Loading Now

ಬಡ ಕುಟುಂಬಕ್ಕೆ ಆಹಾರ ಕಿಟ್ ವಿತರ



ಚಿಕ್ಕಬಳ್ಳಾಪುರ ಸೆ.೦೬: ತಾಲ್ಲೂಕಿನ ಹಾರೋಬಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಬಡ ಕುಟುಂಬಗಳಿಗೆ ಕೆ ಎನ್ ರಘು ಜನಸೇವಾ ಟ್ರಸ್ಟ್  ವತಿಯಿಂದ ಉಚಿತ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.
ಆಹಾರ ಕಿಟ್ಟುಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಜನಸೇವಾ ಟ್ರಸ್ಟ್ ಕೆ ಎನ್ ರಘು ಮಾತನಾಡಿ, ಜನರ ಸಂಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಜನಸೇವಾ ಟ್ರಸ್ಟ್ ವತಿಯಿಂದ ಸಾಮಾಜಿಕ ಮತ್ತು ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಇದರ ಜತೆಗೆ ರಾಜಕೀಯ ಶಕ್ತಿ ನೀಡಿದಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಕಾರ್ಮಿಕರಿಗೆ ರೈತರಿಗೆ ಮತ್ತು ಯುವ ಸಮೂಹಕ್ಕೆ ಉದ್ಯೋಗವನ್ನು ಸೃಷ್ಟಿ ಮಾಡುವ ಯೋಜನೆಯನ್ನು ಸಹ ಹಮ್ಮಿಕೊಳ್ಳಲಾಗುವುದು ಮತ್ತು ಆರೋಗ್ಯ ಹಾಗೂ ಇತರೆ ಸಾಮಾಜಿಕ ಕಾರ್ಯಗಳನ್ನು ನೆರವೇರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ನಮ್ಮ ಕುಟುಂಬ ಮೂಲ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕುಟುಂಬದವರ ಆಗಿದ್ದೇವೆ ನಮ್ಮ ಉದ್ದೇಶ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಉದ್ದೇಶ ಆ ನಿಟ್ಟಿನಲ್ಲಿ ತಾಲ್ಲೂಕಿನ ಹಿರಿಯ ಮುಖಂಡರು ಸಾಮೂಹಿಕವಾಗಿ ಒಪ್ಪಿಗೆ ನೀಡಿದಲ್ಲಿ ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯ ತಿಪ್ಪೇನಹಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಲು ಕಾವ್ಯ ಕೆ ಎಂ ರಘು ಅವರು ಸಿದ್ಧರಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀಮತಿ ಕಾವ್ಯಾ ಕೆ ಎನ್ ರಘು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡುತ್ತಾ ತಮ್ಮ ತವರು ಊರಾಗಿರುವ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ನಾರಾಯಣಪುರ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಬೆಳೆದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜ ಸೇವೆಗೆ ಮುಂದಾಗಿರುವ ಕೆ ಎನ್ ರಘು ಜತೆ ನಾನೂ ಸಹ ಸಾತ್ ನೀಡುತ್ತಿದ್ದೇನೆ ಇದಕ್ಕೆ ರಾಜಕೀಯ ಬಣ್ಣ ಕಟ್ಟೋದು ಬೇಡ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲ ಸಮುಧಾಯಗಳ ಮುಖಂಡರ ವಿಶ್ವಾಸಗಳಿಸಿ ಜಿಲ್ಲೆಯಾದ್ಯಂತ ಟಾಪ್ ಎಂಡ್ ಟಾಪ್  ಅಂಕಗಳನ್ನು ಪಡೆದಿರುವಂತಹ  ಸರಿಸುಮಾರು ನೂರ ಐವತ್ತು ಮಕ್ಕಳನ್ನ ಗುರ್ತಿಸಿ ಅವರಿಗೆ ಪ್ರತಿಭಾ ಪುರಸ್ಕಾರದ ಮೂಲಕ ವಿದ್ಯಾಬ್ಯಾಸಕ್ಕೆ ಉತ್ತೇಜನ ನೀಡುವುದು ಬಡ ಜನರ ಜೀವನಕ್ಕಾಗಿ ಪುಡ್ ಕಿಟ್ ಕೊಡುತ್ತಿರುವುದು ಶೋಷಿತ ಸಮುದಾಯಗಳಿಗೆ ನೆರವಾಗುವುದು ಇವೆಲ್ಲವನ್ನೂ ರಾಜಕೀಯ ಬಣ್ಣ ವಿಲ್ಲದೆ ಮುಂದುವರಿಸಿಕೊಂಡು ಹೋಗುವುದು ನಮ್ಮ ಕನಸಾಗಿತ್ತು ಎಂದರು. ಮಾಜಿ ಶಾಸಕರಾದ ಎಸ್ ಎಂ ಮುನಿಯಪ್ಪ, ನಂದಿ ಆಂಜನಪ್ಪ, ಜಿಲ್ಲಾ ಮಹಿಳಾ ಅಧ್ಯಕ್ಷರಾದ ಸುಮಿತ್ರಾ ನಾರಾಯಣಸ್ವಾಮಿ, ಮಮತಾ ಮೂರ್ತಿ  ಮತ್ತಿತರರಿದ್ದರು.

Post Comment

You May Have Missed