ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ.
ಬೆಂಗಳೂರು ಮೇ 12 : ಬೃಹತ್ ಬೆಂಗಳೂರು ಮಹಾನಗರ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದರು ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಹೆಚ್.ಎಸ್.ಆರ್ ಲೇಔಟ್ ವಾರ್ಡ್ ಬಿಡಿಎ ಕಾಂಪ್ಲೆಕ್ಸ್ ಬ್ಲಾಕ್ ಬಳಿ ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ ಗೆ ಭೇಟಿ ನೀಡಿ ಪರಿಶೀಲಿಸಿದ ಮುಖ್ಯ ಆಯುಕ್ತರು, 64 ಪೌರಕಾರ್ಮಿಕರಲ್ಲಿ 54 ಮಂದಿ ಮಾತ್ರ ಹಾಜರಿದ್ದರು. ಈ ಪೈಕಿ ನಿರಂತರವಾಗಿ ಬಾರದೇ ಇರುವವರನ್ನು ಬೇರೆಡೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಪಾರಕಾರ್ಮಿಕರು ಕಡ್ಡಾಯವಾಗಿ ಸುರಕ್ಷಾ ಸಾಮಗ್ರಿಗಳನ್ನು ಉಪಯೋಗಿಸಬೇಕು. ಸುರಕ್ಷಾ ಸಾಮಗ್ರಿಗಳನ್ನು ಧರಿಸದಿದ್ದರೆ ಮೇಲ್ವಿಚಾಕರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಸ್ಥಳೀಯ ನಾಗರಿಕರು ಮುಖ್ಯ ಆಯುಕ್ತರನ್ನು ಭೇಟಿಯಾಗಿ ಹೆಚ್.ಎಸ್.ಆರ್. ಲೇಔಟ್ ನಲ್ಲಿ ಪ್ರತಿ ಮಳೆಗಾಲದಲ್ಲೂ ಸಮಸ್ಯೆಯಾಗಲಿದ್ದು, ಅದಕ್ಕೆ ಶಾಶ್ವತ ಪರಿಹಾರ ನೀಡಲು ಮನವಿ ಮಾಡಿದರು. ಜೊತೆಗೆ ಇತ್ತೀಚೆಗೆ ಮಳೆಯಾದ ವೇಳೆ ಸಾಕಷ್ಟು ಮರಗಳು ಧರೆಗುಳಿದ್ದವು. ಈ ವೇಳೆ ಪಾಲಿಕೆಯ ತಂಡವು ರಾತ್ರಿಯಿಡೀ ಕೆಲಸ ಮಾಡಿ ಸಮಸ್ಯೆ ಬಗೆಹರಿಸಿರುವದಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಇದೇ ರೀತಿ ನಾಗರಿಕರಿಗೆ ತ್ವರಿತವಾಗಿ ಸ್ಪಂದಿಸಲು ಕೋರಿದರು.
ಹೆಚ್.ಎಸ್.ಆರ್ ಲೇಔಟ್ 6ನೇ ಸೆಕ್ಟರ್ ನ, 3ನೇ ಮುಖ್ಯ ರಸ್ತೆ, 16ನೇ ಅಡ್ಡ ರಸ್ತೆ ಪ್ರದೇಶವು ತಗ್ಗು ಪ್ರದೇಶದಲ್ಲಿರುವ ಕಾರಣ ಮಳೆಗಾದಲ್ಲಿ ಜಲಾವೃತವಾಗುತ್ತದೆ. ಈ ಸಂಬಂಧ ಹೊಸದಾಗಿ 286 ಮೀಟಿರ್ ಸೈಡ್ ಡ್ರೈನ್ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಮಖ ರಾಜಕಾಲುವೆಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದರಿಂದ ಮಳೆಗಾಲದ ವೇಳೆ ಈ ಭಾಗದಲ್ಲಿ ಸಂಪೂರ್ಣವಾಗಿ ಜಾಲಾವೃತವಾಗುವ ಸಮಸ್ಯೆ ಬಗೆಹರಿಯಲಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಚ್.ಎಸ್.ಆರ್ ಲೇಔಟ್ 9ನೇ ಮುಖ್ಯ ರಸ್ತೆಯ ಬಳಿ 1.5 ಮೀಟರ್ ಎತ್ತರವಿರುವ ಸೇತುವೆಯನ್ನು, 3.5 ಮೀಟರ್ ಎತ್ತರ(15 ಮೀಟರ್ ಉದ್ದ, 18 ಮೀಟರ್ ಅಗಲ)ಕ್ಕೆ ಎತ್ತರಿಸಲಾಗಿದ್ದು, ಇದಿರಂದ ಪ್ರಮುಖ ರಾಜಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲಿದೆ. ಇದಲ್ಲದೆ ಹೆಚ್.