, ಮರಡಿಪುರ ನಾಗರಾಜು ಸೇರಿದಂತೆ ನಾಯಕ ಸಮುದಾಯದ ಮುಖಂಡರು ನೌಕರರು ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Post Comment