ಪ್ರೀತಿಯ ನರೇಂದ್ರ !
ನವ ಭಾರತದ ನಿರ್ಮಾತೃ ಆನಂದ ಕಂದ
ಧರ್ಮ ರಕ್ಷಣೆಗೆ ವೀರ ನುಡಿಗಳನಾಡಿದ
ಸಿಂಹಘರ್ಜನೆ ಮಾಡಿ,ಏಳಿ ಎಚ್ಚರಗೊಳ್ಳಿರೆಂದ
ಅವನೇ ಭಾರತಾಂಬೆಯ ಪ್ರೀತಿಯ ಕಂದ
ಭಾರತೀಯರ ನರ ನಾಡಿಗಳ ಉಬ್ಬಿಸಿದ
ರಾಷ್ಟ್ರಪ್ರೇಮದ ಕಹಳೆ ಮೊಳಗಿಸಿದ
ಯುವ ಮನಸ್ಸುಗಳನ್ನು ಬಡಿದೆಬ್ಬಿಸಿದ
ಅವನೇ ನಮ್ಮ ನಿಮ್ಮೆಲ್ಲರ ನರೇಂದ್ರ
ಭಾರತದ ಸಂಸ್ಕೃತಿಯ ಜಗತ್ತಿಗೆ ಪರಿಚಯಿಸಿದ .
ಸನಾತನಧರ್ಮವನು ಎಲ್ಲೆಡೆಗೆ ಕೊಂಡೊಯ್ದ
ದೀನದಲಿತರ ಸೇವೆಯೇ ದೇವರ ಸೇವೆ ಎಂದ
ಅವನೇ ನಮ್ಮ ನಿಮ್ಮೆಲ್ಲರ ಪರಮಾನಂದ
ಶ್ರೀರಾಮಕೃಷ್ಣರ ಒಲವಿನ ಶಿಷ್ಯನಾದ
ಗುರುವಾಜ್ಞೆಯನು ಬಿಡದೆ ಪರಿಪಾಲಿಸಿದ
ಚಿರಂಜೀವಿಯಾಗಿ ಎಲ್ಲರ ಹೃದಯ ಹೊಕ್ಕಿದ
ಅವನೇ ನಮ್ಮ ನಿಮ್ಮೆಲ್ಲರ ವಿವೇಕಾನಂದ


Post Comment