ಮಹಾತ್ಮ ಗಾಂಧೀಜಿ ರವರ ರೀತಿ ನಾವಾಗಲು ಸಾದ್ಯವಿಲ್ಲ ಆದರೆ ಅವರ ಆದರ್ಶಗಳನ್ನು ಪಾಲಿಸಿ ನಮ್ಮ ಕೈಯಲ್ಲಾದ ಅಳಿಲು ಸೇವೆ ಮಾಡೋಣ ಎಂದು ಹಿರಿಯ ಸಿವಿಲ್ ನ್ಯಾಯಧೀಶ ಮಹವೀರ ಮ. ಕರೆಣ್ಣವರ ಅಭಿಮತ.
ತಿ.ನರಸೀಪುರ. ಅ.02:- ಮಹಾತ್ಮ ಗಾಂಧೀಜಿ ರವರ ರೀತಿ ನಾವಾಗಲು ಸಾದ್ಯವಿಲ್ಲ ಆದರೆ ಅವರ ಆದರ್ಶಗಳನ್ನು ಪಾಲಿಸಿ ನಮ್ಮ ಕೈಯಲ್ಲಾದ ಅಳಿಲು ಸೇವೆ ಮಾಡೋಣ ಎಂದು ಹಿರಿಯ ಸಿವಿಲ್ ನ್ಯಾಯಧೀಶ ಮಹವೀರ ಮ. ಕರೆಣ್ಣವರ ಅಭಿಮತ ವ್ಯಕ್ತಪಡಿಸಿದರು.
ಕಾನೂನು ಸೇವ ಸಮಿತಿ,ವಕೀಲರ ಸಂಘ ಅಭಿಯೋಜನ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಅಯೋಜನೆ ಮಾಡಲಾಗಿದ್ದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ಉನ್ನತ ಕಾನೂನು ಪದವಿಯನ್ನು ಹೊಂದಿದ
ಮಹಾತ್ಮ ಗಾಂಧೀಜಿ ರವರು ವಕೀಲ ವೃತ್ತಿ ಮಾಡಿದ್ದರೆ ಕೋಟಿ ಕೋಟಿ ಸಂಪಾದನೆ ಮಾಡಿ ವಿಲಾಸಿ ಜೀವನ ಮಾಡಬಹುದಾಗಿತ್ತು ಆದರೆ ಅದೇಲ್ಲವನ್ನು ತ್ಯಾಗ ಮಾಡಿ ದೇಶಕ್ಕಾಗಿ ಪಂಜೆ ದರಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ತ್ಯಾಗಮಯಿ ಇವರು ಇಂತಹ ಮಹಾನ್
ಚೇತನನ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಎಂದರು.
ಮಹಾತ್ಮ ಗಾಂಧಿಜೀ ಯವರು ಪ್ರಮುಖವಾಗಿ ಎರಡು ಧ್ಯೇಯಗಳನ್ನು ಹೊಂದಿದ್ದರು ಅದರಲ್ಲಿ ಸ್ವಚ್ಚತೆ ಮತ್ತು ಸಮಾನತೆ ಎಂಬುದು ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನತೆ ಮತ್ತು ನ್ಯಾಯ ಸಿಗಬೇಕು ಎಂಬ ನಿಲುವಾಗಿತ್ತು ಹಾಗಾಗಿ ನಮ್ಮ ನ್ಯಾಯಲಯದ ವತಿಯಿಂದ
ಒಂದು ತಿಂಗಳವರಗೆ ಪ್ರತಿಯೊಬ್ಬರಿಗೂ ನ್ಯಾಯ ಕೂಡಿವ ಕೆಲಸವನ್ನು ಈ ದಿನ ದಿಂದಲೇ ಪ್ರಾರಂಭ ಮಾಡುತ್ತಿದ್ದೇವೆ ಎಂದರು.

ಸಿವಿಲ್ ನ್ಯಾಯಧೀಶ ಜೆ.ಸಿ.ಪ್ರಶಾಂತ್ ಮತನಾಡಿ ಅಕ್ಟೊಬರ್ 02 ಮಹಾತ್ಮ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರೀಯ ಜನ್ಮದಿನ ಇದರ ಜೊತೆಗೆ ಕಳೆದ ಐದು ವರ್ಷಗಳಿಂದ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಸೇರಿದೆ ಹಾಗಾಗಿ ಈ ಮೂರು ಕಾರ್ಯಕ್ರಮಗಳು ಬಹು ಅರ್ಥ ಪೂರ್ಣವಾಗಿದೆ ಎಂದರು.
ದೇಶ ಬದಲಾವಣೆಯಾಗಬೇಕಾದರೆ ಮೊದಲು ನಾನು ಬದಲಾಗಬೇಕು ಎಂಬುದು ಗಾಂಧೀಜಿ ರವರ ನಿಲುವಾಗಿತ್ತು ಏಕೆಂದರೆ ನನ್ನ ಸುತ್ತ ಮುತ್ತಲಿನ ಪ್ರದೇಶದ ವಾತಾವರಣ ಕಲುಷಿತವಾಗಿದೆ ಎಂದರೆ ಮೊದಲು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳತ್ತ ಬೊಟ್ಟು ಮಾಡಿ ತೋರಿಸುತ್ತೇವೆ ಇದು ಸರಿಯಾದ ಕ್ರಮವಲ್ಲ ಮೊದಲು ನಮ್ಮ ಕರ್ತವ್ಯವನ್ನ ಅರಿಯವೇಕು ತನ್ನ ವ್ಯಾಪ್ತಿಯ ವಾತವರಣವನ್ನು ಕಲುಷಿತವಾಗದಂತೆ ಪ್ರಜ್ಞೆ ಮೇರೆಯಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ನ್ಯಾಯಾಲಯದ ಆವರಣದಿಂದ ವಿದ್ಯೋದಯ ಕಾಲೇಜ್ ವೃತ್ತದ ವರಗೆ ಶಿಕ್ಷಣ ,ಕಾನೂನು ಮತ್ತು ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಜಾಥವನ್ನು ನೆಡಸಲಾಯಿತು.
ಈ ಸಂದರ್ಭದಲ್ಲಿ ಜೆ.ಎಂ.ಎಫ್.ಸಿ.ಹೆಚ್ಚುವರಿ ನ್ಯಾಯಾಧೀಶೆ ಅನಿತಾ ಕುಮಾರಿ, ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹದೇವ ಸ್ವಾಮಿ, ಸರ್ಕಾರಿ ಅಭಿಯೋಜಕಿ ಸುಮಿಯಾ ಬಾನು ,ಅನಿತಾ , ಉಪಾಧ್ಯಕ್ಷ ನಾಗರಾಜಸ್ವಾಮಿ ಕಾರ್ಯದರ್ಶಿ ಸೋಮಣ್ಣ ವಕೀಲರುಗಳಾದ ಮಾದಪ್ಪ, ಶಂಭುಲಿಂಗಸ್ವಾಮಿ, ಪಾಲಕ್ಷಮೂರ್ತಿ, ಜ್ಞಾನೇಂದ್ರಮೂರ್ತಿ, ಉಮೇಶ್,ಸಿದ್ದರಾಜು , ಮತ್ತಿತರರು ಹಾಜರಿದ್ದರು.



Post Comment