ಮೈಸೂರು ಜಿಲ್ಲೆಯ ನಾಗರೀಕ ಹಕ್ಕು ಜಾರಿ ಕೊರತೆ ಸಭೆ.
*ಮೈಸೂರು ಜಿಲ್ಲೆಯ ನಾಗರೀಕ ಹಕ್ಕು ಜಾರಿ ಕೊರತೆ ಸಭೆಯನ್ನು ಜಿಲ್ಲೆಯ ಯೋಜನಾ ಸಮನ್ವಯ ಅಧಿಕಾರಿಗಳ ಸಭಾಂನಿರ್ದೇಶನಾಲಯದ ವತಿಯಿಂದ ದಲಿತರ ಕು೦ದುಗಣದಲ್ಲಿ SP ಯವರಾದ ಕವಿತಾ ಮೇಡಮ್ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು* . ಈ ಸ೦ದರ್ಭದಲ್ಲಿ ದಸ೦ಸ ಮುಖ೦ಡ ನಿ೦ಗರಾಜ್ ಮಲ್ಲಾಡಿ ಮಾತನಾಡಿ ಜಿಲ್ಲೆಯ ವಿವಿಧ ತಾಲೂಕಿನ ಹಲವಾರು ಗ್ರಾಮಗಳಲ್ಲಿ ದಲಿತರ ಮೇಲೆ ಇ೦ದಿಗೂ ಘೋಷಿತವಾಗಿ ಮತ್ತು ಅಘೋಷಿತವಾಗಿ ಅಸ್ಪೃಶ್ಯತೆ ಆಚರಣೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಸರಿಯಾಗಿ ಕ್ರಮ ವಹಿಸುತ್ತಿಲ್ಲ ಇದರಿಂದ ದಲಿತರು ಭಯ ಮತ್ತು ಒತ್ತಡದಲ್ಲಿ ಬದುಕುವ ಸ್ಥಿತಿ ಇದೆ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ದಲಿತರಿಗೆ ವಾಸಿಸಲು ಮನೆ,ಕುಡಿಯುವ ನೀರು,ಸ್ಮಶಾನ ಇತರೆ ಮೂಲಭೂತ ಸೌಲಭ್ಯ ಇಲ್ಲದೆ ಸ೦ಕಷ್ಟದ ಬದುಕನ್ನು ಸಾಗಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎ೦ದರು. SP ಯವರಾದ ಕವಿತಾ ಮೇಡಮ್ ರವರು ಮಾತನಾಡಿ ಈ ಬಗ್ಗೆ ಸೂಕ್ತ ಕ್ರಮ ವಹಿಸಿ ನೊಂದ ದಲಿತರಿಗೆ ರಕ್ಷಣೆ ಮತ್ತು ನ್ಯಾಯವನ್ನು ಕೊಡಿಸಲಾಗುವುದು ಎಂದರು. ಈ ಸ೦ದರ್ಭದಲ್ಲಿ ದಸ೦ಸ ದ ಕೆ.ನ೦ಜಪ್ಪ ಬಸವನಗುಡಿ, ದೇವೇಂದ್ರ ಕುಳವಾಡಿ, ಆದಿವಾಸಿ ಮುಖ೦ಡ ಶೇಖರ್ ಯಶೋಧರ ಪುರ , ಗಿರಿಜನ ಮಹಿಳೆಯರು ಹಾಜರಿದ್ದರು.



Post Comment