ಮೇಡಿಹಾಳ ಮುನಿಆಂಜಿನೇಯಗೆ ಡಾಕ್ಟರೇಟ್ ಪ್ರಶಸ್ತಿ.
ವೇಮಗಲ್ :- ಬಡ ಕುಟುಂಬದಲ್ಲಿ ಹುಟ್ಟಿದ ಇವರು, ವೃತ್ತಿಯಲ್ಲಿ ಗಾರೇ ಮೇಸ್ತ್ರಿಯಾಗಿ, ರೈತನಾಗಿ, ಹತ್ತಾರು ಜನಕ್ಕೆ ಕೆಲಸ ನೀಡುವ ಮುಖಾಂತರ, 2003 ರಲ್ಲಿ ಹೋರಾಟಕ್ಕೆ ಪ್ರವೇಶಿಸಿದ ಇವರು, ಅಂದಿನಿಂದ ಇಂದಿನವರೆಗೂ ಹೋರಾಟ ಮತ್ತು ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.
ಬಡವರ ಸೇವೆಗಾಗಿ ಸದಾ ಮನಮಿಡಿಯುವ ಹೃದಯವಂತ, ನ್ಯಾಯಕ್ಕಾಗಿ ಧರಣಿ ಹೋರಾಟ ಪ್ರತಿಭಟನೆ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಬಡ ಜೀವವೆಂದರೆ ತಪ್ಪಾಗಲಾರದು. ಇಂತಹ ಹುಟ್ಟು ಹೋರಾಟಗಾರನ ಸಮಾಜ ಸೇವೆ ಜೊತೆಗೆ ಹೋರಾಟಗಳನ್ನು ಮಾಡಿಕೊಂಡು ರೈತಪಿ ವರ್ಗಕ್ಕೆ ಸಮನಾಗಿರುವ ಇಂತಹವರನ್ನು ಗುರುತಿಸಿ ಏಷ್ಯಾ ವೇದಿಕ್ ಸಂಸ್ಕೃತಿ ಸಂಶೋಧನಾ ವಿಶ್ವವಿದ್ಯಾಲಯ ಹೊಸೂರು ದಕ್ಷಿಣ ಭಾರತ ಸಂಸ್ಥೆಯ ಮಾಸ್ಟರ್ ವಿ. ಬಾಬು ವಿಜಯನ್ ರವರು ಮೇಡಿಹಾಳ ಮುನಿಆಂಜಿನೇಯರವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ತಮಿಳುನಾಡಿ ಮಾಜಿ ಶಾಸಕ ಮನೋಕರನ್, ಆಘರ್ ಭಾನತ್ ಆಗೋರಿ, ತೆಲಂಗಾಣ ಡಿಜಿಪಿ ಚಿಂತಪಲ್ಲಿ ವಂಶಿ ಮೋಹನ್ ರೆಡ್ಡಿ, ಡಾ. ಸೂರಿ ರಾಜು ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


Post Comment