ಮೃತ್ತಿಕೆ ಸಂಗ್ರಹಣೆ ಇಂದು ಮಾಲೂರಿನಿಂದ ಬಂಗಾರಪೇಟೆಗೆ.
ಮಾಲೂರು ನ 7 : ರಾಜ್ಯ ಸರ್ಕಾರ ಅಂತರಾಷ್ಟಿಯ ವಿಮಾನ ನಿಲ್ದಾಣದ ಹತ್ತಿರ ಕೆಂಪೇಗೌಡ ಪ್ರತಿಮೆಯನ್ನು ನಿರ್ಮಾಣ ಮಾಡುವ ಸಲುವಾಗಿ ಥೀಮ್ ಪಾರ್ಕ ನಿರ್ಮಾಣಕ್ಕೆ ಕೆಲವು ಜಿಲ್ಲೆಗಳಿಂದ ಮಣ್ಣು ಸಂಗ್ರಹ ಮಾಡುವ ಸಲುವಾಗಿ ಮಾಲೂರು ತಾಲ್ಲೂಕಿಗೆ ಬಂಗಾರಪೇಟೆಯ ಮೂಲಕ ಟೇಕಲ್ ಹೋಬಳಿಗೆ ಕೆಂಪೇಗೌಡರ ರಥ ಆಗಮಿಸಿದಾಗ ಪೂರ್ಣ ಕುಂಭ ಕಲಶಗಳ ಸ್ವಾಗತದಿಂದ ಬರಮಾಡಿಕೊಳ್ಳುವ ವಿಚಾರದಲ್ಲಿ ಬಿಜೆಪಿ ಟಿಕೆಟ್ ಅಕ್ಷಾಂಕ್ಷಿಗಳಾದ ಮಾಜಿ ಶಾಸಕ ಕೆ.ಎಸ್ ಮಂಜುನಾಥ್ ಗೌಡ ಹಾಗೂ ಹೂಡಿ ವಿಜಯ್ ಕುಮಾರ್ ಇವರ ಬೆಂಬಲಿಗರ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಸಂಸದ ಎಸ್. ಮುನಿಸ್ವಾಮಿ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇಬ್ಬರು ಮುಖಂಡರುಗಳನ್ನು ಸಮಾಧಾನ ಪಡಿಸಲು ಹರಸಾಹಸ ಪಡಬೇಕಾಯಿತು.
ರಾಜ್ಯ ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ಮಾಲೂರು ತಾಲ್ಲೂಕಿಗೆ ಕೆಂಪೇಗೌಡರ ರಥಯಾತ್ರೆ ಬಂಗಾರಪೇಟೆಯಿoದ ಪಾರ್ಶಗಾನಹಳ್ಳಿಯ ಮುಖಾಂತರ ಟೇಕಲ್ ಹೋಬಳಿಯ ಕೆ.ಜಿ ಹಳ್ಳಿ ಗ್ರಾಮಕ್ಕೆ ಆಗಮಿಸಿತು, ಬಿಜೆಪಿಯ ಹೂಡಿ ವಿಜಿಕುಮಾರ್ ಹಾಗೂ ಆರ್.