Loading Now

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಬಗ್ಗೆ ಎಂ.ಡಿ.ಸಿ.ಸಿ. ಬ್ಯಾಂಕ್  ಉಪಾಧ್ಯಕ್ಷ  ಹಾಗೂ ಮೈಮುಲ್ ನಿರ್ದೇಶಕ ಬಿ.ಎನ್.ಸದಾನಂದ  ಹೇಳಿಕೆ.

ತಿ.ನರಸೀಪುರ. ಅ.20:-ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸದೃಢವಾಗಿದ್ದಾಗ ಮಾತ್ರ ಸಮಾಜದ ಕಟ್ಟ ಕಡೆಯ ರೈತರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಎಂ.ಡಿ.ಸಿ.ಸಿ. ಬ್ಯಾಂಕ್  ಉಪಾಧ್ಯಕ್ಷ  ಹಾಗೂ ಮೈಮುಲ್ ನಿರ್ದೇಶಕ ಬಿ.ಎನ್ .ಸದಾನಂದ ತಿಳಿಸಿದರು.

ವರುಣಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಿಳಿಗೆರೆ ಗ್ರಾಮದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ನೆರವು ಮತ್ತು ನಬಾರ್ಡ್ ಅಡಿಯ ಆತ್ಮ ನಿರ್ಭರ ಯೋಜನೆಯಲ್ಲಿ 25 ಲಕ್ಷ ಹಾಗೂ ಶಾಸಕರ ನಿಧಿಯ10 ಲಕ್ಷ ಒಟ್ಟು 35 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಿಳಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಹು ವಾಣಿಜ್ಯ ಮಳಿಗೆಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಸಹಕಾರ ಸಂಘಗಳು ಸದೃಢವಾಗಿದ್ದಾಗ ಮಾತ್ರ ಆ ವ್ಯಾಪ್ತಿಯ ರೈತರಿಗೆ ಬೆನ್ನೆಲುಬಾಗಿ ಸಂಘ ನಿಲ್ಲಲು ಸಾಧ್ಯ ಹಾಗಾಗಿ ಸಹಕಾರ ಸಂಘಗಳು ರೈತರ ಸೇವೆಯ ಜೊತೆಗೆ ಸಂಘಕ್ಕೆ ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳಬೇಕು ಇಲ್ಲದಿದ್ದರೆ ಸಹಕಾರಿ ಸಂಘ  ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಂದು ಸಹಕಾರಿ ಸಂಘಗಳು ಸಹ ಆದಾಯದ ಮೂಲಗಳನ್ನು ಸೃಷ್ಟಿಸಿ ಕೊಳ್ಳಬೇಕು ಎಂದರು.
ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದ ಲ್ಲೂ ಕೃಷಿ ಪತ್ತಿನ ಸಹಕಾರ ಸಂಘಗಳು ಉದಯವಾಗಬೇಕು ಆಗ ಮಾತ್ರ ಸರ್ಕಾರದ ಸೌಲಭ್ಯಗಳಾದ ಶೂನ್ಯ ಮತ್ತು ಕಡಿಮೆ ಬಡ್ಡಿ ದರದ ಸಾಲಗಳನ್ನು ಸ್ಥಳೀಯ ರೈತರಿಗೆ ತಲುಪಿಸಿ ರೈತರನ್ನು ಆರ್ಥಿಕವಾಗಿ ಚೇತರಿಸಬಹುದು ಎಂದರು.
ಬಿಳಿಗೆರೆ ಕೃಷಿ ಪತ್ತಿನ ಸಹಕಾರ ಸಂಘ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಸಂಘದ ಆರ್ಥಿಕ ನೆರವು ಹಾಗೂ ಶಾಸಕರ ನಿಧಿಯ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ನಿರ್ಮಾಣ ಮಾಡುತ್ತಿರುವ ಬಹು ವಾಣಿಜ್ಯ ಮಳಿಗೆ ಸುಂದರ ಮತ್ತು ಗುಣಮಟ್ಟ ದಿಂದ ಕೂಡಿರಲಿದೆ ಹಾಗೆ ಸಂಘದ ಸಭೆ ಮತ್ತು ಇನ್ನಿತರ ಕಾರ್ಯಕ್ಕೆ ಸಭಾಂಗಣ ಇದರ ಜೊತೆಗೆ ದಾಸ್ತಾನು ಕೊಠಡಿ ಸಹ ನಿರ್ಮಾಣ ವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್ ,ಬಿಲಿಗೆರೆ ಪಿ.ಎ.ಸಿ.ಸಿ.ಬಿ ಅಧ್ಯಕ್ಷ  ಸೋಮಣ್ಣ  ಉಪಾಧ್ಯಕ್ಷ  ಶಿವಣ್ಣ ,ನಿರ್ದೇಶಕರುಗಳಾದ ಜಿ.ಡಿ.ಮಹೇಶ್ ,ಕೆ.ಬಿ.ಚಂದ್ರಶೇಖರ್,ಶಿವಪ್ರಸಾದ್,ರವಿ,ಶಿವಕುಮಾರ್ ,ಎಂ.ಆರ್.ಲಕ್ಷ್ಮಣನಾಯಕ, ರವಿಕುಮಾರ್ ಪಚ್ಚೆತಾಯಮ್ಮ,ಜಗದೀಶ್ ,ನೀಲಮ್ಮ,  ಕಾರ್ಯದರ್ಶಿ  ಮಹದೇವಸ್ವಾಮಿ, ಗುಮಾಸ್ತೆ ರಮ್ಯ ಮತ್ತಿತರರು ಹಾಜರಿದ್ದರು.

Previous post

ತಾಲ್ಲೂಕು ಮಟ್ಟದ ಅಧಿಕಾರಗಳು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವ ಬಾವಿ ಸಭೆಗೆ ಗೈರು ಹಾಜರಾಗಿದ್ದ ಕಾರಣ ಸಭೆ ಮುಖಂಡರ ಆಕ್ರೋಶಕ್ಕೆ ತುತ್ತಾಗಿ ರದ್ದಾಯಿತು

Next post

ತಿ.ನರಸೀಪುರ ತಾಲ್ಲೂಕನ್ನು ಸಂಪೂರ್ಣ ಕೊರೊನಾ ಲಸಿಕಾ ಮುಕ್ತ ತಾಲ್ಲೂಕನ್ನಾಗಿಸಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ತಾಲ್ಲೂಕು ದಂಡಾಧಿಕಾರಿ ಬಿ.ಗಿರಿಜಾ ಮನವಿ.

Post Comment

You May Have Missed