Loading Now

ಬನ್ನೂರು ಹೋಬಳಿ ಯನ್ನು ಸಂಪೂರ್ಣ ಕೊರೊನಾ ಲಸಿಕಾ ಮುಕ್ತ ಹೋಬಳಿಯನ್ನಾಗಿಸಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ತಾಲ್ಲೂಕು ದಂಡಾಧಿಕಾರಿ ಬಿ.ಗಿರಿಜಾ ಮನವಿ.

ತಿ.ನರಸೀಪುರ. ಅ.03:- ಬನ್ನೂರು ಹೋಬಳಿ ಯನ್ನು ಸಂಪೂರ್ಣ ಕೊರೊನಾ ಲಸಿಕಾ ಮುಕ್ತ ಹೋಬಳಿಯನ್ನಾಗಿಸಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ತಾಲ್ಲೂಕು ದಂಡಾಧಿಕಾರಿ ಬಿ.ಗಿರಿಜಾ ಮನವಿ ಮಾಡಿದರು.
ಪಟ್ಟಣದ ಮಿನಿ ವಿಧಾನ ಸೌಧದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನೆಡಸಿ ಮಾತನಾಡಿದ ದಂಡಾಧಿಕಾರಿಗಳು ಮೈಸೂರಿನಲ್ಲಿ ಜರುಗಲಿರುವ ನಾಡ ಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾಗೆ ಜಗತ್ತಿನ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುವುದರಿಂದ ಕೋವಿಡ್ ಸೋಂಕು ಉಲ್ಬಣಗೊಳ್ಳುವ ಸಂಭವವಿರುವುದನ್ನು ಮನಗಂಡಿರುವ ಜಿಲ್ಲಾಧಿಕಾರಿಗಳು ತಾಲ್ಲೂಕಿನಾಧ್ಯಂತ ಕೊರೊನಾ ಲಸಿಕೆ ಅಭಿಯಾನವನ್ನು ನೆಡಸುವಂತೆ ಸೂಚನೆ ನೀಡಿದ್ದಾರೆ ಅವರ ಸೂಚನೆ ಮೇರೆಗೆ ತಾಲ್ಲೂಕಿನ ಬನ್ನೂರು ಹೋಬಳಿಯನ್ನು ಕೊರೊನಾ ಲಸಿಕಾ ಮುಕ್ತ ಗೊಳಿಸಲು ಮೊದಲಿಗೆ ಆಯ್ಕೆ ಮಾಡಿ ಕೊಳ್ಳಲಾಗಿದೆ ಎಂದರು.
ಅಕ್ಟೋಬರ್ 04 ರ ಸೋಮವಾರ ಬನ್ನೂರಿನಲ್ಲಿ ಲಸಿಕಾ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಈ ಒಂದು ಕಾರ್ಯಕ್ರಮಕ್ಕೆ  ಅಧಿಕಾರಿ ಮತ್ತು ಅವರ ಅಧೀನ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ ಈ ಒಂದು ಲಸಿಕಾ ಕಾರ್ಯ ಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಬನ್ನೂರು ಹೋಬಳಿಯನ್ನು ಲಸಿಕಾ ಮುಕ್ತ ಹೋಬಳಿಯನ್ನಾಗಿಸಲು ಸಹಕಾರ ನೀಡಬೇಕೆಂದರು.
ಮುಂದು ಮತನಾಡಿದ ಅವರು ಕೊರೊನಾ ಮುಕ್ತವಾಗಿಸಲು ಪ್ರತಿಯೊಬ್ಬರ ಸಹಕಾರ ತಾಲ್ಲೂಕು ಆಡಳಿತಕ್ಕೆ ಅತ್ಯವಶ್ಯಕವಾಗಿರುವು ದರಿಂದ ಬನ್ನೂರಿನಲ್ಲಿ ನೆಡಯುವ ಲಸಿಕಾ ಕಾರ್ಯಕ್ರಮಕ್ಕೆ ಬನ್ನೂರು ಹೋಬಳಿಯ ಚುನಾಯಿತ ಪ್ರತಿನಿಧಿಗಳು,ರಾಜಕೀಯ ಹಾಗೂ ಸಂಘ ಸಂಸ್ಥೆ ಮುಖಂಡರು ,ಸ್ವಸಹಾಯ ಮಹಿಳಾ ಸಂಘದವರು ಸೇರಿದಂತೆ ಬನ್ನೂರು ಹೋಬಳಿಯ ಜನತೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

Previous post

ಮಹಾತ್ಮ ಗಾಂಧೀಜಿ ರವರ ರೀತಿ ನಾವಾಗಲು ಸಾದ್ಯವಿಲ್ಲ ಆದರೆ ಅವರ ಆದರ್ಶಗಳನ್ನು ಪಾಲಿಸಿ ನಮ್ಮ ಕೈಯಲ್ಲಾದ ಅಳಿಲು ಸೇವೆ ಮಾಡೋಣ ಎಂದು ಹಿರಿಯ ಸಿವಿಲ್ ನ್ಯಾಯಧೀಶ ಮಹವೀರ ಮ. ಕರೆಣ್ಣವರ ಅಭಿಮತ.

Next post

ರೈತ ಮೋರ್ಚ ಮತ್ತು ಯುವಮೋರ್ಚಾ ಬಲಿಷ್ಠವಾದರೆ ಯಾವ ಚುನಾವಣೆಗಳನ್ನಾದರು ಗೆಲ್ಲಬಹುದು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ  ಶಂಭುದೇವಪುರ ಸುರೇಶ್.

Post Comment

You May Have Missed