Loading Now

ಮಿನಿ ಪಾಕಿಸ್ತಾನ್ ಹೇಳಿಕೆಯನ್ನು ಖಂಡಿಸಿ ದೇಶದ್ರೋಹಿಗಳನ್ನು ಬಂಧಿಸಿ.

ನಂಜನಗೂಡು 06 : ತಾಲೂಕಿನ ದೊಡ್ಡಕೌಲಂದೆ ಗ್ರಾಮದಲ್ಲಿ ಮಿನಿ ಪಾಕಿಸ್ತಾನ್ ಹೇಳಿಕೆಯನ್ನು ಖಂಡಿಸಿ ಹಾಗೂ ಹೇಳಿಕೆ ನೀಡಿರುವ ದೇಶದ್ರೋಹಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಹುಲ್ಲಹಳ್ಳಿವೃತ್ತದ ಬಳಿ ಜಮಾವಣೆಗೊಂಡ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದೇಶದ್ರೋಹಿಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ. ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಯುವ ಬ್ರಿಗೇಡ್‍ನ ದಕ್ಷಿಣ ವಿಭಾಗೀಯ ಸಂಚಾಲಕ ಸಿ.ಚಂದ್ರಶೇಖರ್ ಮಾತನಾಡಿ ಭಾರತದ ಶಾಂತಿ ಕದಡುವ ಕೆಲಸವನ್ನು ಕೌಲಂದೆ ಮುಸಲ್ಮಾನರು ಮಾಡುತ್ತಿದ್ದಾರೆ. ಮುಸ್ಲಿಮರು ಕಡಿಮೆ ಇರುವ ಕಡೆಗಳಲ್ಲಿ ದೇಶ ಭಕ್ತರೆಂದು ಹೇಳುತ್ತಾರೆ. ಜನಸಂಖ್ಯೆ ಹೆಚ್ಚಿರುವ ಕಡೆ ಮಿನಿ ಪಾಕಿಸ್ತಾನವೆಂದು ಹೇಳುತ್ತಾರೆ. ಆದ್ದರಿಂದ ಪಾಕಿಸ್ತಾನದಿಂದ ಬಂದಿರುವ ಭಯೋತ್ಪಾದಕರು ಇದ್ದಾರೆಯೇ ಎಂಬುದನ್ನು ತನಿಖೆ ನಡೆಸಬೇಕಿದೆ. ಕೆಲವರು ಜಾತ್ಯಾತೀತರೆಂದು ಸೋಗು ಹಾಕಿಕೊಂಡು ಶಾಂತಿ ಕದಡಿ ಗಲಾಟೆ ನಡೆಸುತ್ತಿದ್ದಾರೆ. ಈ ಘಟನೆ ಅವರ ವಿಕೃತ ಮನಸ್ಥಿತಿಯನ್ನು ತೋರುತ್ತದೆ. ಇದು ಖಂಡನೀಯ.
ರಂಜಾನ್ ಪ್ರಾರ್ಥನೆ ಆಯೋಜಿಸಿರುವ ಆಯೋಜಕರು ಈ ಘಟನೆ ಹೊಣೆ ಹೊತ್ತು ಕ್ಷಮೆಯಾಚಿಸಬೇಕು. ವೀಡಿಯೋ ಮಾಡಿರುವ ವ್ಯಕ್ತಿಯನ್ನು ಬಂಧಿಸಿ ದೇಶದ್ರೋಹಿ ಕೇಸ್ ದಾಖಲಿಸಿ ಕಾನೂನುಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಹಿಂದೂ ಪರ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಕೌಲಂದೆ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಖಾದಿ ಗ್ರಾಮೋದ್ಯೋಗ ಮಂಡಲಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ, ಎಪಿಎಂಸಿ ಸದಸ್ಯ ಗುರುಸ್ವಾಮಿ, ಮಧುರಾಜ್, ಉಮೇಶ್ ಮೋದಿ, ಜಯಕುಮಾರ್, ಅನಂತ್, ಭಾಗ್ಯರಾಜ್, ಅಶೋಕ್, ಕಿರಣ್, ನಂದಕುಮಾರ್, ಭಾನುಪ್ರಕಾಶ್, ಅರುಣ, ನಿತಿನ್, ಸುನೀಲ್, ಮಾದೇಶ, ಸುರೇಶ್, ನಿರಂಜನ, ಸತೀಶ್, ಯಶ್ವವಂತ್ ಪ್ರಜ್ವಲ್, ಮಹದೇವು ಸೇರಿದಂತೆ ನೂರಾರು ಹಿಂದುಪರ ಕಾರ್ಯಕರ್ತರು ಇದ್ದರು.

Post Comment

You May Have Missed