ಯಡದೊರೆ ಗ್ರಾಮ ತಾಯಿ ಮನೆ ಇದ್ದಂತೆ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಮಾನದ ನುಡಿಗಳು
ತಿ.ನರಸೀಪುರ.ಫೆ.09:-ಯಡದೊರೆ ಗ್ರಾಮ ನಮ್ಮ ಕುಟುಂಬಕ್ಕೆ ತಾಯಿ ಮನೆ ಇದ್ದಂತೆ ನಮ್ಮ ತಂದೆ ಸಿದ್ದರಾಮಯ್ಯ ರವರಿಗೆ ನೀಡಿದ ಬೆಂಬಲ, ಪ್ರೀತಿಯನ್ನು ನನಗೂ ಸಹ ತೋರುತ್ತಿರುವು ದರಿಂದ ನಾನು ಸಹ ಯಡದೊರೆ ಗ್ರಾಮವನ್ನು ಎಂದಿಗೂ ಮರೆಯಲಾರೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಮಾನದ ನುಡಿಗಳ ನ್ನಾಡಿದರು.
ವರುಣಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಯಡದೊರೆ ಗ್ರಾಮದಲ್ಲಿ ಹೆಚ್ಚುವರಿ ಬೋಧನ ಕೊಠಡಿಗಳು ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಮೇಲಂತಸ್ತಿನಿ ಸಭಾಂಗಣದ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.
ಯಡದೊರೆ ಗ್ರಾಮಸ್ಥರು ಚುನಾವಣೆ ಸಂದರ್ಭದಲ್ಲಿ ನನ್ನ ತಂದೆಯವರಿಗೆ ಅತಿ ಹೆಚ್ಚು ಮತ ನೀಡುವ ಮೂಲಕ ಬೆಂಬಲ ನೀಡಿದ್ದಾರೆ ಅದೇ ರೀತಿ ನನಗೂ ಸಹ ಗ್ರಾಮದಲ್ಲಿ ಬೆಂಬಲ ವ್ಯಕ್ತವಾಗಿದೆ ನಾನು ಸಹ ತಮ್ಮ ಪ್ರೀತಿ ಬೆಂಬಲಕ್ಕೆ ಚಿರಋಣಿಯಾಗಿದ್ದೇನೆ ಹಾಗೆ ನಮ್ಮ ತಂದೆ ಯಂತೆ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಮುಂದೆ ಸಹ ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು.
ಮುಂದುವರಿದು ಮಾತನಾಡಿದ ಶಾಸಕರು ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯ ಮನಸ್ಥಿತಿ ಯೊಂದಿಗೆ ಕ್ಷೇತ್ರದ ಇಂಡವಾಳು, ಆರ್.ಪಿ. ಹುಂಡಿ,ಕೂಡ್ಲೂರು,ಡಣಾಯಕನಪುರ,ಹೆಳವರ ಹುಂಡಿ,ಕಿರಗಸೂರು ಗ್ರಾಮಗಳಲ್ಲಿ ಎಸ್.ಟಿ.ಪಿ. ಮತ್ತು ಟಿ.ಎಸ್.ಪಿ.ಯೋಜನೆಯಲ್ಲಿ
ಲೋಕೋಪಯೋಗಿ ಇಲಾಖೆ ಮತ್ತು ನಿರ್ಮಿತಿ ಕೇಂದ್ರ ಕೈಗೆತ್ತಿಕೊಂಡಿರುವ ಸುಮಾರು ಒಂದು ಕೋಟಿಗೂ ಹೆಚ್ಚು ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದ್ದೇನೆ ಇದರ ಜೊತೆಗೆ ಪೂರ್ಣ ಗೊಂಡಿ ರುವ ಡಣಾಯಕನಪುರ ಗ್ರಾಮದ ಮಹರ್ಷಿ ವಾಲ್ಮೀಕಿ ಸಮುದಾಯ ಭವನವನ್ನು ಲೋಕರ್ಪಣೆ ಮಾಡಿದ್ದೇನೆ ಮುಂದೆ ಸಹ ಕ್ಷೇತ್ರಾಧ್ಯಂತ ಅಭಿವೃದ್ಧಿ ಕಾಮಗಾರಿಗಳನ್ನು ಪಕ್ಷದ ಮುಖಂಡರ ಸಲಹೆಯಂತೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ರಮೇಶ್ ಮುದ್ದೇಗೌಡ,ತಾ.ಪಂ.ಸಾಮಾಜೀಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಮೇಶ್, ಗ್ರಾ.ಪಂ. ಉಪಾಧ್ಯಕ್ಷ ಮಸೂರ್,ಸದಸ್ಯ ನಿರಂಜನ್, ಮುಖಂಡರಾದ ಇಂಡವಾಳು ಲೋಕೇಶ್, ಆರ್.ಪಿ.ಹುಂಡಿ ನಾಗರಾಜು ಸೇರಿದಂತೆ ಕಾಂಗ್ರೇಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಅಧಿಕಾರಿಗಳು ಹಾಜರಿದ್ದರು.



Post Comment