Loading Now

ಲೂಯಿಸ್ ಬ್ರೈಲ್ ಜನ್ಮದಿನ.

ಮೈಸೂರು ಜನ 04 :

ಮೈಸೂರಿನಲ್ಲಿ ಲೂಯಿಸ್ ಬ್ರೈಲ್ ಜನ್ಮದಿನ 213ನೇ ಜನ್ಮದಿನವನ್ನು ತಿಲಕನಗರದ ಅಂಧ ಮಕ್ಕಳ ಸರ್ಕಾರಿ ಪ್ರೌಢಶಾಲೆಯಲ್ಲಿ ಲೂಯಿಸ್ ಬ್ರೈಲ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆನಂತರ ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಅಂಧ ಮತ್ತು ಕಿವುಡ ದೇವರ ಮಕ್ಕಳ ಶಾಲೆಯ ಅಧೀಕ್ಷಕರಾದ ಸತೀಶರವರು ಲೂಯಿಸ್ ಬ್ರೇಲ್ ರವರು ಫ್ರಾನ್ಸ್ ದೇಶದ 1804 ರಂದು ಜನವರಿ 4 ರಂದು ಜನಿಸಿದರು ಇವರು ಹನ್ನೆರಡನೇ ವಯಸ್ಸಿನಲ್ಲಿ ತನ್ನ ಕಣ್ಣುಗಳನ್ನು ಕಳೆದುಕೊಂಡು ಮುಂದೆ ಏನು ಮಾಡಬೇಕೆಂಬುದನ್ನು ತೋಚದೆ ಮುಂದಿನ ವಿದ್ಯಾಭ್ಯಾಸವನ್ನು ಮಾಡಲು ಬ್ರೈನ್ ಲಿಪಿ ಸ್ಥಾಪಿಸುತ್ತಾರೆ ಹನ್ನೆರಡು ಚುಕ್ಕಿಗಳು ಪ್ರಾರಂಭವಾಗಿ ಇಂದು 6ಚುಕ್ಕಿಯಾಗಿ ಪ್ರಪಂಚಾದ್ಯಂತ ಆ ಲಿಪಿಯನ್ನು ಓದಬಹುದು ಬರೆಯಬಹುದು ಇದರ ಪ್ರಯುಕ್ತ ಇವರ ಜನ್ಮ ದಿನಾಚರಣೆಯನ್ನು ಪ್ರತಿಯೊಬ್ಬರು ನೆನಪಿಸಿಕೊಂಡು ಜನ್ಮದಿನಾಚರಣೆಯನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಡಿ.ಲೋಹಿತ್, ಲೂಯಿಸ್ ಬ್ರೈಲ್ ರವರ ಜನ್ಮ ದಿನಾಚರಣೆ ಇಂದು ಇವರ ಜನ್ಮ ದಿನಾಚಾರಣೆ ಯಾರಿಗೂ ತಿಳಿಯದೆ ಇರುವುದು ದುರ್ದೈವ ಅದರಲ್ಲೂ ಯುವ ಪೀಳಿಗೆ ಮೋಜು ಮಸ್ತಿ ಮಾಡುವುದನ್ನು ಬಿಟ್ಟು ಅಂಧ ಮತ್ತು ಕಿವುಡ ಮಕ್ಕಳ ಶಾಲೆಗಳಿಗೆ ಉಪಯೋಗವಾಗುವಂತಹ ಮಾದರಿ ಕೆಲಸಗಳನ್ನು ಮಾಡಿದರೆ ದೇವರಿಗೆ ಸೇವೆ ಮಾಡಿದಂತಹ ಸಂತೃಪ್ತಿಯ ಕೆಲಸವಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಅಂಧ ಮತ್ತು ಕಿವುಡ ಮಕ್ಕಳ ಸಂಸ್ಥೆಯ ಅಧೀಕ್ಷಕರಾದ ಸತೀಶ್ ಕ್ಯಾತನಹಳ್ಳಿ, ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಡಿ.ಲೋಹಿತ್, ಸ್ಥಳೀಯ ಬಿಜೆಪಿ ಮುಖಂಡರಾದ ಸತೀಶ್, ಹಾಗು ಕ್ಷೇತ್ರದ ಯುವಮೋರ್ಚಾ ಕಾರ್ಯದರ್ಶಿ ಮನೋಜ್ ಹಾಗೂ ಶಾಲೆಯ ದೇವರ ಮಕ್ಕಳು ಉಪಸ್ಥಿತರಿದ್ದರು.

Post Comment

You May Have Missed