Loading Now

ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ವ್ಯಾಕ್ಸಿನೇಷನ್ ಅತ್ಯುತ್ತಮ ಪರಿಹಾರ .

ಬೆಂಗಳೂರು: 5/5/2022, ವರ್ಲ್ಡ್ ಇಮ್ಯುನೈಸೇಶನ್ ವೀಕ್ 2022 ಥೀಮ್ ಎಲ್ಲರಿಗೂ ದೀರ್ಘಾವಧಿಯ ಬದುಕನ್ನು ಕಟ್ಟಿಕೊಡುವುದಾಗಿದೆ. ಎಲ್ಲಾ ವಯಸ್ಸಿನವರು ವ್ಯಾಕ್ಸಿನೇಷನ್ ಬಳಸುವ ಮೂಲಕ ರೋಗಗಳಿಂದ ರಕ್ಷಿಸಿಕೊಳ್ಳುವುದನ್ನು ಉತ್ತೇಜಿಸುತ್ತದೆ. ರೋಗನಿರೋಧಕ ಸಪ್ತಾಹದ ಗುರಿ ನಾಗರಿಕರನ್ನು ರಕ್ಷಿಸುವುದು ಮತ್ತು ಲಸಿಕೆಗಳಿಂದ ತಡೆಗಟ್ಟಬಹುದಾದ ರೋಗಗಳಿಂದ ದೂರವಿಟ್ಟು, ಸುರಕ್ಷಿತವಾದ ಸಮುದಾಯಗಳನ್ನು ನಿರ್ಮಿಸುವುದು. ಸರಿಯಾದ ಸಮಯಕ್ಕೆ ವ್ಯಾಕ್ಸಿನೇಷನ್‌ ಹಾಕಿಕೊಳ್ಳುವುದರಿಂದ ವಿಶ್ವಾದ್ಯಂತ ಸುಮಾರು 1.5 ಮಿಲಿಯನ್ ಸಾವುಗಳನ್ನು ತಡೆಯಬಹುದು ಎಂದು Wಊಔ ಹೇಳಿಕೊಂಡಿದೆ. ಭಾರತದಲ್ಲಿಯೇ, ಯಶಸ್ವಿ ವ್ಯಾಕ್ಸಿನೇಷನ್ ಡ್ರೈವ್‌ಗಳ ಮೂಲಕ ಪೋಲಿಯೊವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ. ಲಸಿಕೆಗಳು ಅತಿಸಾರ, ದಡಾರ, ನ್ಯುಮೋನಿಯಾ, ಪೋಲಿಯೊ ಮತ್ತು ನಾಯಿಕೆಮ್ಮಿನಂತಹ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ಅನಾರೋಗ್ಯ ಮತ್ತು ಸಾವನ್ನು ತಡೆಯಲು ನೆರವಾಗುತ್ತದೆ. ಇವು ನೇರವಾಗಿ ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಯ ಲಾಭದ ಪ್ರಮಾಣವನ್ನೂ ಹೆಚ್ಚಿಸುತ್ತದೆ.

ಮಣಿಪಾಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ರವಿ ಸ್ವಾಮಿ, “ಶಿಶು ಮರಣವನ್ನು ಕಡಿಮೆ ಮಾಡಲು, ಸುಲಭವಾದ ಆಯ್ಕೆಯೆಂದರೆ ಲಸಿಕೆ. ಮೊದಲ ಮೂರು ವರ್ಷಗಳಲ್ಲಿ ನೀಡಲಾಗುವ ನ್ಯುಮೋಕೊಕಲ್ ಮತ್ತು ಫ್ಲೂ ನಂತಹ ಮಾರಣಾಂತಿಕ ಕಾಯಿಲೆಗಳನ್ನು ಸುಲಭವಾಗಿ ತಡೆಗಟ್ಟಬಹುದು, ಈ ಕಾರಣಕ್ಕೆ ಲಸಿಕೆಗಳನ್ನು ತಪ್ಪಿಸಿಕೊಳ್ಳಬಾರದು. ಮಕ್ಕಳ ಭವಿಷ್ಯದ ಆರೋಗ್ಯವನ್ನು ರಕ್ಷಿಸಬೇಕಾದ್ದು ನಮ್ಮ ಜವಾಬ್ದಾರಿಯೂ ಹೌದು. ಅದರಲ್ಲೂ ಮುಖ್ಯವಾಗಿ, ವಯಸ್ಸಾದವರಿಗೆ ಮತ್ತು ದುರ್ಬಲ ಜನಸಂಖ್ಯೆಗೆ ಹರಡುವ ಸಾಧ್ಯತೆಗಳು ಹೆಚ್ಚು. ಕಳೆದ ವರ್ಷಗಳಲ್ಲಿ ರೋಗನಿರೋಧಕತೆಯ ಜಾಗೃತಿ ಹೆಚ್ಚಿದೆ, ಆದರೆ ಪ್ರತಿ ಮಗುವಿಗೆ ಲಸಿಕೆ ಹಾಕುವ ಮಾರ್ಗವಿನ್ನೂ ದೀರ್ಘವಾಗಿದೆ” ಎನ್ನುತ್ತಾರೆ.