ಪ್ರಭಾಕರ್ ಇವರ ಬೆಂಬಲಿಗರು ರಥವನ್ನು ಪೂರ್ಣ ಕುಂಭ ಹೊತ್ತ ಮಹಿಳೆಯರಿಂದ ಸ್ವಾಗತ ಕೋರುವವರೆಗೆ ರಥಯಾತ್ರೆ ಹೋಗುವುದು ಬೇಡ ಎಂದು ಹೇಳಿ ಪಟ್ಟು ಹಿಡಿದರು. ಅಲ್ಲೇ ಇದ್ದ ಸಂಸದರು ಈಗಲೇ ಕಾರ್ಯಕ್ರಮಕ್ಕೆ ತಡವಾಗಿದೆ ಕೆಂಪೇಗೌಡರ ರಥ ತಾಲ್ಲೂಕಿನಾಧ್ಯಂತ ಸಂಚರಿಸಬೇಕಾಗಿದೆ ಎಂದು ತಿಳಿಸಿದರು ಹೂಡಿ ವಿಜಿಕುಮಾರ್ ಬೆಂಬಲಿಗರನ್ನು ಸಮಾಧಾನ ಮಾಡಿದರು ಪಟ್ಟು ಬಿಡದೇ ರಥಕ್ಕೆ ಅಡ್ಡಿಯಾಗಿದ್ದರು, ಕಾರ್ಯಕ್ರಮದ ಸ್ಥಳದಿಂದ ಮಾಜಿ ಶಾಸಕ ಕೆ.ಎಸ್ ಮಂಜುನಾಥ ಗೌಡ ಆಗಮಿಸಿ ನಾಡಪ್ರಭು ಕೆಂಪೇಗೌಡರ ರಥ ಯಾತ್ರೆಯೂ ತಾಲ್ಲೂಕಿನಾಧ್ಯಂತ ಸಂಚರಿಸಬೇಕಾಗಿದೆ ಈಗಾಗಲೇ ತಡವಾಗಿರುವುದರಿಂದ ಪಕ್ಷಾತೀತವಾಗಿ ರಥಕ್ಕೆ ಸ್ವಾಗತ ಕೋರಣ ಅದನ್ನು ಬಿಟ್ಟು ಈ ತರಹ ರಥಕ್ಕೆ ಅಡ್ಡಿ ಪಡಿಸುವುದರಿಂದ ಅಗೌರವ ತೋರುವಂತಾಗುತ್ತದೆ ಎಂದು ಹೇಳಿದರು, ಇಬ್ಬರ ಬೆಂಬಲಿಗರ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಇದೇ ಸಮಯಕ್ಕೆ ಮಾಜಿ ಶಾಸಕ ಕೆ.ಎಸ್ ಮಂಜುನಾಥ ಗೌಡ ಕೆಂಪೇಗೌಡರ ರಥಕ್ಕೆ ಹೂಡಿ ವಿಜಿಯ್ ಕುಮಾರ್ ರವರ ಬೆಂಬಲಿಗರು ಅಡ್ಡಿ ಪಡಿಸುತ್ತಿದ್ದನ್ನು ನೋಡಿ ಬೆಂಬಲಿಗರನ್ನು ಎಳೆದು ಹಾಕಿ ರಥಯಾತ್ರೆಯ ರಥದ ಚಾಲಕನನ್ನು ಇಳಿಸಿ ಅವರೇ ಸ್ವತಃ ಚಾಲನೆ ಮಾಡುವ ಸಂದರ್ಭದಲ್ಲಿ ಹೂಡಿ ವಿಜಯ್ ಕುಮಾರ್ ಬೆಂಬಲಿಗರು ಅಡ್ಡಿಪಡಿಸಿ ರಸ್ತೆಯಲ್ಲೆ ಪಟ್ಟು ಬಿಡದೆ ಕುಳಿತರು, ಸಂಸದ ಎಸ್. ಮುನಿಸ್ವಾಮಿ ಮತ್ತು ಪೊಲೀಸ್ ಇಲಾಖೆ ಹೂಡಿ ವಿಜಯ್ ಕುಮಾರ್ ಹಾಗೂ ಮಾಜಿ ಶಾಸಕ ಕೆ.ಎಸ್ ಮಂಜುನಾಥ ಗೌಡ ಇಬ್ಬರ ಬಣದ ಕಾರ್ಯಕರ್ತರ ಬೆಂಬಲಿಗರನ್ನು ತಿಳಿಗೊಳಿಸಲು ಹರಸಾಹಸವೇ ಪಡಬೇಕಾಯಿತು.
