Loading Now

ಯುವ ಜನರಲಿ ದೇಶಪ್ರೇಮವನ್ನು ಮೂಡಿಸುವುದು ಅನಿವಾರ್ಯ.

ಮದ್ದೂರು ಅ 11 : ನಾಡಿನ ಸ್ವಾತಂತ್ರ್ಯ ಯೋಧರನ್ನು ನೆನಪಿಸಿಕೊಳ್ಳುವ ಮೂಲಕ ಯುವ ಜನರಲ್ಲಿ ದೇಶಪ್ರೇಮವನ್ನು ಮೂಡಿಸುವುದು ಈಗ ಅನಿವಾರ್ಯ ಆ ಕಾರಣದಿಂದ ಯುವಕರು ಸ್ವಾತಂತ್ರ್ಯ ಯೋಧರನ್ನು ನೆನಪಿಸಿಕೊಳ್ಳುವ ಮೂಲಕ ದೇಶ ಸೇವೆಯ ಮಹತ್ವವನ್ನು ಅರಿತುಕೊಳ್ಳಬೇಕಿದೆ ಎಂದು ತಹಸಿಲ್ದಾರ್ ನರಸಿಂಹಮೂರ್ತಿ ನುಡಿದರು.
ಶಿವಪುರದಲ್ಲಿರುವ ಧ್ವಜ ಸತ್ಯಾಗ್ರಹ ಸೌಧದಲ್ಲಿ ಕೇಂದ್ರೀಯ ಸಂಸ್ಕೃತಿ ಮಂತ್ರಾಲಯದ ಅಂಗ ಸಂಸ್ಥೆಯಾದ ದಕ್ಷಿಣ ಮಧ್ಯ ಸಾಂಸ್ಕೃತಿಕ ಕೇಂದ್ರ ನಾಗಪುರ, ಹಾಗೂ ರಂಗ ವಿಜಯಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿವಪುರ ಧ್ವಜ ಸತ್ಯಾಗ್ರಹ ಎಂಬ ಐತಿಹಾಸಿಕ ನಾಟಕದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ನಮ್ಮ ದೇಶದ ಸ್ವಾತಂತ್ರಕ್ಕಾಗಿ ಮಾಡಿದ ತ್ಯಾಗ ಬಲಿದಾನಗಳನ್ನು ದೇಶದ ಪ್ರತಿಯೊಬ್ಬ ಪ್ರಜೆ ಅರಿತುಕೊಳ್ಳಬೇಕಾದ ಅವಶ್ಯಕತೆ ಇದ್ದು 75ರ ಸಂಭ್ರಮದ ಜೊತೆಗೆ ದೇಶಪ್ರೇಮದ ಕಿಚ್ಚನ್ನು ಹೆಚ್ಚಿಸುವ ಅನೇಕ ಕಾರ್ಯಕ್ರಮಗಳು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಈ ತರಹದ ಕಾರ್ಯಕ್ರಮಗಳಿಂದ ಜನರಲ್ಲಿ ಜಾಗೃತಿ ಮೂಡುತ್ತಿದೆ ಎಂದರು.
ನಾಗಪುರ ದಕ್ಷಿಣ ಮಧ್ಯ ಸಾಂಸ್ಕೃತಿಕ ಕೇಂದ್ರದ ಅಧಿಕಾರಿಯಾದ ದೀಪಕ್ ಪಾಟೀಲ್ ಮಾತನಾಡಿ ಕೇಂದ್ರ ಸರ್ಕಾರವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಮರೆತು ಹೋಗುತ್ತಿರುವ ತ್ಯಾಗ ಬಲಿದಾನಗಳನ್ನು ನೆನಪಿಸುವಂತಹ ಹಾಗೂ ಹೋರಾಟ ನಡೆದ ಸ್ಥಳಗಳಲ್ಲಿಯೇ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ದುಡಿಯುತ್ತಿದ್ದು ಆ ತರಹದ ಕಾರ್ಯಕ್ರಮಗಳಿದ್ದಲ್ಲಿ ಸದಾ ಸ್ಪಂದಿಸುವುದಾಗಿ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ ಸದಸ್ಯರಾದ ಮಾಲೂರು ವಿಜಿ ಮಾತನಾಡಿ ದೇಶದಾದ್ಯಂತ ಸ್ವಾತಂತ್ರದ ಅಮೃತ ಮಹೋತ್ಸವದ ಸಂಭ್ರಮ ನಡೆಯುತ್ತಿದೆ ಆ ಸಂಭ್ರಮದ ಅಡಿಯಲ್ಲಿ ಕರ್ನಾಟಕದ 75 ಕ್ಕೂ ಹೆಚ್ಚು ಕಡೆಗಳಲ್ಲಿ ಸ್ವಾತಂತ್ರ್ಯ ಯೋಧರನ್ನು ನೆನಪಿಸುವ ಕಾರ್ಯಕ್ರಮ ಒಂದು ಕಡೆ ನಡೆಯುತ್ತಿದ್ದರೆ ಮನೆಮನೆಯಲ್ಲೂ ಬಾವುಟ ಎಂಬ ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬರ ಮನ ತಲುಪುವ ಪ್ರಯತ್ನ ಕೂಡ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಡೆಯುತ್ತಿದೆ, ಯುವಕರು