Loading Now

ನೂತನ ರೆಸ್ಟೋರೆಂಟ್‌ಗೆ ಉದ್ಘಾಟ


ಕೋಲಾರ, ಸೆ.೦೬: ಶುಚಿ ರುಚಿ ಹಾಗೂ ಎಲ್ಲಾ ವರ್ಗದವರಿಗೂ ಕೈಗೆಟಕುವ ಬೆಲೆಯಲ್ಲಿ ಅತ್ಯುತ್ತಮ ಆಹಾರವನ್ನು ಜನತೆಗೆ ಒದಗಿಸುವ ಮೂಲಕ ಹೆಚ್.ಎಂ.ಟಿ.ರೆಸ್ಟೋರೆಂಟ್ ಜನಪ್ರಿಯತೆ ಗಳಿಸಲಿ ಎಂದು ವಾಲ್ಮೀಕಿ ಸಮುದಾಯದ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು ಸಲಹೆ ನೀಡಿದರು.
ಅವರು ನರಸಾಪುರ ಬೈಪಾಸ್ ನಲ್ಲಿ ಭಾನುವಾರ ನೂತನ ಹೆಚ್.ಎಂ.ಟಿ.ರೆಸ್ಟೋರೆಂಟ್ ಮತ್ತು ಡಾಬಾಕ್ಕೆ ಉದ್ಘಾಟನೆ ಮಾಡಿ ಮಾತನಾಡುತ್ತಾ, ರೆಸ್ಟೋರೆಂಟ್ ಕೇವಲ ವ್ಯಾಪಾರ ಹಾಗೂ ಹಣ ಮಾಡಲು ಚಿಂತನೆ ಮಾಡದೆ ಸೇವೆ ಎಂದು ಭಾವಿಸಿ ಜನರಿಗೆ ರುಚಿಕರವಾದ ಆಹಾರವನ್ನು ಒದಗಿಸಬೇಕೆಂದು ತಿಳಿಸಿದರು.
ರೆಸ್ಟೋರೆಂಟ್ ಮಾಲೀಕರುಗಳಾದ ಬಿ.ಡಿ.ಎಮ್. ಅಶ್ವಥ್ ಹಾಗೂ ಶಾಂತಕುಮಾರ್ ಮಾತನಾಡಿ, ರೆಸ್ಟೋರೆಂಟ್ ನಲ್ಲಿ ಸಸ್ಯಹಾರಿ ಮತ್ತು ಮಾಂಸಾಹಾರಿ ಆಹಾರಗಳು ದೊರೆಯಲಿದ್ದು, ನುರಿತ ಕಲ್ಕತ್ತ ಬಾಣಸಿಗರು ಅತ್ಯುತ್ತಮ ರುಚಿಯಾದ ಹಾಗೂ ಶುಚಿಯಾದ ಆಹಾರ ತಯಾರಿಸಿ ಕೊಡುತ್ತಾರೆ, ವಿಶಾಲವಾದ ಪಾರ್ಕಿಂಗ್ ಇದ್ದು, ಕುಟುಂಬ ಸಮೇತರಾಗಿ ಊಟ ಸವಿಯಲು ಒಮ್ಮೆ ಭೇಟಿ ನೀಡಲು ಜನತೆಯಲ್ಲಿ ವಿನಂತಿಸಿದರು.
ಈ ಸಂಧರ್ಭದಲ್ಲಿ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವ ವರ್ತೂರು ಅರ್.ಪ್ರಕಾಶ್, ಸೇರಿದಂತೆ ಹಲವಾರು ಗಣ್ಯರು ರೆಸ್ಟೋರೆಂಟ್ ಗೆ ಭೇಟಿನೀಡಿ ಶುಭ ಕೋರಿದರು.

Post Comment

You May Have Missed