ಮಾಜಿ ಶಾಸಕ ಕೆ.ಎಸ್ ಮಂಜುನಾಥ್ ಗೌಡ ಮಾತನಾಡಿ ಕೆಂಪೇಗೌಡ ರಥಯಾತ್ರೆಯು ನಾವುಗಳು ಪಕ್ಷಾತೀತವಾಗಿ ಸರ್ಕಾರಿ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ಮೊದಲೇ ತಿಳಿಸಲಾಗಿತ್ತು, ಸ್ವಾಭಿಮಾನದ ಸಂಕೇತ ವಾಗಿರುವ ರಥಯಾತ್ರೆಗೆ ಕೆಲವು ವ್ಯಕ್ತಿಗಳು ರಥಕ್ಕೆ ಅಡ್ಡಿ ಪಡಿಸಿ ಅವಮಾನ ಮಾಡಲಾಗಿದೆ ಅತಂಹ ವ್ಯಕ್ತಿಗಳು ಹಳ್ಳಿಗಳಿಗೆ ಬಂದಾಗ ನೀವುಗಳು ಬುದ್ಧಿಕಲಿಸಬೇಕು, ಈ ಕಾರ್ಯಕ್ರಮದ ಬಗ್ಗೆ ಕೆಲವು ಬಿಜೆಪಿ ವ್ಯಕಿಗಳು ಅಡ್ಡಿಪಡಿಸಿರುವುದರಿಂದ ರಥಕ್ಕೆ ಅವಮಾನ ಮಾಡಿದಂತಾಗಿ. ಇದೇ ರೀತಿ ಮುಂದುವರೆದರೆ ತಾಲ್ಲೂಕು ದಂಡಾಧಿಕಾರಿಗಳು ತಪ್ಪಿತ್ಥಸರ ವಿರುದ್ಧ ದೂರು ದಾಖಲಿಸಿ ಕಂಬಿ ಎಣಿಸುವಂತೆ ಮಾಡಬೇಕು, ಈ ದಿನ ನಡೆದಿರುವ ಘಟನೆಯನ್ನು ಎಲ್ಲಾ ಬಿಜೆಪಿಯ ಮುಖಂಡರ ಗಮನಕ್ಕೆ ತರುತ್ತೇನೆ, ಇಂತಹ ತರಲೆಗಳನ್ನು ಮಾಡುವವರಿಗೆ ಅವಕಾಶ ಮಾಡಿಕೊಡಬೇಡಿ, ಮಾಲೂರು ಕ್ಷೇತ್ರದಲ್ಲಿ ಇಂತಹ ಗಲೀಜು ಕೆಲಸ ಮಾಡುತ್ತಾರೆ ಅಂತಲೇ ನಾನು ಬೇಡ ಎಂದು ಹೇಳೀದ್ದು, ಅದರೇ ನನ್ನ ಮಾತು ಕೇಳಲಿಲ್ಲ, ಕೆಂಪೇಗೌಡರ ರಥಯಾತ್ರೆಯ ರಥವನ್ನು ಯಾವುದೇ ಅಗೌರವ ತರದೇ ನಮ್ಮ ತಾಲ್ಲೂಕಿನಲ್ಲಿ ಸಂಚರಿಸಿ ಬೆಂಗಳೂರಿಗೆ ತಲುಪಿಸುವ ಜವಾಬ್ದಾರಿಯನ್ನು ತಾಲ್ಲೂಕು ಆಡಳಿತ ಮಾಡಬೇಕಾಗಿದೆ ಎಂದು ಹೇಳಿದರು.