ಎಸ್.ಆರ್ ಲೇಔಟ್ ನಲ್ಲಿ ನೀರು ನಿಲ್ಲದೇ ಇರುವ ಹಾಗೆ ಮಾಡಲು ಪ್ರಮುಖ ರಾಜಕಾಲುವೆಯಲ್ಲಿ 600 ಮೀಟರ್ ಉದ್ದದ ಪರ್ಯಾಯ ಕಾಲುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಇದರಿಂದ ಜೋರು ಮಳೆಯಾದಾಗ ಬ್ಯಾಕ್ ವಾಟರ್ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಮಳೆಗಾಲ ಪ್ರಾರಂಭವಾಗುವುದಕ್ಕೂ ಮುನ್ನ ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಪರಿಶೀಲನೆ:
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಹೆಚ್.ಎಸ್.ಆರ್ ಲೇಔಟ್ ನಲ್ಲಿ ಸುಮಾರು 7 ಎಕರೆ ಪ್ರದೇಶದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಕಾಮಗಾರಿ ಕೈಗತ್ತಿಕೊಂಡಿದ್ದು, ಮೊದಲನೇ ಹಂತದಲ್ಲಿ 3.25 ಕೋಟಿ ರೂ. ವೆಚ್ಚದಲ್ಲಿ ಕಬ್ಬಡಿ ಕೋರ್ಟ್, ಬ್ಯಾಸ್ಕೆಟ್ ಬಾಲ್ ಕೋರ್ಟ್, ವಾಲಿಬಾಲ್ ಕೋರ್ಟ್, ಗ್ಯಾಲರಿ ವಿತ್ ಟೆನ್ಸಲ್ ರೂಫ್, 10 ಸಂಖ್ಯೆಯ ಫ್ಲಡ್ ಲೈಟ್ಸ್ ಕಾಮಗಾರಿ ಪೂರ್ಣಗೊಂಡಿರುತ್ತದೆ.
ಇತ್ತೀಚೆಗೆ ವೇಗವಾಗಿ ಗಾಳಿ ಬಂದ ಪರಿಣಾಮ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪ್ರೇಕ್ಷರ ಗ್ಯಾಲರಿಗೆ ಅಳವಡಿಸಿದ್ದ ಟೆನ್ಸಲ್ ರೂಫ್ ಬಿದ್ದಿರುತ್ತದೆ. ಈ ಪೈಕಿ ಪಾಲಿಕೆಯಿಂದ ಯಾವುದೇ ಹಣ ವ್ಯಯಿಸದೆ ಗುತ್ತಿಗೆದಾರರಿಂದಲೇ ದುರಸ್ತಿ ಕಾರ್ಯವನ್ನು ಕೈಗೊಂಡು ಒಂದು ತಿಂಗಳಲ್ಲಿ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಇನ್ನೂ ಬಾಕಿಯಿರುವ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಅನುಗ್ರಹ ಲೇಔಟ್, ಮಡಿವಾಳ ಕೆರೆ ಬಳಿಯ ರಾಜಕಾಲುವೆ ಪರಿಶೀಲನೆ:
ಅನುಗ್ರಹ ಲೇಔಟ್ ಕೆಳಭಾಗದಲ್ಲಿರುವ ಕಾರಣ ಪ್ರತಿ ಬಾರಿ ಮಳೆಯಾದ ವೇಳೆ ಫೇಸ್-1 ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಈ ಪೈಕಿ ಮಳೆಗಾಲ್ಲಿ 45 ಹೆಚ್.ಪಿ ಯಂತ್ರವನ್ನು ಸ್ಥಳದಲ್ಲೇ ಇಡಲಾಗಿರುತ್ತದೆ. ಮಳೆ ಬಿದ್ದ ಕೂಡಲೆ ಪಂಪ್ ಮಾಡಿ ಮಡಿವಾಳ ಕೆರೆಗೆ ಸಂಪರ್ಕವಿರುವ ಕಾಲುವೆಗೆ ಬಿಡಲಾಗುತ್ತದೆ. ಈ ಭಾಗದಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಲ್ವರ್ಟ್ ನಿರ್ಮಿಸಿ ನೀರು ನಿಲ್ಲದಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಳೇನ ಅಗ್ರಹಾರ ಕೆರೆಯನ್ನು 3 ಕೋಟಿ ರೂ. ವೆಚ್ಚದಲ್ಲಿ 150 ಕೆ.ಎಲ್.ಡಿ ಸಾಮರ್ಥ್ಯಸ ಎಸ್.ಟಿ.