ವಾಲ್ಮೀಕಿ ಸಮಾಜದ ಚಿಂತನೆ ಮತ್ತು ಏಳಿಗೆಗೆ ಶ್ರಮಿಸಲು ಅನುಕೂಲವಾಗುವಂತೆ ವಾಲ್ಮೀಕಿ ಭವನ ನಿರ್ಮಾಣದ ಪವಿತ್ರ ಸ್ಥಳಕ್ಕೆ ಭೂಮಿ ಪೂಜೆ ಮಾಡಿದ್ದೇನೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ತಿಳಿಸಿದರು.
ತಿ.ನರಸೀಪುರ.ಅ.04:- ವಾಲ್ಮೀಕಿ ಸಮಾಜದ ಚಿಂತನೆ ಮತ್ತು ಏಳಿಗೆಗೆ ಶ್ರಮಿಸಲು ಅನುಕೂಲವಾಗುವಂತೆ ವಾಲ್ಮೀಕಿ ಭವನ ನಿರ್ಮಾಣದ ಪವಿತ್ರ ಸ್ಥಳಕ್ಕೆ ಭೂಮಿ ಪೂಜೆ ಮಾಡಿದ್ದೇನೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಕುಕ್ಕೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ 25 ಲಕ್ಷ ವೆಚ್ಚದ ನಾಯಕ ಸಮುದಾಯದ ವಾಲ್ಮೀಕಿ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಗ್ರಾಮದ ಶುಭ ಕಾರ್ಯಗಳು ಸೇರಿದಂತೆ ಗ್ರಾಮದ ಒಳ್ಳೆಯ ಕಾರ್ಯಗಳಿಗೆ ಸಮುದಾಯ ಭವನವನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.

ವಾಲ್ಮೀಕಿ ಅವರ ಲೋಕದೃಷ್ಟಿ ಮತ್ತು ವಿಚಾರಧಾರೆಗಳು ವಿಶಾಲ ಹಾಗೂ ವೈವಿಧ್ಯಮ ಯವಾಗಿದೆ ಅದರಂತೆ ಕುಕ್ಕೂರು ಗ್ರಾಮದ ಜನರು ಸಹ ಮಹರ್ಷಿ ವಾಲ್ಮೀಕಿ
ರವರು ರಾಮಾಯಣದ ರಚನೆಯಲ್ಲಿ ತೋರಿದ ಮಾರ್ಗ, ದೃಷ್ಟಿಕೋನ, ವೈಚಾರಿಕ ನೆಲೆಗಟ್ಟು ಮೈಗೂಡಿಸಿಕೊಂಡು ನೆಡಯಬೇಕೆಂದರು.
ಮುಂದುವರೆದು ಮಾತನಾಡಿದ ಶಾಸಕರು ವಾಲ್ಮೀಕಿ ಭವನ ನಿರ್ಮಾಣದ ಸಮಯದಲ್ಲಿ ಗ್ರಾಮಸ್ಥರು ಗುತ್ತಿದಾರ ಮತ್ತು ಇಂಜಿನಿಯರ್ ರವರಿಗೆ ಸಹಕಾರ ನೀಡಬೇಕು ಹಾಗೂ ತಮಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರಲ್ಲರದೆ ಭವನ ನಿರ್ಮಾಣ ಕಾಮಗಾರಿ ನಿಗದಿ ಸಮಯಕ್ಕೆ ಗುಣಮಟ್ಟದಿಂದ ಕೂಡಿರಬೇಕು ಎಂದು ಸಂಬಂಧಿಸಿದ ಅಧಿಕಾರಿಗೆ ತಾಕೀತು ಮಾಡಿದರು.



Post Comment