ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿ ಚಿಕಿತ್ಸೆ ಪಡೆಯುವ ವಯಸ್ಕ ಪಾಶ್ರ್ವವಾಯು ರೋಗಿಗಳಲ್ಲಿ ಉತ್ತಮ ಫಲಿತಾಂಶ
ವಯಸ್ಕರು ಪಾಶ್ರ್ವವಾಯುವಿಗೆ ಒಳಗಾಗುವ ಹೆಚ್ಚಿನ ಸಂಭವನೀಯತೆ ಇರುತ್ತದೆ. ಮುಕ್ಕಾಲು ಪಾಲು ಎಲ್ಲ ಬಗೆಯ ಪಾಶ್ರ್ವವಾಯುಗಳು 65 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಉಂಟಾಗುತ್ತವೆ. ವಯಸ್ಕರಲ್ಲಿ ಪಾಶ್ರ್ವವಾಯುವಿನ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ವಯಸ್ಸು ಹೆಚ್ಚಾದಂತೆ ಪಾಶ್ರ್ವವಾಯುವಿಗೆ ಸಂಬಂಧಿಸಿದ ಮರಣ ಹೆಚ್ಚಾಗುತ್ತದೆ. ಮತ್ತು ಇದು 65 ವರ್ಷಗಳ ವಯಸ್ಸು ಮೀರಿದ ಜನರಲ್ಲಿ ಹೆಚ್ಚಾಗುವ ಸಂಭವನೀಯತೆ ಇರುತ್ತದೆ[1]. ವಯಸ್ಕರಲ್ಲಿ ಇಷೆಮಿಕ್(ರಕ್ತಕೊರತೆಯ) ಪಾಶ್ರ್ವವಾಯು ಎಲ್ಲ ಪಾಶ್ರ್ವವಾಯು ಪ್ರಕರಣಗಳಲ್ಲಿ ಶೇ.80ಕ್ಕಿಂತ ಹೆಚ್ಚಾಗಿದೆ[2].
ತೀವ್ರವಾದ ಇಷೆಮಿಕ್ ಪಾಶ್ರ್ವವಾಯು ಮೆದುಳಿನ ಅಪಧಮನಿಯಲ್ಲಿನ ರಕ್ತದ ಹರಿವು ಹೆಪ್ಪುಗಟ್ಟುವಿಕೆಯಿಂದ ನಿರ್ಬಂಧಕ್ಕೆ ಒಳಗಾದಾಗ(ರಕ್ತದ ಗಟ್ಟಿಯಾಗುವಿಕೆ) ಉಂಟಾಗುತ್ತದೆ. ವಯಸ್ಕರಲ್ಲಿ ತೀವ್ರವಾದ ಇಷೆಮಿಕ್ ಪಾಶ್ರ್ವವಾಯು ಅನಾರೋಗ್ಯ ಮತ್ತು ಮರಣಕ್ಕೆ ಮುಂಚೂಣಿಯ ಕಾರಣವಾಗಿದೆ. ಆದಾಗ್ಯೂ, ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿ ದೊಡ್ಡ ಹೆಪ್ಪುಗಟ್ಟುವಿಕೆ ಒಳಗೊಂಡ ರೋಗಿಗಳಿಗೆ ಪ್ರಮುಖ ಚಿಕಿತ್ಸೆಯಾಗಿ ಹೊರಹೊಮ್ಮಿದೆ. ಮತ್ತು ತೀವ್ರ ಇಷೆಮಿಕ್ ಪಾಶ್ರ್ವವಾಯು ಕುರಿತು ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿಯಲ್ಲಿ ನಡೆಸಲಾದ ಅಧ್ಯಯನಗಳಲ್ಲಿ ಒಂದರಲ್ಲಿ ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿಗೆ ಒಳಗಾಗುವ ವಯಸ್ಕ ರೋಗಿಗಳು ಹಿಂದಿನ ವರ್ಷಗಳಿಗಿಂತ ಉತ್ತಮ ಫಲಿತಾಂಶಗಳನ್ನು ತೋರಿಸಿದ್ದಾರೆ.
