ಯಾವ ಪಕ್ಷ ಸೇರಬೇಕೆಂಬುದನ್ನು ಸಮಯ ಬಂದಾಗ ತಿಳಿಸುತ್ತೇನೆ ಬೀರಿ ಹುಂಡಿ ಬಸವಣ್ಣ.
ತಾಂಡವಪುರ ನ 8 : ಜೆಡಿಎಸ್ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದ್ದಾರೆ ಎಂಬ ಉದ್ದೇಶದಿಂದ ಪಕ್ಷದ ಚಟುವಟಿಕೆಯಿಂದ ದೂರ ಇರುವ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ ಅವರ ನಡೆ ಚಾಮುಂಡೇಶ್ವರಿ ಕ್ಷೇತ್ರದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಸ್ತವಾಗಿದೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕಡಕೋಳ ಗ್ರಾಮದ ಬಿಕೆಟಿ ಪಬ್ಲಿಕ್ ಶಾಲೆಯ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಾಗ ಬೀರಿಹುಂಡಿ ಬಸವಣ್ಣನವರನ್ನು ಸುದ್ದಿಗಾರರು ಪಕ್ಷದಿಂದ ದೂರ ಇರುವ ವಿಚಾರ ಪಕ್ಷವನ್ನು ಬಿಡುತ್ತಾರೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರಿಸಿದ ಬಸವಣ್ಣನವರು,
ಈಗಲೇ ನಾನು ಏನು ಹೇಳುವುದಿಲ್ಲ ಸಮಯ ಬಂದಾಗ ತಿಳಿಸುತ್ತೇನೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆ ಮೂಡುವಂತಾಗಿದೆ ಈ ಎಲ್ಲದರ ಮದ್ಯ ಅವರ ಮಾತುಗಳ ದಾಟಿಯನ್ನು ನೋಡಿದರೆ ಅವರು ಪಕ್ಷವನ್ನು ಬಿಡುವುದು ಮತ್ತು ಬೇರೆ ಪಕ್ಷಕ್ಕೆ ಸೇರುವುದು ಸೇರುವುದಕ್ಕೆ ಅವರ ಮಾತುಗಳು ಇಂಪು ನೀಡಿದಂತಾಗಿದೆ ಈ ಸಂದರ್ಭದಲ್ಲಿ ಕಾಳಿ ಬೀರೇಶ್ವರ ಟ್ರಸ್ಟಿನ ಅಧ್ಯಕ್ಷರು ಹಾಗೂ ಬಿಕೆಟಿ ಪಬ್ಲಿಕ್ ಶಾಲೆಯ ಸಂಸ್ಥಾಪಕ ಬಿ ನಾಗರಾಜು ಹಾಗೂ ಟ್ರಸ್ಟಿನ ಸದಸ್ಯರುಗಳು ಹಾಜರಿದ್ದರು .

Post Comment