Loading Now

ಪೌರ ಕಾರ್ಮಿಕರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೂಡಬೇಕು ಎಂದು ಶಾಸಕ ಎಂ.ಅಶ್ವಿನ್ ಕುಮಾರ್.

ತಿ.ನರಸೀಪುರ. ಅ.02:-ಪೌರ ಕಾರ್ಮಿಕರ ಶ್ರಮದ ಸೇವೆ ಅತ್ಯುತ್ತಮ ಹಾಗೂ ಅಷ್ಟೆ ಅಪಾಯಕಾರಿ ಸೇವೆಯಾಗಿರು ವುದರಿಂದ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೂಡಬೇಕು ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಬನ್ನೂರು ಪುರಸಭೆ ಸಭಾಂಗಣದಲ್ಲಿ ಅಯೋಜನೆಗೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಸುರಕ್ಷತಾ ದಿರಿಸು ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು ಪ್ರತಿ ದಿನ ಪಟ್ಟಣವನ್ನು ಸ್ವಚ್ಚತೆ ಮಾಡಿ ಆರೋಗ್ಯಕರ ವಾತವರಣ ಕಲ್ಪಿಸಲು ಹೆಣಗಾಡುವ ಪೌರ ಕರ್ಮಿಕರು ತಮ್ಮ ಆರೋಗ್ಯದ ಕಡೆಗೂ ಅಷ್ಟೇ ಗಮನ ನೀಡಬೇಕು ಏಕೆಂದರೆ ಇತರರಂತೆ ತಮಗೂ ತಮ್ಮದೇಯಾದ ಕುಟುಂಬ ಇದೇ ಇದನ್ನ ಮರೆಯಬಾರದು ಎಂದು ಕಿವಿ ಮಾತು ಹೇಳಿದರು.

ಕೋವಿಡ್-19 ಸಂಕಷ್ಟದಲ್ಲಿ ತಂದೆ ತಾಯಿ, ಸಂಬಂಧಿಗಳನ್ನು ಮುಟ್ಟಲು ಆಗದೇ ಇರುವ ಸಂದರ್ಭದಲ್ಲಿ ಪೌರ ಕಾರ್ಮಿಕರು ನಗರದ ಸ್ಪಚ್ಚತೆಯೊಂದಿಗೆ ಮನೆ ಮನೆಗೆ ತೆರಳಿ ಜನರಿಗೆ ಒದಗಿಸಿರುವ ಸೇವೆ ಅನನ್ಯವಾದುದು,ಅವರು ತಮ್ಮ ಮತ್ತು ತಮ್ಮ ಕುಟುಂಬದ ಆರೋಗ್ಯವನ್ನು ಲೆಕ್ಕಿಸದೆ ನಿತ್ಯ ಶುಚಿತ್ವದ ಕಾಯಕವನ್ನು ಮಾಡಿದ್ದಾರೆ ಅವರ ಶ್ರಮ ಮೆಚ್ಚಲೇ ಬೇಕಾದದ್ದು ಎಂದರು.

ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ಕೃಷ್ಣ ಮಾತನಾಡಿ
ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸ್ವಚ್ಚ ಸಮಾಜವನ್ನು ನಿರ್ಮಿಸುವ ಶ್ರೇಷ್ಠ ಹುದ್ದೆಯುಳ್ಳವರು ಇವರಿಗೆ ಗೌರವ ನಿಡುವ ಮೂಲಕ  ನಾವೇಲ್ಲರು ಉತ್ತಮ ನಾಗರಿಕರಾಗೋಣ ಎಂದರಲ್ಲದೆ ಪೌರ ಕಾರ್ಮಿಕರ ಮಕ್ಕಳು ಪೌರ ಕಾರ್ಮಿಕರಾಗಿ ಉಳಿಯುವುದು ಬೇಡ ತಮ್ಮ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನ ಹೊಂದಲು ಉನ್ನತ ವ್ಯಾಸಂಗ ಮಾಡಿಸಿ ಎಂದರು.