“ಹೃದಯ ರೋಗಗಳ ನಂತರ ಪಾಶ್ರ್ವವಾಯು ಮರಣಕ್ಕೆ ದ್ವಿತೀಯ ಅತ್ಯಂತ ಪ್ರಮುಖ ಕಾರಣವಾಗಿದ್ದು ಅದು ಪ್ರತಿ ವರ್ಷ ಜಾಗತಿಕವಾಗಿ 5.5 ಮಿಲಿಯನ್ ಜನರನ್ನು ಕೊಲ್ಲುತ್ತಿದ್ದು ವಯಸ್ಕರು ಹೆಚ್ಚಾಗಿ ಮರಣಕ್ಕೆ ಒಳಗಾಗುತ್ತಿದ್ದಾರೆ. ಆದಾಗ್ಯೂ, ಪ್ರಸ್ತುತ ವಯಸ್ಕರಲ್ಲಿ ತೀವ್ರ ಇಷೆಮಿಕ್ ಪಾಶ್ರ್ವವಾಯು ಚಿಕಿತ್ಸೆಯಾಗಿ ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿ ಕ್ರಮೇಣವಾಗಿ ಮೊದಲ ಸಾಲಿನ ಚಿಕಿತ್ಸೆಯಾಗಿ ಹೊರಹೊಮ್ಮಿದೆ, ಒಂದು ಅಧ್ಯಯನದಲ್ಲಿ ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿ ಚಿಕಿತ್ಸೆ ಪಡೆದ ವಯಸ್ಕರು ಹಿಂದಿಗಿಂತ ಉತ್ತಮ ಫಲಿತಾಂಶಗಳನ್ನು ತೋರಿದ್ದಾರೆ. ಇದರಿಂದ ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿ ಚಿಕಿತ್ಸೆ ಪಡೆದ ವಯಸ್ಕ ರೋಗಿಗಳಲ್ಲಿ ಕ್ರಮೇಣ ಸುಧಾರಣೆ ತೋರಿಸಿದೆ” ಎಂದು ಯಶವಂತಪುರದ ಸ್ಪರ್ಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ನ್ಯೂರೋ-ರೇಡಿಯಾಲಜಿಸ್ಟ್, ಎಚ್ಒಡಿ ಡಾ.ಭಾಸ್ಕರ್ ಎಂ.ವಿ. ಹೇಳಿದರು.
ಕ್ರಮೇಣವಾಗಿ ಸಾಮಾನ್ಯ ವೈದ್ಯಕೀಯ ಚಿಕಿತ್ಸೆಗಳಿಗಿಂತ ತೀವ್ರ ಇಷೆಮಿಕ್ ಪಾಶ್ರ್ವವಾಯುವಿಗೆ ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿ ನಡೆಸುವಲ್ಲಿ ಅತ್ಯಾಧುನಿಕ ಆವಿಷ್ಕಾರಕ ಸಾಧನಗಳ ಅಭಿವೃದ್ಧಿಯಿಂದ ಮಹತ್ತರ ಅನುಕೂಲಗಳನ್ನು ನೀಡಿದೆ. ಹಲವು ಟ್ರಯಲ್ಗಳ ಕ್ಲಿನಿಕಲ್ ಪುರಾವೆಯು ಇತರೆ ಸಂಭವನೀಯ ರೋಗಿಗಳಲ್ಲಿ ಮತ್ತು 80 ವರ್ಷ ಮೇಲ್ಪಟ್ಟ ರೋಗಿಗಳಲ್ಲೂ ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿಯ ಸ್ಥಿರವಾದ ಅನುಕೂಲ ತೋರಿಸಿದೆ.
90 ವರ್ಷ ಮೇಲ್ಪಟ್ಟವರ ಪ್ರಕರಣ ಕುರಿತು ಡಾ.ಭಾಸ್ಕರ್, “92 ವರ್ಷ ವಯಸ್ಸಿನ ರೋಗಿಯನ್ನು ಆಸ್ಪತ್ರೆಗೆ ತರಲಾಯಿತು ಆತನ ಕುಟುಂಬ ಸದಸ್ಯರು ಆತ/ಆಕೆಯ ಮುಖ ಇಳಿಬಿದ್ದಿತ್ತು, ಮಾತು ಕಳೆದಿತ್ತು ಮತ್ತು ದೇಹದ ಬಲಭಾಗದಲ್ಲಿ ದೌರ್ಬಲ್ಯವಿತ್ತು. ಪರೀಕ್ಷಿಸಿದಾಗ, ನಮಗೆ ಮೆದುಳಿನ ಪಾಶ್ರ್ವವಾಯು ಕಂಡುಬಂದಿತು. ರೋಗಿಯು ಈ ಲಕ್ಷಣ ಕಂಡು ಬಂದ 3 ಗಂಟೆಗಳ ನಂತರ ಆಸ್ಪತ್ರೆಗೆ ಬಂದಿದ್ದರು. ಕುಟುಂಬ ಸದಸ್ಯರು ಬೇಗ ಗುಣವಾಗಲಿ ಎಂದು ಬಯಸುತ್ತಿದ್ದರು, ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿ ನಡೆಸಿದ ನಂತರ ಅವರು ಸಹಜತೆಗೆ ಬಂದರು. ಕೆಲ ಸಮಯದ ನಂತರ ರೋಗಿ ಪೂರ್ಣವಾಗಿ ಗುಣವಾಗಿ ಸಹಜ ಜೀವನ ನಡೆಸುವಂತಾದರು. ಈಗ ಅವರು ಆರೋಗ್ಯವಾಗಿದ್ದು ಪ್ರತಿನಿತ್ಯ 2 ಕಿಲೋಮೀಟರ್ ನಡೆಯುತ್ತಾರೆ” ಎಂದರು.