ಅನೇಕ ವಿಷಯಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವ ಸಂದರ್ಭಗಳು ಹೆಚ್ಚಾಗುತ್ತಿದೆ ಅಂತಹ ಯುವಕರನ್ನು ಒಗ್ಗೂಡಿಸಿ ದೇಶಪ್ರೇಮದ ಕಥೆಗಳನ್ನು ಹೇಳಿ ದೇಶಪ್ರೇಮದ ನಾಟಕವನ್ನು ಮಾಡಿಸುವ ಮೂಲಕ ಯುವಕರಲ್ಲಿ ಸ್ವಾತಂತ್ರ ಪ್ರೇಮವನ್ನು ಮೂಡಿಸುವ ಪ್ರಯತ್ನ ಮಾಡಲಾಗಿದೆ ಇದು ಶ್ಲಾಘನೀಯ ಎಂದರು.
ಕರ್ನಾಟಕ ರಾಜ್ಯ ಜಾನಪದ ಪರಿಷತ್ತಿನ ಮಂಡ್ಯ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಡಿಪಿ ಸ್ವಾಮಿಯವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕಲೆ ನಶಿಸಿ ಹೋಗುತ್ತಿದೆ ಕಲೆಗಳನ್ನು ಉಳಿಸುವ ಪ್ರಯತ್ನ ಕಲಾವಿದರು ಮಾಡಬೇಕಿದೆ ಕರೋನ ಕಲಾವಿದರ ಬದುಕನ್ನು ಶೂನ್ಯ ಮಾಡಿದ್ದು ಈಗ ಕಲಾವಿದರು ಸ್ವಾತಂತ್ರ್ಯ ಪ್ರೇಮದ ನಾಟಕಗಳ ಮೂಲಕ ಜನರ ಮನಮನೆಗಳನ್ನು ತಲುಪಲಿ ಎಂದರು ಈ ಸ್ವಾತಂತ್ರ್ಯದ ಸಂದರ್ಭದಲ್ಲಿ ನಾಟಕ ಮನೋಜ್ಞವಾಗಿ ಮೂಡಿ ಬಂತು ಎಂದರು.
ರಂಗ ವಿಜಯ ತಂಡ ಅಭಿನಯಿಸಿದ ದಿಲೀಪ್ ಕುಮಾರ್ ಚಿಕ್ಕಬಳ್ಳಾಪುರ ಅವರ ನಿರ್ದೇಶನದ ಶಿವಪುರ ಧ್ವಜ ಸತ್ಯಾಗ್ರಹ ನಾಟಕ ಜನರನ್ನು ತನ್ನತ್ತ ಕೊಳ್ಳುವಲ್ಲಿ ಯಶಸ್ವಿಯಾಯಿತು ನಾಟಕದ ಪ್ರಾರಂಭದಲ್ಲಿ ಮುದುಕನೋರ್ವ ದಾರಿ ಹೋಕರಿಗೆ ಸ್ವಾತಂತ್ರ್ಯದ ನೆನಪಿಗೆ ಪಾನಕ ನೀರು ಮಜ್ಜಿಗೆ ನೀಡುವ ಮೂಲಕ ಪ್ರಾರಂಭವಾಗುತ್ತದೆ ಕಳ್ಳರು ಅವನ ಮನೆ ಪ್ರವೇಶಿಸಿ ಕೊಲ್ಲುವುದಾಗಿ ಎದುರಿಸಿದರೂ ಎದರದ ಅವನು ಎದೆಗುಂದದೆ ಆರಾಮಾಗಿರುತ್ತಾನೆ. ಅದೇ ರಾಷ್ಟ್ರಧ್ವಜವನ್ನು ಕೆಳಗೆ ಬಿಸಾಡಿದಾಗ ಆವೇಶ ಭರಿತನಾಗಿ ಈ ದ್ವಜ ಬಂದ ಬಗ್ಗೆ ಶಿವಪುರದ ಸತ್ಯಾಗ್ರಹ ನಡೆದ ಬಗ್ಗೆ ವಿವರಿಸುತ್ತಾ ಹೋಗುತ್ತಾನೆ 1975 ರಲ್ಲಿ ನಡೆದ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಕೆಂಗಲ್ ಹನುಮಂತಯ್ಯ ಮತ್ತು ದೇವರಾಜ್ ಅರಸು ರವರು ಮಾತನಾಡುವ ದೃಶ್ಯವನ್ನು ಮನೋಜ್ಙವಾಗಿ ಕಟ್ಟಲಾಗಿದೆ. ಆನಂತರದಲ್ಲಿ ನಾಟಕ ಧ್ವಜ ಹುಟ್ಟಿಕೊಂಡ ಬಗ್ಗೆ ಹೇಳುತ್ತಾ ಸಾಗಿ ಪಿಂಗಳ ವೆಂಕಟಯ್ಯನವರ ಕಥೆಯನ್ನು ವಿವರಿಸಿ ಧ್ವಜ ಹುಟ್ಟಿಕೊಂಡ ಬಗೆಯನ್ನು ಹೇಳುತ್ತಾ ಸಾಗುತ್ತಿದೆ ಕೊನೆಯಲ್ಲಿ ಶಿವಪುರ ಧ್ವಜ ಸತ್ಯಾಗ್ರಹದ ದೃಶ್ಯವನ್ನು ಮನೋಜ್ಙವಾಗಿ ಕಟ್ಟಲಾಗಿದೆ. ಈ ನಾಟಕದಲ್ಲಿ ನಾಡಿನ ವಿವಿಧ ಭಾಗಗಳಿಂದ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ನೀಡಿ ಯಶಸ್ವಿ ಪ್ರಯೋಗ ಮಾಡುವಲ್ಲಿ ನಿರ್ದೇಶಕ ದಿಲೀಪ್ ಕುಮಾರ್ ಚಿಕ್ಕಬಳ್ಳಾಪುರ ಗೆದ್ದಿದ್ದಾರೆ ಎನ್ನಬಹುದು.

