Loading Now

ಬಂಗಾರಪೇಟೆ: ಕಾಂಗ್ರೆಸ್ ಪಕ್ಷದಿಂದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಸಂಜೆ ಸಮಯ ಸುದ್ದಿ


ಬಂಗಾರಪೇಟೆ: ಬಿಜೆಪಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನನಿತ್ಯ ಆಹಾರಪದಾರ್ಥಗಳ ಬೆಲೆ ಏರಿಕೆ ವಿರುದ್ಧ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಮೀಸಲು ವಿಧಾನಸಭಾ ಶಾಸಕರಾದ ಎಸ್‍ಎನ್.ನಾರಾಯಣಸ್ವಾಮಿ. ಹಾಗೂ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ ಚಂದ್ರಾರೆಡ್ಡಿ. ಅವರ ನೇತೃತ್ವದಲ್ಲಿ ಕಾಲ್ನಡಿಗೆ ಮುಖಾಂತರ ಕಾರ್ಯಕರ್ತರೊಂದಗೆ ಪಟ್ಟಣದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ಮಾಡುವ ಮೂಲಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಗೆ ಬಿಸಿ ಮುಟ್ಟುವ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಪೆಟ್ರೋಲ್ ಬೆಲೆ 110, ರೂಗಳು ಹಾಗೂ ಡೀಸೆಲ್ ಬೆಲೆ 100, ರು ಗಳು ಅಡುಗೆ ಅನಿಲ 1000, ರು ಗಳು ಹಾಗೂ ದಿನನಿತ್ಯ ಬಳಕೆಯ ಆಹಾರ ಪದಾರ್ಥಗಳ ಬೆಲೆ ಏರಿಕೆ , ಕೇಂದ್ರ ಸರ್ಕಾರ 33% ಹಾಗೂ ರಾಜ್ಯ ಸರ್ಕಾರ 33 % ಸೆಸ್ ಹೊರೆ ಮಾಡುವ ಮೂಲಕ ಸಾಮಾನ್ಯ ಜನರು ಕೂಲಿಕಾರ್ಮಿಕರು, ರೈತರು , ಬಡವರು, ನಿರ್ಗತಿಕರ ಮೇಲೆ ಬೆಲೆ ಹೇರುವ ಕೆಲಸ ದಿನೇದಿನೇ ಹೆಚ್ಚು ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಿರಂತರ ಪ್ರತಿಭಟನೆ ಮಾಡಬೇಕಾಗುತ್ತದೆ. ವಿಧಾನಸೌಧದಲ್ಲಿ ರೈತರ ಬಗ್ಗೆ ಧ್ವನಿ ಎತ್ತಿದರೆ ಮಾನ್ಯ ಮುಖ್ಯಮಂತ್ರಿಗಳು ನಿಜವಾದ ರೈತರು ಯಾರು ಪ್ರತಿಭಟನೆ ಮಾಡುತ್ತಿಲ್ಲ ಆದರೆ ಕಾಂಗ್ರೆಸ್ ಪಕ್ಷದವರು ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಾರೆ. ಎಂದು ಹೇಳುತ್ತಾರೆ. ವಿರೋಧಪಕ್ಷವಾದ ನಾವು ಸಾಮಾನ್ಯ ಜನರು ಕಷ್ಟಕ್ಕೆ ಸ್ಪಂದಿಸಿ ಸಾಮಾನ್ಯ ಜನರು ಪ್ರತಿಭಟನೆ ಮಾಡಲು ಸಾಧ್ಯವಾಗುವುದಿಲ್ಲ. ಅವರ ಪರವಾಗಿ ಮುಂದಿನ ದಿನಗಳಲ್ಲಿ ನ್ಯಾಯ ಕೊಡಿಸುವ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಜವಾಹರ್ಲಾಲ್ ನೆಹರು ಪ್ರಧಾನಮಂತ್ರಿಯಾಗಿದ್ದಾಗ ಟಾಟಾ ಕಂಪನಿಯ ಬಡತನದಲ್ಲಿದ್ದ ಇಂಡಿಯನ್ ಏರ್ಲೈನ್ಸ್ ವಿಮಾನ ಅಂದ ಸರ್ಕಾರವೇ ಪಡೆದು ಇಂಡಿಯನ್ ಏರ್ಲೈನ್ಸ್ ವಿಮಾನ ನಡೆಸುತ್ತಿತ್ತು. ಈಗ ಅದೇ ಟಾಟಾ ಕಂಪನಿಗೆ ಇಂಡಿಯನ್ ಏರ್ಲೈನ್ಸ್ ಮಾರಲಾಗಿದೆ. ದೊಡ್ಡ ಹುದ್ದೆಮಗಳ ಕೈಗೆ ದೊಡ್ಡ ದೊಡ್ಡ ಕಂಪನಿಗಳು ಸೇರುತ್ತಿರುವುದು ಈ ಭಾರತ ಇತಿಹಾಸದಲ್ಲಿ ಬಿಜೆಪಿ ಸರ್ಕಾರ ಮಾಡುತ್ತಿರುವ ದೊಡ್ಡ ಸಾಧನೆ. ಇದೇ ರೀತಿ ಬಂಗಾರಪೇಟೆ ನೂರು ವರುಷ ಇತಿಹಾಸವಿರುವ ಸೂಪರ್ಡೆಂಟ್ ಪೆÇಲೀಸ್ ಕಚೇರಿಯನ್ನು ನೂತನವಾದ ಜಿಲ್ಲೆ ವಿಜಯಪುರಕ್ಕೆ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಡಿ.ಆರ್. ಪೆÇಲೀಸ್ 280 ಸಿಬ್ಬಂದಿಗಳು ಇದ್ದು ಹಾಗೂ ಡಿವೈಎಸ್ಪಿ ಒಳಗೊಂಡು ಸಿಬ್ಬಂದಿಗಳನ್ನು ವರ್ಗಾವಣೆ ಮಾಡುತ್ತಿರುವುದು ಕಾನೂನು-ಸವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಸುಮಾರು ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದು. ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಹಾಗೂ ಇಲ್ಲಿಯೇ ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿರುವ ಅಧಿಕಾರಿಗಳಿಗೆ ತೊಂದರೆಯಾಗಿ ಬೀದಿಗೆ ಬರುವ ಸಂಕಷ್ಟದಲ್ಲಿ ಸರ್ಕಾರ ಆದೇಶ ಮಾಡಿರುವುದು ವಿಪರ್ಯಾಸ ಮುಂದಿನವಾರ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗೂ ಗೃಹ ಮಂತ್ರಿಗಳನ್ನು ಭೇಟಿಮಾಡಲು ಕಾಂಗ್ರೆಸ್ ನಿಯೋಗದೊಂದಿಗೆ ಮಾತನಾಡುತ್ತೇವೆ. ಕೆಜಿಎಫ್ ಬಂಗಾರಪೇಟೆ ಸೂಪರ್ಡೆಂಟ್ ಪೆÇಲೀಸ್ ಕಚೇರಿ ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಲು ಬಿಡುವುದಿಲ್ಲ.

Post Comment

You May Have Missed