“ಬಾಡಿಗಾಡ್”
ಕನ್ನಡ ಮತ್ತು ಬಾಲಿವುಡ್ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಅವರು ಮತ್ತೊಂದು ಅಪಾಯಕಾರಿ ಆಕ್ಷನ್ ಎಪಿಸೋಡನ್ನು ಪೂರ್ಣಗೊಳಿಸಿದ್ದಾರೆ. ಪ್ರಭು ಶ್ರೀನಿವಾಸ್ ನಿರ್ದೇಶನದ ಮುಂಬರುವ ಕನ್ನಡ ಚಲನಚಿತ್ರ ಬಾಡಿ ಗಾಡ್ ನಲ್ಲಿ ರಿಸ್ಕಿ ಸಾಹಸಗಳನ್ನು ಹೊಂದಿದೆ ಎಂದು ರವಿವರ್ಮ ಬಹಿರಂಗಪಡಿಸಿದ್ದಾರೆ. “ನನ್ನ ಪ್ರತಿಯೊಂದು ಪ್ರಾಜೆಕ್ಟ್ಗಳು ನನಗೆ ವಿಭಿನ್ನ ಮತ್ತು ವಿಶೇಷವಾದದ್ದು. ಆದರೆ ಬಾಡಿಗಾಡ್ ಚಿತ್ರದ ಫೈಟ್ ಕಾನ್ಸೆಪ್ಟ್ ವಿಭಿನ್ನದಲ್ಲೇ ವಿಶೇಷವಾದದ್ದು. ನಾನು ಅದನ್ನು ಸವಾಲಾಗಿ ತೆಗೆದುಕೊಂಡು ಮೂರು ದಿನದಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಗಣಪ ಮತ್ತು ಕರಿಯ 2 ನಿರ್ದೇಶಕ ಪ್ರಭು ಶ್ರೀನಿವಾಸ್ ಮುಂದಿನ ಚಿತ್ರ ಬಾಡಿ ಗಾಡ್ ಏಪ್ರಿಲ್ 1 ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಮನೋಜ್ ಮತ್ತು ನಿರ್ದೇಶಕ-ನಟ ಗುರುಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


Post Comment