Loading Now

ರಕ್ತದಾನದ ಜಾಗೃತಿ ವೃದ್ಧಿಸಲಿ:ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳ.

ಮೈಸೂರು 04 – ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತನಿಧಿ ಕೇಂದ್ರದ ರಕ್ತದಾನ ಜಾಗೃತಿ ವುಳ್ಳ 2023ರ ಕ್ಯಾಲೆಂಡರ್ ವನ್ನು ಅವಧೂತ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳ ರವರು ಊಟಿ ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಬಿಡುಗಡೆಗೊಳಿಸಿದರು ನಂತರ ಮಾತನಾಡಿ.

ಅನೇಕ ಸಂಘಟನೆ ಮತ್ತು ಸರಕಾರೇತರ ಸಂಘಟನೆಗಳ ಶ್ರಮದಿಂದ ಕಳೆದ ದಶಕಗಳಲ್ಲಿ ರಕ್ತದಾನದ ಮಹತ್ವದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿದೆ. ಆದರೆ ಈ ಜಾಗೃತಿ ಇನ್ನೂ ಹೆಚ್ಚು ವ್ಯಾಪಕವಾಗುವ ಅವಶ್ಯಕತೆ ಇದೆ.
ಈ ಹಿಂದಿನ ದಿನಮಾನಗಳಿಗೆ ಹೋಲಿಸಿದ್ದಲ್ಲಿ ಕಳೆದ ದಶಕದಲ್ಲಿ ರಕ್ತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿದೆ. ಕಾಲೇಜುಗಳ ಎನ್ನೆಸ್ಸೆಸ್ ಮತ್ತು ಎನ್‌ಸಿಸಿ ಕೆಡೆಟ್‌ಗಳಿಗೆ ಸೀಮಿತವಾಗಿದ್ದ ರಕ್ತದಾನ ಶಿಬಿರ ಇಂದು ಅನೇಕ ಸರಕಾರೇತರ ಸಂಘಟನೆಗಳು ಮತ್ತು ಯುವಕ ಮಂಡಳಗಳು ರಕ್ತದಾನ ಶಿಬಿರ ಆಯೋಜಿಸುತ್ತಿರುವುದು ಶ್ಲಾಘನೀಯ. ಸಂಗೀತ ಆಲಿಸುವುದು, ಪ್ರವಾಸ ಮತ್ತು ಇತರ ಹವ್ಯಾಸಗಳಂತೆ ಇತ್ತೀಚೆಗೆ ನಿಯಮಿತವಾಗಿ ರಕ್ತದಾನ ಮಾಡುವುದು ಸಹ ಕೆಲ ಯುವಕರ ಹವ್ಯಾಸವಾಗಿದೆ. ಈ ಬಗೆಯ ಸಕಾರಾತ್ಮಕ ಬೆಳವಣಿಗೆೆಗಳು ಆರೋಗ್ಯ ಕ್ಷೇತ್ರದ ಬಹು ದೊಡ್ಡ ಸವಾಲಾಗಿದ್ದ ರಕ್ತದ ಕೊರತೆ ನೀಗಿಸುತ್ತಿವೆ ಎಂದರು.

ಇದೇ ಸಂದರ್ಭದಲ್ಲಿ ಜೀವದಾರ ರತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ಕೇಬಲ್ ಮಹೇಶ್, ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿಕಾಸ್ ಶಾಸ್ತ್ರಿ, ಮಂಜುನಾಥ್ ಹಾಗೂ ಇನ್ನಿತರರು ಹಾಜರಿದ್ದರು

Post Comment

You May Have Missed