Loading Now

ಬಿಜೆಪಿ ಅಭ್ಯರ್ಥಿ ಮೈ ವಿ ರವಿಶಂಕರ್ ಅವರ ಪರ ಮತಯಾಚನೆ.

ಮೈಸೂರು ಮೇ 11 – ನಗರದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮೈ ವಿ ರವಿಶಂಕರ್ ಪರವಾಗಿ ನಗರದ ತಾಲ್ಲೂಕು ಕಚೇರಿ, ಆರೋಗ್ಯಧಿಕಾರಿ ಕಚೇರಿ , ವಿಶ್ವೇಶ್ವರಯ್ಯ ರವರ ಇಂಜಿನಿಯರಿಂಗ್ ಕಚೇರಿ,ಚಾಮುಂಡಿ ವಿಹಾರ ಕ್ರೀಡಾಂಗಣದ ಕ್ರೀಡಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಮತ್ತು ವಸಂತ ಮಹಲ್ ನಲ್ಲಿರುವ ಶಿಕ್ಷಕರ ಶಿಕ್ಷಣ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಬಿಜೆಪಿ ಅಭ್ಯರ್ಥಿ ಮೈ ವಿ ರವಿಶಂಕರ್ ಅವರ ಪರವಾಗಿ ಕರ ಪತ್ರವನ್ನು ವಿತರಿಸಿ ಮತಯಾಚನೆ ಮಾಡಲಾಯಿತು

ಇದೇ ಸಂದರ್ಭದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ,ಮೈಸೂರು ನಗರ ಉಪಾಧ್ಯಕ್ಷರು ಹಾಗೂ ಯುವ ಮೋರ್ಚಾ ಉಸ್ತುವಾರಿಗಳಾದ ಟಿ ರಮೇಶ್,ಮೈಸೂರು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಕುಮಾರ್, ಉಪಾಧ್ಯಕ್ಷರಾದ ಹರ್ಷಿತ್ ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್, ಕೃಷ್ಣರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಮನು ಶೈವ, ಚಾಮುಂಡೇಶ್ವರಿ ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಮಧು, ಹಾಗೂ ಪದಾಧಿಕಾರಿಗಳಾದ ಧನರಾಜ್, ಕೀರ್ತಿ,ಕಿರಣ್, ರವಿ, ರಘು, ಮುಂತಾದವರು ಉಪಸ್ಥಿತರಿದ್ದರು .

Post Comment

You May Have Missed