ಫೆ. 12 ರಂದು ಬೂದಿಪಡಗದಲ್ಲಿ ಗಿರಿಜನ ಉತ್ಸವ ಕಾರ್ಯಕ್ರಮ
ಚಾಮರಾಜನಗರ ಫೆಬ್ರವರಿ 09 : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆ ರಂಗಸಂದ್ರ ಇವರ ಸಹಯೋಗದೊಂದಿಗೆ ಗಿರಿಜನ ಉತ್ಸವ ಕಾರ್ಯಕ್ರಮವನ್ನು ಬೂದಿಪಡಗದ ರಂಗಸಂದ್ರ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಫೆಬ್ರವರಿ 12 ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್, ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರಾದ ಸಿ.ಎಸ್. ನಿರಂಜನ್‍ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಕುಲಗಾಣ, ಪುಣಜನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆರ್. ಮಣಿನಾಯ್ಕ, ಉಪಾಧ್ಯಕ್ಷರಾದ ಕುಂಭಮ್ಮ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯರಾದ ಭಾಗ್ಯಬಾಯಿ ಗಣೇಶ್ ನಾಯ್ಕ್, ರಂಗಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೈಸೂರು ವಲಯದ ಜಂಟಿ ನಿರ್ದೇಶಕರಾದ ವಿ. ಎನ್ ಮಲ್ಲಿಕಾರ್ಜುನ ಸ್ವಾಮಿ, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಸಿ.ಎಂ. ನರಸಿಂಹಮೂರ್ತಿ, ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಸದಸ್ಯರಾದ ಸಿ. ದುಂಡ ಮಹದೇವಸ್ವಾಮಿ ಇವರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.
ಜ. ಸುರೇಶ್‍ನಾಗ್ ಮತ್ತು ತಂಡದವರಿಂದ ಜಾನಪದಗೀತೆ ಮತ್ತು ನಾಡಗೀತೆ, ಹನೂರಿನ ಕಾನಮೇಳದೊಡ್ಡಿಯ ತಿಪ್ಪಯ್ಯ ಮತ್ತು ತಂಡದವರಿಂದ ಪಿನಾಸಿ ನೃತ್ಯ, ಕೋಟೆಕೆರೆಯ ಮಹದೇವನಾಯಕ ಮತ್ತು ತಂಡದವರಿಂದ ಹುಲಿವೇಷ, ಗುಂಡ್ಲುಪೇಟೆಯ ಬಿ.ಎಂ. ಸುರೇಶ್ ಮತ್ತು ತಂಡದವರಿಂದ ನಮ್ಮ ಗೌಡ್ರು ಎಂಬ ಸಾಮಾಜಿಕ ನಾಟಕ, ಹರದನಹಳ್ಳಿಯ ಪ್ರಸಾದ್ ಮತ್ತು ತಂಡದವರಿಂದ ಭಕ್ತಿಗೀತೆ, ಹನೂರಿನ ಕೌಳಿಹಳ್ಳ ಡ್ಯಾಂನ ಮಲ್ಲೇಗೌಡ ಮತ್ತು ತಂಡದವರಿಂದ ಹಾಡುಗಾರಿಕೆ, ಬೇಡಗುಳಿಯ ಮಹದೇವ ಮತ್ತು ತಂಡದವರಿಂದ ಗೊರುಕುನ ನೃತ್ಯ, ಬಿಳಿಗಿರಿರಂಗನಬೆಟ್ಟದ ಬಸವರಾಜು ಮತ್ತು ತಂಡದವರಿಂದ ಮಾರಿಕುಣಿತ, ಚಿಕ್ಕಾಟಿಯ ಹೊಣಕಾರನಾಯಕ ಮತ್ತು ತಂಡದವರಿಂದ ಬೀಸು ಕಂಸಾಳೆ, ಗುಂಡ್ಲುಪೇಟೆಯ ಆರ್. ಮಹೇಶ್ ಮತ್ತು ತಂಡದವರಿಂದ ವೀರಮಕ್ಕಳ ಕುಣಿತ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.



Post Comment