“ಕಡಿಮೆ ತೀವ್ರತೆ ಇರುವ ರೋಗಿಗಳಿಗಿಂತ ಗಂಭೀರ ಪಾಶ್ರ್ವವಾಯುವಿನ ರೋಗಿಗಳಲ್ಲಿ ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿಯ ಪರಿಣಾಮಕಾರಿತ್ವ ಕಂಡುಬಂದಿದೆ. ಬಹಳ ಮುಖ್ಯವಾಗಿ ರೋಗಿಗಳು ಇಮೇಜಿಂಗ್ ಆಧಾರದಲ್ಲಿ ಆಯ್ಕೆ ಮಾಡಿಕೊಂಡಾಗ ಮತ್ತು ವಯಸ್ಕ ಹಾಗೂ ವೇಕ್-ಅಪ್ ಸ್ಟ್ರೋಕ್(ನಿದ್ರೆಗೆ ಮುನ್ನ ಇರದಿದ್ದ ಪಾಶ್ರ್ವವಾಯು ಲಕ್ಷಣಗಳು ಕಾಣಿಸಿಕೊಳ್ಳುವ ಸಂದರ್ಭ) ರೋಗಿಗಳು ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿ ನಂತರ ಅನುಕೂಲಕರ ಫಲಿತಾಂಶ ಪಡೆಯಬಹುದು” ಎಂದರು.
ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿ ವಯಸ್ಕರಿಗೆ ಸುರಕ್ಷಿತ ಮತ್ತು ವೆಚ್ಚ ಉಳಿಸುವ ಚಿಕಿತ್ಸೆಯಾಗಿದೆ. ಆದರೆ ಎಷ್ಟು ಬೇಗನೆ ಚಿಕಿತ್ಸೆ ನೀಡಿದರೆ ಅಷ್ಟು ಕಡಿಮೆ ಮೆದುಳಿನ ಕೋಶಗಳಿಗೆ ಹಾನಿ ಕಡಿಮೆಯಾಗುತ್ತದೆ, ಇದರಿಂದ 4.5 ಗಂಟೆಗಳಲ್ಲಿ ಉತ್ತಮ ರಕ್ತದ ಹರಿವು ಪುನಸ್ಥಾಪನೆಗೊಂಡು ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿಯ ಹೆಚ್ಚು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.
“ಗಂಭೀರ ಪಾಶ್ರ್ವವಾಯುವಿನ ರೋಗಿಗಳಲ್ಲಿ ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿಯ ಉಪಯುಕ್ತತೆ ಹೆಚ್ಚಾಗುತ್ತಿರುವುದರಿಂದ ವೆಚ್ಚ ಉಳಿತಾಯದ ಪರಿಗಣನೆಗಳು ಮೀರಿ ನಾವು ಅದರ ಇತರೆ ಆಯಾಮಗಳನ್ನೂ ನೋಡಬೇಕಾಗಿದೆ. ವಯಸ್ಕ ಜನಸಂಖ್ಯೆಯಲ್ಲಿ ಪಾಶ್ರ್ವವಾಯುವಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ದೂರದ ರೋಗಿಗಳಿಗೆ ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿಯ ಲಭ್ಯತೆ ಪ್ರಸ್ತುತದ ಅಗತ್ಯವಾಗಿದೆ. ಆದಾಗ್ಯೂ, ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿ ಚಿಕಿತ್ಸೆ ಪಡೆಯಲು ತೀರ್ಮಾನವನ್ನು ತರಬೇತಿ ಪಡೆದ ವೈದ್ಯರು ತೆಗೆದುಕೊಳ್ಳಬೇಕು ಮತ್ತು ಪಾಶ್ರ್ವವಾಯುವಿಗೆ ಚಿಕಿತ್ಸೆಯನ್ನು ನ್ಯೂರೋ-ಇಂಟರ್ವೆನ್ಷನಿಸ್ಟ್ ಅವರ ಸಹಯೋಗದೊಂದಿಗೆ ನಡೆಸಬೇಕಾಗುತ್ತದೆ” ಎಂದು ಡಾ.ಭಾಸ್ಕರ್ ಹೇಳಿದರು.



Post Comment