Loading Now

ಧ್ವಜಗಳನ್ನು ವಿಲೇವಾರಿಯನ್ನು ಜಿಲ್ಲಾಡಳಿತ ಗೌರವಗಳೊಂದಿಗೆ ವಿಲೇವಾರಿ ಮಾಡಬೇಕು:ವಿಕ್ರಂ ಅಯ್ಯಂಗಾರ್.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದಾದ್ಯಂತ ‘ಹರ್‌ ಘರ್‌ ತಿರಂಗ’ ಕಾರ್ಯಕ್ರಮದಡಿ ಎಲ್ಲೆಡೆ ರಾಷ್ಟ್ರಧ್ವಜ ಹಾರಿಸಲಾಗುತ್ತಿದ್ದು ಸಾರ್ವಜನಿಕರು ಧ್ವಜಸಂಹಿತೆ ಅರಿತು ರಾಷ್ಟ್ರಧ್ವಜಕ್ಕೆ ಅಪಮಾನವಾಗದಂತೆ ತ್ರಿವರ್ಣ ಹಾರಿಸಬೇಕು ಎಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಮನವಿ ಮಾಡಿದರು.

‘ಕೇಂದ್ರ ಸರ್ಕಾರ ಆ.13ರಿಂದ 15ರವರೆಗೆ ಧ್ವಜ ಹಾರಿಸಲು ಇರುವ ನಿಬಂಧನೆಗಳನ್ನು ಸಡಿಲಗೊಳಿಸಿದ್ದು, ಆ.13ರ ಬೆಳಿಗ್ಗೆ 8 ರಿಂದ 15ರ ಸಂಜೆ 6ರವರೆಗೆ ಸಾರ್ವಜನಿಕರು ರಾಷ್ಟ್ರಧ್ವಜಗಳನ್ನು ಹಾರಿಸಲು ಅವಕಾಶ ನೀಡಿದೆ’ ಎಂದರು. 2007ರಲ್ಲಿ ಧ್ವಜ ಸಂಹಿತೆ ಬಂದಿದ್ದು ಉಲ್ಲಂಘನೆಗೆ ಕಾನೂನಿನಡಿ ಶಿಕ್ಷೆ ಇದ್ದು ರಾಷ್ಟ್ರಧ್ವಜಕ್ಕೆ ಅಪಮಾನವಾಗುವ ರೀತಿ ಯಲ್ಲಿ ಯಾರೂ ಧ್ವಜ ಹಾರಿಸ ಬಾರದು. ಧ್ವಜಾರೋಹಣದ ಬಳಿಕ ಧ್ವಜಗಳನ್ನು ರಸ್ತೆಗಳಿಗೆ ಎಸೆಯ ಬಾರದು. ಕಸಕ್ಕೆ ಹಾಕಬಾರದು, ಗುಂಡಿಯಲ್ಲಿ ಹೂಳಬಾರದು, ಸುಡಬಾರದು. ಧ್ವಜಗಳನ್ನು ವಿಲೇವಾರಿ ಮಾಡಲು ಜಿಲ್ಲಾಡಳಿತದಿಂದ ಅಗತ್ಯ ವ್ಯವಸ್ಥೆ ಮಾಡಲು ಮುಂದಾಗಬೇಕು ಆ.16ರ ಬಳಿಕ ಸಾರ್ವಜನಿಕರಿಂದ ಹಾಗೂ ಸಂಘ ಸಂಸ್ಥೆಗಳಿಂದ ಧ್ವಜಗಳನ್ನು ಸಂಗ್ರಹಿಸಿ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸಪ್ತಾಹದಲ್ಲಿ ಸಕಲ ಗೌರವಗಳೊಂದಿಗೆ ವಿಲೇವಾರಿ ಮಾಡಬೇಕು ಎಂದು ಮನವಿ ಮಾಡಿದರು.

ವಿಕ್ರಂ ಅಯ್ಯಂಗಾರ್.

Post Comment

You May Have Missed