Loading Now

ಮನೆ ಕಳೆದುಕೊಂಡು ಬೀದಿ ಪಾಲಾಗಿರುವ ಘಟನೆ.

ಹನೂರು ಜು 26: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕೆ.ಮಣಿ ಎಂಬಾತನ ದೌರ್ಜನ್ಯ ದಬ್ಬಾಳಿಕೆಗೆ ಅಮಾಯಕ ಎರಡು ದಲಿತ ಕುಟುಂಬಗಳು ರತ್ನಬಾಯಿ ಮತ್ತು ಶಂಕರ ನಾಯಕ ದಂಪತಿಗಳು ಮತ್ತು ಭೀಮಾರಾಯ್ ಮನೆ ಕಳೆದುಕೊಂಡು ಬೀದಿ ಪಾಲಾಗಿರುವ ಘಟನೆ ಜರುಗಿದೆ.

ರತ್ನಬಾಯಿ ಮತ್ತು ಶಂಕರ್ನಾಯಕ ದಂಪತಿಗಳು ಸುಮಾರೂರ್ 25 ವರ್ಷಗಳಿಂದಲೂ ಮಲೈ ಮಹದೇಶ್ವರ ಬೆಟ್ಟ ಗ್ರಾಮದ ಸರ್ವೆ ನಂಬರ್ 59 ರಲ್ಲಿ ವಾಸದ ಮನೆ ಕಟ್ಟಿಕೊಂಡು ವಾಸವಾಗಿರುತ್ತಾರೆ.

ಮಹದೇಶ್ವರ ಬೆಟ್ಟದ ಕೆ. ಮಣಿ ಬಿನ್ ಕಬ್ಬಾಲಪ್ಪ ಎಂಬಾತ ತನ್ನ ಹಣ ಬಲ ದಬ್ಬಾಳಿಕೆ ದೌರ್ಜನದಿಂದ ಅಮಾಯಕ ರತ್ನಬಾಯಿ ಅವರ ಜಮೀನು ಮನೆಯನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡು ಈ ಜಾಗ ನನಗೆ ಸೇರಿದ್ದು ಎಂದು ದಬ್ಬಾಳಿಕೆ ಮೆರೆದಿದ್ದಾನೆ.

ಮಣಿಯ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ರತ್ನಬಾಯಿ ಮತ್ತು ಶಂಕರ ನಾಯಕ ದಂಪತಿಗಳು ದೂರು ನೀಡಿದ್ದರು. ಈ ಬಗ್ಗೆ ಪೊಲೀಸ ಅಧಿಕಾರಿಗಳು ಮಣಿ ಎಂಬಾತನಿಗೆ ಎಚ್ಚರಿಕೆಯನ್ನು ಸಹ ನೀಡಿದ್ದರು. ಅಧಿಕಾರಿಗಳ ಎಚ್ಚರಿಕೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಿದೆ ತನ್ನ ದರ್ಪ ಮೆರೆದಿದ್ದಾನೆ.

ರತ್ನಬಾಯಿ ಮತ್ತು ಶಂಕರ ನಾಯಕ ದಂಪತಿಗಳು ಇರುವ ಈ ಜಮೀನು ತಮಿಳುನಾಡಿನ ಪಳನಿಸ್ವಾಮಿ ಎಂಬ ವ್ಯೆಕ್ತಿ ಮಾದಯ್ಯ ಮತ್ತು ಮಾದಯ್ಯನ ವಾರಸುದಾರರಿಗೆ ತಿಳಿಯದಂತೆ ಈ ಜಮೀನಿನ ಖಾತೆಯನ್ನು ತನ್ನ ಹೆಸರಿಗೆ ಅಕ್ರವಾಗಿ ಬದಲಾವಣೆ ಮಾಡಿಸಿಕೊಂಡು ತಮಿಳುನಾಡಿನಲ್ಲಿ ಮರಣ ಹೊಂದಿದ್ದು, ತದನಂತರ ದೀಪ ಎಂಬುವಳು ಈ ಜಮೀನನ್ನು ತನ್ನ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡು ಕೆ ಮಣಿ ಬಿನ್ ಕಬ್ಬಾಲಪ್ಪ ಎಬುವರ ಹೆಸರಿನಲ್ಲಿ ಒಂದು ನೊಂದಾಯಿತ ಕ್ರಯಪತ್ರವನ್ನು ಸೃಷ್ಟಿಮಾಡಿರುತ್ತಾರೆ.

