ವಂದೇ ಭಾರತ್ ಎಕ್ಸ್ಪ್ರೆಸ್ ದೇಶದ ೫ನೇ ರೈಲಿಗೆ ಪ್ರಧಾನಿ ಚಾಲನೆ .
ಸಂಜೆ ಸಮಯ ಸುದ್ದಿ
ಮೈಸೂರು, ನ ೪: ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ನ.೧೧ರಂದು ದೇಶದ ಐದನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಮೈಸೂರಿನಿಂದ ಚೆನ್ನೈಗೆ, ಚೆನ್ನೈ ಟು ಮೈಸೂರು ಸಂಚಾರ ಮಾಡಲಿದೆ. ೧೬ ಬೋಗಿಗಳನ್ನು ಒಳಗೊಂಡಿರುವ ವಂದೇ ಭಾರತ್ ಎಕ್ಸ್ಪ್ರೆಸ್ ಇದಾಗಿದೆ. ಮೈಸೂರು-ಚೆನ್ನೈ ನಡುವಿನ ಸಂಚಾರ ದರ ಎಕಾನಮಿ ಕ್ಲಾಸ್ ದರ ೯೨೧ ರೂ. ಆಗಿದೆ. ಉಭಯ ನಗರಗಳ ನಡುವಿನ ಪ್ರಯಾಣ ಸಮಯ ೬ ಗಂಟೆ ೪೦ ನಿಮಿಷ ಬೇಕಾಗುತ್ತೆ. ಮೈಸೂರು ಟು ಬೆಂಗಳೂರಿನ ನಡುವಿನ ಪ್ರಯಾಣ ೨ ಗಂಟೆ ಆಗುತ್ತೆ. ವಂದೇ ಭಾರತ್ ರೈಲಿನ ವೇಗ ೧೭೦ ಕಿಮೀ ಇದೆಯಾದರೂ, ಉಭಯ ನಗರಗಳ ಮಧ್ಯ ೭೫ ಕಿಮೀ ವೇಗದಲ್ಲಿ ರೈಲು ಸಂಚರಿಸಲಿದೆ.
ಟಿಕೆಟ್ ದರ ಎಷ್ಟು?: ಮೈಸೂರಿನಿಂದ ಚೆನ್ನೈ ಗೆ ಎಕನಾಮಿ ಕ್ಲಾಸ್ ದರ ೯೨೧ ರೂ., ಎಕ್ಸಿಕ್ಯುಟಿವ್ ದರ ೧,೮೮೦ ರೂ. ಇರಲಿದೆ. ಇನ್ನೂ ಮೈಸೂರಿನಿಂದ ಬೆಂಗಳೂರಿಗೆ ಎಕಾನಮಿ ಕ್ಲಾಸ್ ದರ ೩೬೮ ರೂ. ಹಾಗೂ ಎಕ್ಸಿಕ್ಯುಟಿವ್ ೭೬೮ ರೂ. ನಿಗದಿಪಡಿಸಲಾಗಿದೆ. ಶತಾಬ್ಬಿಗೆ ಹೋಲಿಸಿದರೆ ಟಿಕೆಟ್ ದರ ಶೇ.೩೯ ರಷ್ಟು ಹೆಚ್ಚು ಇರಲಿದೆ.
ಎಷ್ಟು ದಿನ ಸಂಚಾರ?: ೨೦೬೦೭ ನಂಬರಿನ ವಂದೇ ಭಾರತ್ ಎಕ್ಸ್ಪ್ರೆಸ್ ವಾರದಲ್ಲಿ ೬ದಿನ ಸಂಚಾರ ಮಾಡಲಿದೆ. ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನ ಸಂಚರಿಸಲಿದೆ. ಪ್ರತಿ ದಿನ ಚೆನ್ನೈ ಸೆಂಟ್ರಲ್ನಿಂದ ಬೆಳಗ್ಗೆ ೫.೫೦ ಕ್ಕೆ ಹೊರಟು ಬೆಂಗಳೂರು ಸಿಟಿ ಜಂಕ್ಷನ್ಗೆ ೧೦:೨೫ಕ್ಕೆ ಸೇರಲಿದೆ. ೫ ನಿಮಿಷಗಳ ಕಾಲ ನಿಲ್ಯಾಣದಲ್ಲಿ ನಿಲ್ಲಲಿದ್ಯು೧೦:೩೦ ಕ್ಕೆ ಹೊರಟು ೧೨:೩೦ ಕ್ಕೆ ಮೈಸೂರು ತಲುಪಲಿದೆ. ಬಳಿಕ ವಾಪಸ್ ಮೈಸೂರಿನಿಂದ ೧:೦೫ ಕ್ಕೆ ಹೊರಡಲಿದ್ದು, ಬೆಂಗಳೂರಿಗೆ ಮಧ್ಯಾಹ್ನ ೨:೫೫ ಕ್ಕೆ ಸೇರಲಿದೆ. ಬೆಂಗಳೂರಿನಿಂದ ೩ ಗಂಟೆಗೆ ಹೊರಟು ಚೆನ್ನೈಗೆ ೭:೩೫ ಕ್ಕೆ ತಲುಪಲಿದೆ. ೨೦೬೦೭ ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಜಂಕ್ಷನ್ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ಬೆಂಗಳೂರು ಸಿಟಿ ಜಂಕ್ಷನ್ನಲ್ಲಿ ಕೇವಲ ೧ ಕಡೆ ನಿಲುಗಡೆಯನ್ನು ಹೊಂದಿರುತ್ತದೆ.

Post Comment