Loading Now

ಬಂಚಹಳ್ಳಿ ಹುಂಡಿ ಗ್ರಾಮದಲ್ಲಿ ಸಿದ್ದಪ್ಪಾಜಿ ಆರಾಧನ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ತಾಂಡವಪುರ ನ 8 : ಕಾರ್ತಿಕ ಮಾಸದ ಪ್ರಯುಕ್ತ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಬಂಚಹಳ್ಳಿ ಹುಂಡಿ ಗ್ರಾಮದಲ್ಲಿ ಸಿದ್ದಪ್ಪಾಜಿ ಆರಾಧರ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಿದ್ದಪ್ಪಾಜಿ ಆರಾಧರ ಮಹೋತ್ಸವ ಹಾಗೂ ಅನ್ನ ಸಂತರ್ಪಣ ಕಾರ್ಯಕ್ರಮ ಹಮ್ಮಿಕೊಂಡು ಸಿದ್ದಪ್ಪಾಜಿ ದೇವರಿಗೆ ವಿಶೇಷ ಪೂಜೆ ಅಭಿಷೇಕ ಮುಂತಾದ ದೇವತ ಕಾರ್ಯಗಳನ್ನು ಗ್ರಾಮದ ಉಳಿತಿಗಾಗಿ ನಾವು ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಗ್ರಾಮದ ಮುಖಂಡರು ಸುದ್ದಿಗಾರರಿಗೆ ತಿಳಿಸಿದರು.

ಕಳೆದ ಎರಡು ವರ್ಷಗಳ ಹಿಂದೆ ಮಹಾಮಾರಿ ಕೊರೋನ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗಿತ್ತು ಈ ಬಾರಿ ಮಹಾಮಾರಿಯ ಭಯವಿಲ್ಲದೆ ದೇವರ ಆರಾಧನೆ ಯನ್ನು ಮಲೆನ ಮೂಲೆ ಮಠಾಧೀಶರಾದ ಚನ್ನಬಸವ ಸ್ವಾಮೀಜಿಯವರು ಚಾಲನೆ ನೀಡಿದ್ದಾರೆ ಈ ಆರಾಧನಾ ಮಹೋತ್ಸವಕ್ಕೆ ನಮ್ಮ ಗ್ರಾಮವಲ್ಲದೆ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಸಹ ದೇವಾಲಯಕ್ಕೆ ಬಂಧು ಪೂಜಿಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂದು ತಿಳಿಸಿದರು .

ಈ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ಮರಿಗೌಡ ಗುರುಶಾಂತು ಬಸವರಾಜು ಮುಖಂಡರಾದ ಎಂ ಮಹದೇವ್ ಹುಚ್ಚೇಗೌಡ ಮನ್ನೇಗೌಡ ಬಸವರಾಜು ಬಿ ಎಂ ನಾಗರಾಜು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿ ಬಿ ಪಿ ಮಹದೇವ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲೀಲಾವತಿ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಭು ಸಿದ್ದಮ್ಮ ಕಾಂಗ್ರೆಸ್ ಯುವ ಮುಖಂಡ ಬಿ ಆರ್ ರಾಕೇಶ್ ಹೆಬ್ಯಾ ರಾಜು ತಾಂಡವಪುರದ ಕೆ ರಾಜು ಮರಿಬೀರ ಮಹಾದೇವ ಬಸವರಾಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Post Comment

You May Have Missed