*ಬಾಕ್ಸ್ ಸುದ್ದಿ*

“ಸ್ವಚ್ಚತೆ ಎಂಬುದು ಪುರಸಭೆಯ ಪ್ರಮುಖ ವಿಷಯವಾಗಿದ್ದು ಇದನ್ನು ಗೌರವದಿಂದ ಕಾಣುವವರು ಪೌರ ಕಾರ್ಮಿಕರು, ಪರಿಸರ ಸ್ವಚ್ಛತೆಯ ಜೊತೆಗೆ ಜನರ ಮನೋಭಾವವನ್ನು ಬದಲಾಯಿಸುವುದು ಸ್ವಚ್ಛ ಭಾರತದ ಪರಿಕಲ್ಪನೆ ಯಾಗಿದ್ದು ಈ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರನ್ನು ಪ್ರೀತಿ ವಿಶ್ವಾಸದಿಂದ ಗೌರವಿಸುವುದು ಎಲ್ಲರ ಜವಬ್ದಾರಿ”

ಮಹಾದೇವು,
ಪುರಸಭೆ ಮುಖ್ಯಾಧಿಕಾರಿ.


“ಪೌರಕಾರ್ಮಿಕರಿಲ್ಲದ ನಮ್ಮ ನಿತ್ಯದ ಬದುಕನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ ಮುಂಜಾನೆ ಎದ್ದು ರಸ್ತೆ ಚರಂಡಿ ಸ್ವಚ್ಚತೆ ಮಾಡಿ ಪಟ್ಟಣವನ್ನು ಸುಂದರವಾಗಿಡುವ ಪೌರಕಾರ್ಮಿಕರು ನಮಗೆ ದೇವರ ಸಮಾನರು”

ಭಾಗ್ಯಶ್ರೀ ಕೃಷ್ಣ .ಪುರಸಭೆ ಅಧ್ಯಕ್ಷರು
.

ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶೋಭಾ ಸತೀಶ್  ಪರಿಸರ  ಅಭಿಯಂತರ ಧನಂಜಯ್  ಸದಸ್ಯರುಗಳಾದ ಎಸ್.ಭಾಗ್ಯ,ಎಂ.ಕೆ.ಮಹೇಶ್,ಬಿ.ಕೆ.ಆನಂದ್, ಬಿ.ಎಸ್.ಶೃತಿ.ಕೃಷ್ಣೇ ಗೌಡ, ಸೌಮ್ಯರಾಣಿ, ನಂಜುಂಡ ಸ್ವಾಮಿ, ಬಿ.ಆರ್. ಶ್ರೀನಿವಾಸ್, ಅನಂತ ಮೂರ್ತಿ, ನಾಗರತ್ನ ಪ್ರಭಾಕರ್, ದಿವ್ಯ , ಪೀರ್ ಖಾನ್ , ಲೋಕಾಂಬಿಕ, ಪುಷ್ಪವತಿ, ಮೂರ್ತಿ, ಶಾಂತರಾಜು,ಶಿವಣ್ಣ , ಚೆಲುವ ರಾಜು, ವಿಜಯಕುಮಾರ್ ,ಸಿ.ಸುರೇಶ್ ,ಫಿರ್ಧೋಸ್ ಮತ್ತಿತರರು ಹಾಜರಿದ್ದರು. 

Previous post

ಕರೋನಾ ವೀರರಂತೆ ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸಿದರು ಎಂದು ಪುರಸಭೆ ಮುಖ್ಯಾಧಿಕಾರಿ ಜಿ. ಗಿರೀಶ್.

Next post

ಸಿರಿ ಧಾನ್ಯಗಳ ಉಪಯೋಗಿಸಿ ಆರೋಗ್ಯ ಸಮಸ್ಯಯಿಂದ ಹೊರಬಂದು ಕ್ರಿಯ ಶೀಲರಾಗಿ ಎಂದು ಜೀನಿ ಮಿಲ್ಲೆಟ್ ಹೆಲ್ತ್ ಮಿಕ್ಸ್ ಮಾಲೀಕರಾದ ದೀಲಿಪ್ ಕುಮಾರ್.

Post Comment

You May Have Missed