Loading Now

ಬೆಲೆ ಗಗನಕ್ಕೆ ಅದಾಯ ಪಾತಾಳಕ್ಕೆ – ಕೆಪಿಸಿಸಿ ಪಿಇನ್ ಕೃಷ್ಣ ಮೂರ್ತಿ .

ಪೀಣ್ಯ ದಾಸರಹಳ್ಳಿ-ಸತತವಾಗಿ ಗ್ಯಾಸ್ ಬೆಲೆ ಏರಿಕೆಯಿಂದ ಬಡ ಸಾಮಾನ್ಯ ವರ್ಗದ ಜನರಿಗೆ ಅದಾಯದ ಮೇಲೆ ಹೊರೆ ಬಿದ್ದಿದೆ ಅದಾಯ ಮೂಲ ಕಡಿಮೆಯಾಗುತ್ತಿದೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರುತ್ತಿದೆ.ಜನಸಾಮಾನ್ಯರ ಬದುಕು ಬೀದಿಗೆ ಬಿದ್ದಿದೆ ಇದರ ಪರಿವೆ ಇಲ್ಲದೆ ಕೇಂದ್ರ ಹಾಗು ರಾಜ್ಯ ಸರ್ಕಾರ ಅನೆ ನೆಡೆದಿದ್ದೆ ದಾರಿ ಎನ್ನುವ ರೀತಿಯಲ್ಲಿವೆ ಇದಕ್ಕೆಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಪಿಎನ್ ಕೃಷ್ಣಮೂರ್ತಿ ಅಕ್ರೋಶ ವ್ಯಕ್ತಪಡಿಸಿದರು.

ಕ್ಷೇತ್ರದ ಯುವ ಕಾಂಗ್ರೆಸ್ ಯುವ ಅಕ್ರೋಶ ಎಂಬ ಟ್ಯಾಗ್ ಲೈನ್ ನೊಂದಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರದ ವಿರುದ್ಧ ಜಾಲಹಳ್ಳಿ ಕ್ರಾಸ್ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಅಡುಗೆ ಗ್ಯಾಸ್ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸಿ ಜನ ಬದುಕಲು ಅವಕಾಶ ಕೊಡಿ, ಜನತೆಯ ಪರವಾಗಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಮಾಡುವುದಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.
ಈ ಸಂಧರ್ಭದಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಕ್ಷಿತ್ ,ಜೀಜುವರ್ಗಿಸ್ , ರಾಬರ್ಟ್ ,ಸನಾವುಲ್ಲಾ, ಅಜೀಮ್, ಬ್ಲಾಕ್ ಅಧ್ಯಕ್ಷೆ ನಿರ್ಮಲಮ್ಮ, ಸ್ನೇಹ ಕುಮಾರ್, ರಾಜಗೋಪಾಲನಗರ ವಾರ್ಡ್ ಅಧ್ಯಕ್ಷ ಪ್ರಕಾಶ್,ಹಾಗು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

Post Comment

You May Have Missed