Loading Now

ವರುಣನ ಅಬ್ಬರದ ನಡುವೆಯೂ ಸುಖಾಂತ್ಯ ಕಂಡ ಕೆ.ಪಿ.ಎಲ್ ಸೀಸನ್-3 ಹೊನ ಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್

ಕೋಲಾರ: ಕಳೆದ 5 ರಂದು ನಗರದ ಶ್ರೀ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಕೋಲಾರ ಅಟ್ಯಾಕರ್ಸ್, ಜೆ.ಬಿ.ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ಸಹಕಾರದೊಂದಿಗೆ ಎಲ್.ಜಿ. ಕಪ್‌ಗಾಗಿ ಆಯೋಜಿಸಿದ್ದ ಕೆ.ಪಿ.ಎಲ್ ಸೀಸನ್-೩ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಅರಂಭವಾದಾಗಿ ನಿಂದಲೂ ವರುಣನ ಕೃಪೆಯಿಂದ ಟೂರ್ನಿಮೆಂಟ್ ಮಂದಗತಿಯಲ್ಲಿ ಸಾಗಿ ಕೊನೆಗೂ ಸೋಮವಾರ ತಡರಾತ್ರಿ ಸುಖಾಂತ್ಯಗೊಂಡಿದೆ.

ಸೋಮವಾರ ತಡರಾತ್ರಿ 2.30ಕ್ಕೆ ಅಂತ್ಯಗೊಂಡ ಟೂರ್ನಿಯಲ್ಲಿ ಸ್ಕೈಬಾಯ್ಸ್ ತಂಡ ಉತ್ತಮ ಪ್ರದರ್ಶನ ನೀಡಿ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡರೆ, ಇಂದು ನ್ಯೂಸ್ ತಂಡ 2ನೇ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.

ಈ ಟೂರ್ನಿಗೆ ಸಂಪೂರ್ಣ ಸಹಕಾರ ನೀಡಿ ತಡರಾತ್ರಿವರೆಗೂ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ ವಿಜೇತರಾದವರಿಗೆ ಬಹುಮಾನ ಮತ್ತು ಕಪ್‌ಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ “ಎಸ್.ಕೆ.ಎಸ್ ಕಿಸಾನ್ ಟೊಮೊಟೊ ಮಂಡಿ ಮಾಲೀಕರು ಸದ್ದಾಮ್ ಹುಸೇನ್ ಖಾನ್
ಕೊರೋನಾದಿಂದ ಯುವಕರು ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದೆ ಮೂಲೆ ಗುಂಪಾಗುತ್ತಿದ್ದರು,ಇದನ್ನು ಮನಗಂಡು ಸಮಾಜಸೇವೆಯೊಂದಿಗೆ ಕ್ರೀಡೆಗೆ ಉತ್ತೇಜನ ನೀಡಲು ಕೋಲಾರ ಅಟ್ಯಾಕರ್ಸ್ ತಂಡಕ್ಕೆ ಟೂರ್ನಮೆಂಟ್ ನಡೆಸಲು ಉತ್ತಮ ಸಹಕಾರ ನೀಡಿದ್ದಾಗಿ ತಿಳಿಸಿದರು.

ಈ ವೇಳೆ ಸಮಾಜ ಸೇವ “ಎಸ್.ಕೆ.ಎಸ್ ಕಿಸಾನ್ ಟೊಮೊಟೊ ಮಂಡಿ ಮಾಲೀಕರು ಸದ್ದಾಮ್ ಹುಸೇನ್ ಖಾನ್, ಎಲ್.ಜಿ. ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಎಂ.ಲಕ್ಷ್ಮಣ ಗೌಡರು ಹಾಗೂ ಇತರರು ಉಪಸ್ಥಿತರಿದ್ದರು.

Post Comment

You May Have Missed