Loading Now

ನಮ್ಮ ನಾಡ ಸಂಸ್ಕೃತಿಯ ಸೊಬಗನ್ನು ಉಳಿಸಿ ಬೆಳಸಬೇಕಾದುದ್ದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ: ತಾಲ್ಲೂಕು ದಂಡಾಧಿಕಾರಿ ಬಿ.ಗಿರಿಜಾ

ತಿ.ನರಸೀಪುರ. ನ.01:-ನಮ್ಮ ನಾಡ ಸಂಸ್ಕೃತಿಯ ಸೊಬಗು, ನಮ್ಮ ಪೂರ್ವಿಕರು ನಮಗಾಗಿ ಬಿಟ್ಟು ಹೋದ ಬಹು ದೊಡ್ಡ ಆಸ್ತಿ ಇದನ್ನು ಉಳಿಸಿ ಬೆಳಸಬೇಕಾದುದ್ದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಮತ್ತು ಕರ್ತವ್ಯ ವಾಗಿದೆ ಎಂದು ತಾಲ್ಲೂಕು ದಂಡಾಧಿಕಾರಿ ಬಿ.ಗಿರಿಜಾ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಛೇರಿ ಹೊರ ಆವರಣ ದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಡ ಧ್ವಜರೋಹಣ ಮತ್ತು ರಾಷ್ಟ್ರ ಧ್ವಜರೋಹಣ ನೆರವೇರಿಸಿ ಕನ್ನಡಾಂಭೆಯ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ದಂಡಾಧಿಕಾರಿ ಗಿರಿಜಾ ರಾಷ್ಟ್ರ ಕವಿ ಕುವೆಂಪು ರವರು ಹೇಳಿರುವಂತೆ ನಾವು ಎಲ್ಲೇ ಇದ್ದರು ನಾಡು, ನುಡಿಯ ಬಗ್ಗೆ ಅಭಿಮಾನ ಇರಬೇಕು ಎಂದರು.
ಕನ್ನಡಭಾಷೆಗೆ ತನ್ನದೇ ಆದಂತಹ ಇತಿಹಾಸ ಪರಂಪರೆವಿದೆ ಕನ್ನಡ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು ಹಾಗೂ ಕನ್ನಡ ಭಾಷೆಯಲ್ಲಿ ಹಲವು ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ನಮ್ಮ ದೇಶದಲ್ಲಿ ಕರ್ನಾಟಕದ ಸಾಹಿತಿಗಳು ಒಳ್ಳೆಯ ಕೀರ್ತಿ ಯನ್ನು ತಂದುಕೊಟ್ಟಿದ್ದಾರೆ. ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ನಮ್ಮ ಕರ್ನಾಟಕ ರಾಜ್ಯ ಒಳ್ಳೆಯ ರೀತಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಹುಟ್ಟಿದ ಪ್ರತಿಯೊಬ್ಬರು ಕನ್ನಡವನ್ನು ಬೆಳೆಸುವ ಉಳಿಸುವ ಕಾರ್ಯಕ್ಕೆ ಕೈಜೋಡಿಸಬೇಕಾಗಿದೆ ಎಂದರಲ್ಲದೆ ತಾಲ್ಲೂಕಿನ ಜನತೆಗೆ ಕನ್ನಡದ ರಾಜ್ಯೋತ್ಸವದ ಶುಭಾಶಯ ಕೋರಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ವಿಷದಲ್ಲಿ 100 ಕ್ಕೆ 100 ಅಂಕ ಪಡೆದ ತಾಲ್ಲೂಕಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ, ಉಪ ತಹಶೀಲ್ದಾರ್ ಜೆ.ಕೆ.ಪ್ರಭುರಾಜ್,ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ,ನರೇಗಾ ಸಹಾಯಕ ನಿರ್ದೇಶಕ ಮಹದೇವು,ಎಡಿಎಂ ಮಹದೇವ ನಾಯಕ, ಕಸಬಾ ರಾಜಸ್ವ ನಿರೀಕ್ಷಕ ಸರ್ವೇಸ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಮತ್ತು ಶಾಲಾ ಮಕ್ಕಳು ಶಿಕ್ಷಕರು ಭಾಗವಹಿಸಿದ್ದರು.

Post Comment

You May Have Missed