” ಲಾಸ್ಟ್ ಆರ್ಡರ್ “
ಸತ್ಯ ಹೆಗ್ಡೆ ಯೂಟ್ಯೂಬ್ ಚಾನೆಲ್ ನಲ್ಲಿ ಇತ್ತೀಚಿಗೆ ” ಲಾಸ್ಟ್ ಆರ್ಡರ್ ” ಎಂಬ ಕಿರುಚಿತ್ರವೊಂದು ಬಿಡುಗಡೆಯಾಗಿದೆ . ಮೂಲತಃ ಚಿಕ್ಕಮಗಳೂರಿನವರಾದ ಪ್ರಶಾಂತ್ ಗೌಡ ರವರು ಚಿತ್ರಕ್ಕೆ ಕಥೆ ಬರೆಯುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ . ಈ ಕಿರುಚಿತ್ರವು ಹಲವು ಕಾರಣಗಳಿಗೆ ಗಮನ ಸೆಳೆಯುತ್ತದೆ .
ಫುಡ್ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬಳು ಸಮಾಜದಲ್ಲಿ
ಎದುರಿಸುವ ಸಮಸ್ಯೆಗಳನ್ನು ಈ ಕಿರುಚಿತ್ರದಲ್ಲಿ ತುಂಬಾ ನಯವಾಗಿ ತೋರಿಸಿದ್ದಾರೆ .
ಸತ್ಯ ಹೆಗ್ಡೆ ಯೂಟ್ಯೂಬ್ ಚಾನಲ್ ನಲ್ಲಿ ತೆರೆಕಂಡಂತಹ ಈ ಕಿರುಚಿತ್ರಕ್ಕೆ ಕರಣ್ ಸಂಗೀತ ನಿರ್ದೇಶಕರಾದರೆ , ಅಚ್ಯುತ್ ಬಿ .ಎಸ್ ಬಹಳ ಸೊಗಸಾಗಿ ಕ್ಯಾಮರಾ ಕಾರ್ಯ ನಿರ್ವಹಿಸಿದ್ದಾರೆ . ನಾಯಕಿ ರಮ್ಯ ಕೃಷ್ಣ ರವರು ಫುಡ್ ಡೆಲಿವರಿ ಮಹಿಳೆಯಾಗಿ ಅವರ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ .

Post Comment