ರೈತ ಮೋರ್ಚ ಮತ್ತು ಯುವಮೋರ್ಚಾ ಬಲಿಷ್ಠವಾದರೆ ಯಾವ ಚುನಾವಣೆಗಳನ್ನಾದರು ಗೆಲ್ಲಬಹುದು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಭುದೇವಪುರ ಸುರೇಶ್.
ತಿ ನರಸೀಪುರ ಸೆ.26:- ರೈತ ಮೋರ್ಚ ಮತ್ತು ಯುವಮೋರ್ಚಾ ಬಲಿಷ್ಠವಾದರೆ ಯಾವ ಚುನಾವಣೆಗಳನ್ನಾದರು ಗೆಲ್ಲಬಹುದು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಭುದೇವಪುರ ಸುರೇಶ್ ಹೇಳಿದರು.
ಪಟ್ಟಣದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಅಯೋಜನೆಗೊಂಡಿದ್ದ ತಾಲ್ಲೂಕು ರೈತ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸುರೇಶ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಜನಧನ್ ಖಾತೆ ಯೋಜನೆ ತಂದ ಕಾರಣ ,ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಫಲಾನುಭವಿಗಳ ಖಾತೆಗೆ ನೇರ ಹಣ ತಲುಪುತ್ತಿದೆ ಎಂದರು.
ಮುಂದುವರೆದು ಮಾತನಾಡಿದ ಅವರು ರೈತ ಮೋರ್ಚಾ ಯುವ ಮೋರ್ಚಾ ನೇರವಾಗಿ ಜನರ ಒಡನಾಟದಲ್ಲಿರುವುದರಿಂದ ಸರಕಾರದಿಂದ ಬರುವ ಎಲ್ಲ ಸೌಲತ್ತುಗಳನ್ನು ಜನರಿಗೆ ದೊರಕಿಸಿ ಕೊಡಬೇಕು ಮತ್ತು ಪ್ರಧಾನಮಂತ್ರಿಗಳು ಜಾರಿಗೊಳಿಸಿರುವ ಯೋಜನೆಗಳನ್ನು ಜನರಿಗೆ ತಿಳಿಸಿಕೂಡುವ ಕೆಲಸ ಮಾಡಬೇಕು ಎಂದರು.
ತಾಲೂಕು ರೈತ ಮೋರ್ಚಾ ಅಧ್ಯಕ್ಷ ಕೆಬ್ಬೆಹುಂಡಿ ಶಿವಕುಮಾರ್ ಮಾತನಾಡಿ ನಾನು ಅಧ್ಯಕ್ಷನಾದ ಮೇಲೆ ಸರ್ಕಾರದಿಂದ ರೈತರಿಗಾಗಿ ರಸಗೊಬ್ಬರ ಬಿತ್ತನೆ ಬೀಜ ಪ್ರಧಾನಮಂತ್ರಿಯವರು ಜಾರಿಗೊಳಿಸಿರುವ ಕೃಷಿ ಕಾಯಿದೆ ಎಪಿಎಂಸಿ ಕಾಯಿದೆ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದೇವೆ. ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಗಿಡ ನಡುವುದು ಮುಂತಾದ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ಭಾರತಿ ಶಂಕರ್ ,ಜಿಲ್ಲಾ ರೈತ ಮೂರ್ಚ ಉಪಾಧ್ಯಕ್ಷ ಸುರೇಶ್ , ತಿ.ನರಸೀಪುರ ಮಂಡಲ ಉಸ್ತುವಾರಿ ಸತೀಶ್ ,ಪ್ರಧಾನ ಕಾರ್ಯದರ್ಶಿ ದೇವರಾಜು,ತಿ.ನರಸೀಪುರ ಮಂಡಲ ರೈತ ಮೂರ್ಚ ಅಧ್ಯಕ್ಷ ಕೆಬ್ಬೆಹುಂಡಿ ಶಿವಕುಮಾರ್ , ಪ್ರಧಾನ ಕಾರ್ಯದರ್ಶಿಗಳಾದ ಬಸಪ್ಪ ಪಟೇಲ್ ,ರಾಜು,ಮಾಜಿ ಅಧ್ಯಕ್ಷ ಹಿರಿಯೂರು ಪರಶಿವ ಮೂರ್ತಿ,ಕರೋಹಟ್ಟಿ ಮಹದೇವಯ್ಯ ,ಜಿಲ್ಲಾ ಕಾರ್ಯದರ್ಶಿ ಬಸವರಾಜು , ಮುಖಂಡರು ಗಳಾದ ಮಂಜುನಾಥ್ , ಬಡ್ಡು ಶಿವಕುಮಾರ್ ,ಯುವ ಮೊರ್ಚ ಅಧ್ಯಕ್ಷ ಕುರುಬೂರು ಶಿವು ಮತ್ತಿತರರು ಹಾಜರಿದ್ದರು



Post Comment