ಹೂಡಿ ವಿಜಯ್ ಕುಮಾರ್ ಮಾತನಾಡಿ ಬಂಗಾರ ಪೇಟೆಯಿಂದ ಆಗಮಿಸಿದ್ದ ಕೆಂಪೇಗೌಡರ ರಥವನ್ನು ಪೂರ್ಣ ಕುಂಭ ಕಲಶಗಳೊಂದಿಗೆ ಸ್ವಾಗತಿಸಬೇಕೆಂದು ನಾವುಗಳು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು. ಇದು ಯಾವುದೇ ಕೆಲವು ವ್ಯಕ್ತಿಗಳಿಗೆ ಸಿಮೀತವಾದ ಕಾರ್ಯಕ್ರಮವಲ್ಲ ಇದು ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ಇಲ್ಲಿ ಎಲ್ಲರು ಪಕ್ಷಾತೀತವಾಗಿ ರಥವನ್ನು ಸ್ವಾಗತ ಮಾಡಿಕೊಳ್ಳೋಣ ಎಂದು ತಿಳಿಸಿದರು, ಇಲ್ಲಿನ ಪೂರ್ಣ ಕುಂಭ ಕಲಶಗಳನ್ನು ಹೊತ್ತ ಮಹಿಳೆಯರನ್ನು ಕೆ.ಎಸ್ ಮಂಜುನಾಥ್ ಗೌಡ ಹಾಗೂ ಬೆಂಬಲಿಗರು ಮತ್ತು ಕಾರ್ಯಕರ್ತರ ಅವರ ವರ್ತನೆಯಿಂದ ಕೆಂಪೇಗೌಡರಿಗೆ ಅಪಮಾನ ಮಾಡಿದ್ದಾರೆ. ಕೆಂಪೇಗೌಡ ರಥದ ಚಾಲಕನನ್ನು ಎಳೆದು ಹಾಕಿ ಅವರೇ ವಾಹನವನ್ನು ಚಾಲನೆ ಮಾಡಲು ಹೋಗಿ ನಮ್ಮ ಬೆಂಬಲಿಗರ ಮೇಲೆ ಬಿಡಲು ಹೋಗಿದ್ದಾರೆ. ಏಕಾಏಕಿ ನಮ್ಮ ಬೆಂಬಲಿಗರನ್ನು ಎಳೆದು ನಮ್ಮ ಬೆಂಬಲಿಗ ಕೆಸರಗೆರೆ ಗೋಪಾಲ್ ಗೌಡ ರವರ ಕಪಾಳಕ್ಕೆ ಹೊಡೆದಿದ್ದಾರೆ. ತಾಲ್ಲೂಕಿನಲ್ಲಿ ಬಿಜೆಪಿಯ ಪಕ್ಷದಲ್ಲಿ ಇಂತಹ ಸಂಸ್ಕೃತಿ ಇಲ್ಲ. ಇಂತಹ ವ್ಯಕ್ತಿಗಳ ಬಗ್ಗೆ ಬಿಜೆಪಿಯ ಹೈಕಮಾಂಡ್ಗೆ ತಿಳಿಸಲಾಗುವುದೆಂದರು.
ಈ ಸಂಧರ್ಭದಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ, ತಾ.ಪಂ ಮುನಿರಾಜು, ತಾ.ಬಿಜೆಪಿ ಅಧ್ಯಕ್ಷ ಪುರ ನಾರಾಯಣಸ್ವಾಮಿ, ಮುಖಂಡರಾದ ಟಿ.ಬಿ ಕೃಷ್ಣಪ್ಪ, ನೂಟವೆ ವೆಂಕಟೇಶಗೌಡ, ಬಿ.ಆರ್ ವೆಂಕಟೇಶ್, ಸೋಮಣ್ಣ, ಎಸ್. ನಾರಾಯಣಸ್ವಾಮಿ, ಚಂದ್ರಶೇಖರ್, ಹರೀಶ್ ಗೌಡ, ಸೇರಿದಂತೆ ಅಪಾರ ಬಿಜೆಪಿ ಮುಖಂಡರು ಕಾರ್ಯಕರ್ತರು, ಬೆಂಬಲಿಗರು ಸೇರಿದ್ದರು.


Post Comment