ರಾಷ್ಟ್ರೀಯ ಶಿಕ್ಷಣ ಪದ್ಧತಿಯಲ್ಲಿ ನಕಾರಾತ್ಮಕ ಅಂಶಗಳ ಬಗ್ಗೆ ಗಂಭೀರ ಚಿಂತನೆ ಅನಿವಾರ್ಯ ಹಿರಿಯ ಉಪನ್ಯಾಸಕ – ಡಾ.ನಾರಾಯಣಸ್ವಾಮಿ .
ಕೋಲಾರ :- ಗುರುಕುಲ ಶಿಕ್ಷಣ ಪದ್ಧತಿಯು ಒಂದು ಸಮುದಾಯಕ್ಕೆ ಸೀಮಿತ ಹಾಗಾಗಿ ಅದನ್ನು ಒಪ್ಪಲು ಸಾಧ್ಯವಿಲ್ಲ ಅದರ ದ್ವಿಮುಖ ನೀತಿ ಇತಿಹಾಸದಲ್ಲಿ ಎದ್ದು ಕಾಣುತ್ತದೆ. ಶಿಕ್ಷಣದ ಬಗ್ಗೆ ಚರ್ಚೆ ಮಾಡಲು ಈಗ ವೇದಿಕೆಗಳು ದೊರೆತಿವೆ. ಈಗ ರಾಷ್ಟ್ರೀಯ ಶಿಕ್ಷಣ ಪದ್ಧತಿಯನ್ನು(ಎನ್ ಇ ಪಿ) ಭಾರತ ಸರ್ಕಾರ ಹೊರತಂದಿದೆ. ರಾಜ್ಯ ಸರ್ಕಾರಗಳು ಸಹ ಅದನ್ನು ಅಳವಡಿಸುವ ಚಿಂತನೆಯಲ್ಲಿವೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಅನ್ವಹಿಸುವ ಕೌಶಲ್ಯಾಧಾರಿತ ಶಿಕ್ಷಣ ಬಹಳ ಮುಖ್ಯವಾಗಿದ್ದು ಜ್ಞಾನ ಮುಖ್ಯವಲ್ಲ ಎಂಬ ಅಂಶ ವ್ಯಕ್ತವಾಗಿದೆ ಶಿಕ್ಷಣಸಂಸ್ಥೆಗಳನ್ನು ಗುತ್ತಿಗೆ ಕೊಡುವುದು ಇದೆ. ಎನ್ ಇ ಪಿ ಯಲ್ಲಿ ಗುತ್ತಿಗೆ ನಡೆಸುವುದು ಅಷ್ಟು ಸಮಂಜಸವಲ್ಲ.
ಈ ಪದ್ಧತಿಯಲ್ಲಿರುವ ನಕಾರಾತ್ಮಕ ವಿಷಯಗಳ ಬಗ್ಗೆ ಗಂಭೀರ ಚಿಂತನೆ ಅನಿವಾರ್ಯ ಎಂದು ಕೋಲಾರದ ರೋಟರಿ ಭವನದಲ್ಲಿ ಕನ್ನಡಸಿರಿ ಸಾಹಿತ್ಯ ಪರಿಷತ್ತು, ರೋಟರಿ ಕ್ಲಬ್, ಚುಟುಕು ಸಾಹಿತ್ಯ ಪರಿಷತ್ತು ಮತ್ತು ಸಿರಿಗನ್ನಡ ವೇದಿಕೆ ವತಿಯಿಂದ ಡಾ.ಎಸ್.ರಾಧಾಕೃಷ್ಣನ್ ರವರ ನೆನಪಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಯಟ್ ನ ಹಿರಿಯ ಉಪನ್ಯಾಸಕ ಡಾ.ನಾರಾಯಣ ಸ್ವಾಮಿ ತಿಳಿಸಿದರು.
ಕನ್ನಡಸಿರಿ ಸಾಹಿತ್ಯ ಪರಿಷತ್ತಿನ ಜಿಲ್ಲಾಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಗೌರವಾಧ್ಯಕ್ಷ ಟಿ.ಸುಬ್ಬರಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಇಂದು ನಾವು ಗುರುಗಳನ್ನು ಸ್ಮರಿಸುವ ದಿನವಾಗಿದೆ. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಶಬ್ದವೇ ಗುರುವೆಂದು, ಅದು ಒಂದು ವ್ಯಕ್ತಿಯಲ್ಲ ಅದೊಂದು ಶಕ್ತಿ. ಅಂತಹ ಗುರುಗಳು ಶಿಕ್ಷಣ ಕ್ಷೇತ್ರದಲ್ಲಿ ಸತತವಾಗಿ 30 – 40 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದು ವಯೋನಿವೃತ್ತಿ ಹೊಂದಿದ್ದು ಅಂತಹವರನ್ನು ಗುರುತಿಸಿ ಸನ್ಮಾನಿಸುವುದು ಸಂಘ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಶ್ರೀ ಎ.ಎಂ.ನಂಜುಂಡಪ್ಪ, ಶ್ರೀ ಎಂ.ಮಲ್ಲಿಕಾರ್ಜುನ, ಶ್ರೀ ಆರ್.ಶ್ರೀನಿವಾಸನ್,ಶ್ರೀಮತಿ ರಾಧಾಮಣಿ, ಶ್ರೀಮತಿ ಶಾರದಮ್ಮ, ಶ್ರೀಮತಿ ಲಕ್ಷ್ಮಿದೇವಮ್ಮರವರನ್ನು ಸನ್ಮಾನಿಸಲಾಯಿತು.
15 ಶಿಕ್ಷಕ ಕವಿಗಳು ತಮ್ಮಕವಿತೆಗಳನ್ನು ವಾಚಿಸಿದರು.
ಮುದುವಾಡಿ ಹೊಸಹಳ್ಳಿ ಕೆ.ಸೋಮಶೇಖರ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಶ್ರೀಮತಿ ರಾಧಾಮಣಿ ಪ್ರಾರ್ಥಸಿ, ಶಿಕ್ಷಣ ಸಂಯೋಜಕ ಕೆ.ಶ್ರೀನಿವಾಸ್ ವಂದಿಸಿ, ದಾಸೇನಹಳ್ಳಿ ಸೋಮಶೇಖರ್ನಿರೂಪಿಸಿದರು.
ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರಾದ ಶ್ರೀ ಕೆ.ಎನ್.ಪರಮೇಶ್ವರನ್,ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪಿ.ನಾರಾಯಣಪ್ಪ,ಸಿರಿಗನ್ನಡ ವೇದಿಕೆ ಜಿಲ್ಲಾಅಧ್ಯಕ್ಷ
ಎಂ ರಾಮಚಂದ್ರಪ್ಪ, ರೋಟರಿ ಕ್ಲಬ್ ನ ಅಧ್ಯಕ್ಷ ಶ್ರೀ ಬಿ.ಶಿವಕುಮಾರ್.

Post Comment