ಪುರಸಭೆ ನೂತನ ಅಧ್ಯಕ್ಷರಾದ ಮದನ್ ರಾಜ್ ರವರನ್ನು ತಾಲ್ಲೂಕು ಶಿಕ್ಷಕರ ಸಂಘದ ವತಿಯಿಂದ ಸನ್ಮಾನ.
ತಿ.ನರಸೀಪುರ. ಅ.31:- ಪುರಸಭೆ ನೂತನ ಅಧ್ಯಕ್ಷರಾದ ಮದನ್ ರಾಜ್ ರವರನ್ನು ತಾಲ್ಲೂಕು ಶಿಕ್ಷಕರ ಸಂಘದ ವತಿಯಿಂದ ಪಟ್ಟಣದ ಚಿಕ್ಕಮ್ಮ ತಾಯಿ ಯಾತ್ರಿ ಭವನದಲ್ಲಿ ಸನ್ಮಾನಿಸಲಾಯಿತು .
ಸನ್ಮಾನ ಸ್ವೀಕರಿಸಿ ಮತನಾಡಿದ ಮದನ್ ರಾಜ್ ತಾಲ್ಲೂಕು ಶಿಕ್ಷಕರ ಸಂಘದ ಹಾಗೂ ಶಿಕ್ಷಕರ ಹಿತ ಕಾಯುವ ಕೆಲಸವನ್ನು ನನ್ನ ಶಕ್ತಿ ಮೀರಿ ಮಾಡುತ್ತೇನೆ ಪಟ್ಟಣದಲ್ಲಿ ಶಿಕ್ಷಕರು ಹಾಗೂ ಶಾಲೆಗಳಿಗೆ ಪುರಸಭೆ ಯಿಂದ ಯಾವುದೇ ಕೆಲಸಗಳು ಆಗಬೇಕಾಗಿದ್ದರೆ ಅವುಗಳನ್ನು ಕಾಲ ಮಿತಿಯೊಳಗೆ ನಿಯಮಾನುಸಾರ ಮಾಡಲಾಗುತ್ತದೆ ಶಿಕ್ಷಕರು ತಮಗೆ ಪುರಸಭೆಯಲ್ಲಿ ಏನೇ ಕೆಲಸಗಳಿದ್ದರು ನನಗೆ ದೂರವಾಣಿ ಕರೆ ಮಾಡಿದರೆ ಸಾಕು ಆ ಕೆಲಸದ ಬಗ್ಗೆ ತುರ್ತು ಗಮನ ಹರಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಡಿ.ಮಾದಪ್ಪ,ಉಪಾಧ್ಯಕ್ಷ ಸೋಮಶೇಖರ, ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ಕಾರ್ಯದರ್ಶಿ ಜಿ. ಮಲ್ಲಣ, ಸಹ ಕಾರ್ಯದರ್ಶಿ ಜನಾರ್ಧನ,ಧರ್ಮೇಂದ್ರ ಪ್ರಸಾದ್, ಜಿಲ್ಲಾ ಸದಸ್ಯ ಬಸವರಾಜು, ಸಂಘಟನಾ ಕಾರ್ಯದರ್ಶಿ ಗೋವಿಂದ್, ನಿರ್ದೇಶಕರಾದ ನಾಗೇಂದ್ರ, ಪ್ರಸನ್ನ,ಪ್ರಕಾಶ್,ಮಾಜಿ ಪುರಸಭೆ ಅಧ್ಯಕ್ಷ ಸೋಮಣ್ಣ ಮತ್ತಿತರರು ಹಾಜರಿದ್ದರು.




Post Comment