ಕೆ ಮಣಿ ಬಿನ್ ಕಬ್ಬಾಲಪ್ಪ ಎಂಬವರು ತನ್ನ ಹೆಸರಿನಲ್ಲಿ ಸೃಷ್ಟಿಯಾಗಿರುವ ಈ ಸೃಷ್ಟಿತ ಕ್ರಯಪತ್ರ ಮೂಲಕ ತನ್ನ ಹೆಸರಿಗೆ ಖಾತೆ ಬದಲಾವಣೆ ಮಾಡಿಸಿಕೊಂಡು ಈ ಜಮೀನಲ್ಲಿ ವಾಸದ ಮನೆ ಕಟ್ಟಿಕೊಂಡು ಸುಮಾರು 25 ವರ್ಷಗಳಿಂದ ಈ ಜಮೀನಲ್ಲಿ ಸ್ವಾಧೀನದಲ್ಲಿರುವ ಶಂಕರ್ನಾಯಕ ದಂಪತಿಗಳನ್ನು ಈ ಜಮೀನಿನಿಂದ ಒಕ್ಕಲೆಬ್ಬಿಸುವ ದುರುದ್ದೇಶದಿಂದ ಕೆ ಮಣಿ ಎಬುವರು ಈ ದಂಪತಿಗಳ ವಿರುದ್ಧ ಕೊಳ್ಳೇಗಾಲದ ಅಪರ ಸಿವಿಲ್ ನ್ಯಾಯಾದೀಶರ ನ್ಯಾಯಾಲಯದಲ್ಲಿ ಅಸಲು ದಾವೆ ಸಂಖ್ಯೆ 25/2022 ರೀತ್ಯ ಸಿವಿಲ್ ದಾವೆ ಹೂಡಿ ಈ ದಾವೆಯು ಘನ ನ್ಯಾಯಾಲದಲ್ಲಿ ವಿಚಾರಣೆಯಲ್ಲಿದೆ.

ಕೆ ಮಣಿ ಸಿವಿಲ್ ಕೇಸ್ ಧಾಖಲಿಸಿ ಕಾನೂನು ಬಾಹಿರವಾಗಿ ಶಂಕರ ನಾಯಕ ದಂಪತಿಗಳು ವಾಸವಿರುವ ಸ್ಥಳಕ್ಕೆ ಅತಿಕ್ರಮಿಸಿ ಇವರ ಸ್ವಾಧೀನಾನುಭವಕ್ಕೆ ಅಡ್ಡಿಪಡಿಸಲು ಮುಂದಾದಾಗ ಶಂಕರ್ ನಾಯಕ ದಂಪತಿಗಳು ಕೆ ಮಣಿ ಎಂಬುವರ ದೌರ್ಜನ್ಯದ ವಿರುದ್ಧ ಮಲೈ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆೆ

ನಂತರ ಠಾಣಾಧಿಕಾರಿಗಳು ಈ ದಂಪತಿಗಳಿಗೆ ತೊಂದರೆ ನೀಡದಂತೆ ಕೆ ಮಣಿರವರಿಗೆ ಎಚ್ಚರಿಕೆ ನೀಡಿರುತ್ತಾರೆ. ಈಗಿದ್ದರು ಸಹ ಕೆ ಮಣಿ ದಬ್ಬಾಳಿಕೆಯಿಂದ ಇಂದು ಅಂದರೆ ದಿನಾಂಕ 25/07/2022 ರ ಬೆಳಿಗ್ಗೆ 9-30 ಘಂಟೆ ಸಮಯದಲ್ಲಿ ಶಂಕರ್ನಾಯಕ ರವರ ಮನೆಯ ಸ್ಥಳಕ್ಕೆ ಅತಿಕ್ರಮಿಸಿ ಎಅಃ ಯಿಂದ ಮನೆಯ ಕಟ್ಟಡವನ್ನು ನೆಲಸಮ ಮಾಡಲು ಮುಂದಾಗಿ ಸ್ವಲ್ಪ ಕಟ್ಟಡವನ್ನು ಕೆಡವಿರುತ್ತಾರೆ.

ಕೂಡಲೇ ಶಂಕರ್ ನಾಯಕ ದಂಪತಿಗಳು ಪೊಲೀಸ್ ರಿಗೆ ಮತ್ತು ಜಿಲ್ಲಾ ಪೋಲಿಷ್ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಮುಖೆನ ದೂರುನೀಡಿ ನಮ್ಮ ಸ್ವತ್ತಿಗೆ ಸೂಕ್ತ ಬಂದೂಬಸ್ತ್ ಮಾಡಿಕೊಟ್ಟು ನ್ಯಾಯದೊರಕಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Post Comment

You May Have Missed