ನಾಟಕದಲ್ಲಿ ವಿವಿಧ ಜಿಲ್ಲೆಗಳ 20ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದು ಅತ್ಯಂತ ಅದ್ಭುತವಾಗಿ ನಾಟಕವನ್ನು ರೂಪಿಸಿದರು ಹಿನ್ನೆಲೆ ಸಂಗೀತ ಹಾಗೂ ನಿರ್ದೇಶನವನ್ನು ದಿಲೀಪ್ ಕುಮಾರ್ ಚಿಕ್ಕಬಳ್ಳಾಪುರ ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾರೆ. ಒಟ್ಟಾರೆ ನಾಟಕ ಜಾನಪದ ಸೊಗಡನ್ನು ಒಳಗೊಂಡಂತೆ ವಿವಿಧ ಕೇಂದ್ರಗಳಲ್ಲಿ ನಾಟಕ ಮಾಡಿಸುವ ಮೂಲಕ ಸ್ವಾತಂತ್ರ್ಯ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ ಎನ್ನಬಹುದು
ಈ ಸಂದರ್ಭದಲ್ಲಿ ಸಮಾಜ ಸೇವಕಿ ಡಾ. ಸೌಮ್ಯ, ಕೃಷಿ ಪತ್ತಿನ ಬ್ಯಾಂಕಿನ ಅಧ್ಯಕ್ಷ ನ ಳಿ ಕೃಷ್ಣರವರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಒಟ್ಟಾರೆ ಈ ಕಾರ್ಯಕ್ರಮ ಜನಮನವನ್ನು ಮೆಚ್ಚಿಸಿದ್ದು ಅಲ್ಲದೆ ಸ್ವಾತಂತ್ರ ಪ್ರೇಮವನ್ನು ಮೂಡಿಸಿದ್ದು ಅಲ್ಲದೆ ಬಹುದೊಡ್ಡ ಹೋರಾಟದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಸಾಗುತ್ತದೆ ಎಂದು ನಡೆದಿದ್ದ ಪ್ರೇಕ್ಷಕರು ನುಡಿದರು

Post Comment

You May Have Missed