ಪಿ ಪ್ಲಾಂಟ್, ಕೆರೆಯ ಸುತ್ತಲೂ ಫೆನ್ಸಿಂಗ್ ಅಳವಡಿಕೆ, ವಾಯು ವಿಹಾರ ಮಾರ್ಗ ಸೇರಿದಂತೆ, ಸಸಿಗಳನ್ನು ನೆಟ್ಟಿರುವುದು ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಈ ಸಂಬಂಧ ಏನೆಲ್ಲಾ ಕೆಲಸ ಮಾಡಲಾಗಿದೆಯೋ ಅದರ ಮಾಹಿತಿಯುಳ್ಳ ಶಾಶ್ವತ ನಾಮಫಲಕವನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಣ ತ್ಯಾಜ್ಯ ಸಂಗ್ರಹಣಾ ಘಟಕ, ಸುವಿಧಾ ಕ್ಯಾಬಿನ್, ಟ್ರಾನ್ಸ್ ಫರ್ ಸ್ಟೇಷನ್ ಪರಿಶೀಲನೆ:
ಗೊಟ್ಟಿಗೆರೆ ವಾರ್ಡ್ ವ್ಯಾಪ್ತಿಯಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಘಟಕ, ಸುವಿಧಾ ಕ್ಯಾಬಿನ್, ಟ್ರಾನ್ಸ್ ಫರ್ ಸ್ಟೇಷನ್ ಪರಿವೀಕ್ಷಣೆ ನಡೆಸಿ, ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ ನಲ್ಲಿ ವಿಶ್ರಾಂತಿ ಪಡೆಯಲು ಮೊದಲ ಹಂತದಲ್ಲಿ 227 ಸ್ಥಳಗಳಲ್ಲಿ ಸುವಿಧಾ ಕ್ಯಾಬ್ ಗಳನ್ನು ಅಳವಡಿಸಲಾಗುತ್ತಿದ್ದು, ಇನ್ನೂ ಬೇರೆಡೆ ಗುರುತಿಸಿರುವ ಸ್ಥಳಗಳಲ್ಲಿಯೂ ತ್ವರಿತವಾಗಿ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ವಿಶ್ರಾಂತಿ ಕೊಠಡಿಯಿಲ್ಲದಿರುವ ಕಡೆ ಪಾಲಿಕೆ ಆಸ್ಪತ್ರೆ, ಶಾಲೆ, ಕಛೇರಿಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸಲು ಅನುವು ಮಾಡಿಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಬಳಿಕ ವೀವರ್ಸ್ ಕಾಲೋನಿಯಲ್ಲಿ ರಾಜಕಾಲುವೆ ಪರಿಶೀಲನೆ ನಡೆಸಿ, ಕಚ್ಚಾ ಡ್ರೈನ್ ಅನ್ನು ಕೂಡಲೆ ದುರಸ್ತಿಪಡಿಸಿ ತಡೆಗೋಡೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೊಟ್ಟಿಗೆರೆ ಮುಖ್ಯ ರಸ್ತೆಯಲ್ಲಿರುವ 5 ಎಕರೆ ಪ್ರದೇಶದ ಸುಬ್ಬರಾಯನ ಕೆರೆಯನ್ನು 2.6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕೆರೆಯ ಅಂಗದಲ್ಲಿ ಹೂಳೆತ್ತುವ ಕಾರ್ಯ, ಫೆನ್ಸಿಂಗ್, ಬಂಡ್ ಅಭಿವೃದ್ಧಿ, ಇನ್ ಲೆಟ್, ಔಟ್ ಲೆಟ್ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಕೆರೆಗೆ ಎರಡೂ ಇನ್ ಲೆಟ್ ಗಳಿಂದ ಸೀವೇಜ್ ನೀರು ಬರುತ್ತಿದ್ದು, ಸೀವೇಜ್ ನೀರು ಕೆರೆಗೆ ಸೇರದಂತೆ ಕೂಡಲೆ ಪರ್ಯಾಯ ಕಾಲುವೆ ನಿರ್ಮಿಸಲು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಕೆಪಿಟಿಸಿಎಲ್ 2 ಹೈಟೆನ್ಷನ್ ಟವರ್ ಕೆರೆಯ ಭಾಗದಲ್ಲಿದ್ದು, ಅದನ್ನು ಬಲಪಡಿಸಲು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸ್ಥಳದಲ್ಲೇ ಕರೆ ಮಾಡಿ ಸೂಚನೆ ನೀಡಿದರು.

Post Comment