ಮಕ್ಕಳಿಗೆ ಲಸಿಕೆ ನೀಡುವುದು ಹೇಗೆ ಬಹುಚರ್ಚಿತ ವಿಷಯವೋ, ಅದೇ ರೀತಿ ವಯಸ್ಕರ ರೋಗನಿರೋ‍ಧಕ ಶಕ್ತಿಯನ್ನು ಹೆಚ್ಚಿಸುವುದು ಕೂಡಾ ಅಷ್ಟೇ ಮುಖ್ಯ. ವೈದ್ಯಕೀಯ ಸಮುದಾಯವನ್ನು ಸಕ್ರಿಯವಾಗಿಸುವುದು ಮತ್ತು ವಯಸ್ಕರಿಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಉದಾಹರಣೆಗೆ ವಯಸ್ಸಾದ ಮಂದಿ ಹೆಚ್ಚಾಗಿ ಎದುರಿಸುವ ಕಾಯಿಲೆಗಳು (ಶ್ವಾಸಕೋಶದ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆಗಳು, ಇತ್ಯಾದಿ) ಸಮಸ್ಯೆ ಹೊಂದಿರುವವರು ಬಹುಬೇಗ ಸೋಂಕುಗಳಿಗೆ ಗುರಿಯಾಗುತ್ತಾರೆ. ಲಸಿಕೆಗಳು ಇದನ್ನು ತಪ್ಪಿಸಿ ದೀರ್ಘ ಕಾಲ ಆರೋಗ್ಯದಿಂದ ಬದುಕುವಂತೆ ಮಾಡುತ್ತದೆ. ಇದು ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ಮತ್ತಷ್ಟು ತೀವ್ರಗೊಳ್ಳುವುದನ್ನು ತಪ್ಪಿಸುತ್ತದೆ, ಅನಗತ್ಯ ಆಸ್ಪತ್ರೆಗೆ ಅಲೆಯುವುದನ್ನು ತಪ್ಪಿಸಿ ಜನರಿಗೆ ಅವರಿಗಿಷ್ಟವಿರುವ ಕೆಲಸಗಳನ್ನು ಮಾಡಲು ಸಹಾಯ ಮಾಡುತ್ತದೆ. ಕೋವಿಡ್-19 ರ ನಂತರ, ಲಸಿಕೆಗಳ ಮೇಲಿನ ನಂಬಿಕೆ ಹೆಚ್ಚಿದೆ ಮತ್ತು ವಯಸ್ಕರ ವ್ಯಾಕ್ಸಿನೇಷನ್‌ನಿಂದ ಗಣನೀಯ ಸುಧಾರಣೆಗಳು ಕಂಡುಬಂದಿವೆ. ಅದರಲ್ಲೂ ದುರ್ಬಲ ಆರೋಗ್ಯ ಹೊಂದಿರುವವರು, ತೀವ್ರ ಕಾಯಿಲೆಗಳಿಂದ ಬಳಲುತ್ತಿರುವ ಜನರನ್ನು ರಕ್ಷಿಸಲು, ಆರೋಗ್ಯದ ಪರಿಣಾಮಗಳನ್ನು ಕಡಿಮೆ ಮಾಡಲು ಲಸಿಕೆಗಳು ಅತ್ಯಗತ್ಯ.

ಎಲ್ಲಾ ವಯೋಮಾನದವರಿಗೂ ಲಸಿಕೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ವರ್ಷದಿಂದ ವರ್ಷಕ್ಕೆ ಈ ಕುರಿತಾದ ಜಾಗೃತಿ ಹೆಚ್ಚುತ್ತಿದೆಯಾದರೂ, ಹೆಚ್ಚಿನ ಅಂತರವನ್ನು ಸರಿದೂಗಿಸಲು ಇನ್ನೂ ಸಮಯ ಬೇಕಾಗುತ್ತದೆ. ಪೋಲಿಯೊ ಮತ್ತು ಸಿಡುಬುಗಳಂತಹ ಹಲವಾರು ರೋಗಗಳು ಲಸಿಕೆಗಳಿಂದ ನಿಯಂತ್ರಣಕ್ಕೆ ಬಂದಿರುವುದು ನಮ್ಮ ಕಣ್ಣೇದುರೇ ಇವೆ. ಜೊತೆಗೆ ಭಾರತ ಸರ್ಕಾರವು ರೋಗನಿರೋಧಕತೆಯನ್ನು ಉತ್ತೇಜಿಸಲು ರಚಿಸಿರುವ ಕಠಿಣ ವ್ಯಾಕ್ಸಿನೇಷನ್ ಡ್ರೈವ್‌ಗಳು ಮತ್ತು ಕಾರ್ಯಾಚರಣೆಗಳನ್ನು ಅತ್ಯುತ್ತಮವಾಗಿದೆ. ಆರೋಗ್ಯವಂತ ಮಗು ಮತ್ತು ಕುಟುಂಬವು ಆರೋಗ್ಯಕರ ಸಮಾಜವನ್ನು ಮತ್ತು ಆರೋಗ್ಯಕರ ರಾಷ್ಟ್ರವನ್ನು ಮಾತ್ರ ನಿರ್ಮಿಸುತ್ತದೆ.

Post Comment

You May Have Missed