ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಸ್ಮರಣೀಯರು: ರಾಜ್ಯ ಕಾಂಪೊಸ್ಟ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಮಹದೇವಯ್ಯ
ತಿ.ನರಸೀಪುರ. ಸೆ.26:-ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಸ್ಮರಣೀಯರು,ಅವರು ದೇಶದ ಸ್ವಾಭಿಮಾನ, ಸಮಾನತೆ, ಸೋದರ ಭಾವನೆಗಳನ್ನು ಬೆಳೆಸುವ ಸನ್ಮಾರ್ಗಕ್ಕೆ ಬೆಳಕಾಗಿದ್ದರು ಎಂದು ರಾಜ್ಯ ಕಾಂಪೊಸ್ಟ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಮಹದೇವಯ್ಯ ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ಹುಟ್ಟು ಹಬ್ಬದ ಪ್ರಯುಕ್ತ
ಪಟ್ಟಣದ ಮಹಾಶಕ್ತಿ ಕೇಂದ್ರದಲ್ಲಿ ಜರುಗುತ್ತಿರುವ ಸೇವಾ ದಿವಸ ಕಾರ್ಯ ಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮಹದೇವಯ್ಯ ಪುರಸಭೆ ಸದಸ್ಯ ಎಸ್.ಕೆ. ಕಿರಣ್ ರವರ ನಿವಾಸದಲ್ಲಿ ಅಯೋಜನೆ ಮಾಡಲಾಗಿದ್ದ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ, ಉಪಾಧ್ಯಾಯರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ದೀನ್ ದಯಾಳ್ ರವರು ಅಧಿಕಾರಕ್ಕಾಗಿ ಎಂದೂ ಆಸೆ ಪಟ್ಟವರಲ್ಲ. ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವ ಕಳಕಳಿ ಹೊಂದಿದ್ದರು, ಸಮಾಜದಲ್ಲಿ ಮೇಲು-ಕೀಳು ಭಾವನೆ ದೂರವಾಗಬೇಕೆಂದು ಬಯಸಿದ್ದರು. ಸರಕಾರಿ ಯೋಜನೆಗಳು ಶ್ರೀಸಾಮಾನ್ಯರಿಗೆ ತಲುಪಬೇಕು, ಬಡವರು ಸ್ವಯಂ ಪ್ರೇರಣೆಯಿಂದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕರೆ ಕೊಟ್ಟ ದಿನ್ ದಯಾಳ್ ಉಪಾಧ್ಯಾಯರು ಕಷ್ಟ ಮತ್ತು ಸುಖಕ್ಕೆ ಒಲಿಯುವುದೇ ನಾಗರಿಕತೆ, ಯುವಜನತೆ ದುಶ್ಚಟಗಳ ದಾಸರಾಗುವುದರ ಬದಲು ಪರಂಪರೆಯ ಮೌಲ್ಯಗಳ ದಾಸರಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಕೆ.ಸಿ.ಲೋಕೇಶ್, ಸಿದ್ದಮಲ್ಲಪ್ಪ ,ಕರುಹಟ್ಟಿ ಮಹದೇವಯ್ಯ, ಮುಖಂಡರಾದ ಅಕ್ಕಿ ನಂಜುಂಡ ಸ್ವಾಮಿ, ನಿಲಸೋಗೆ ಸಿದ್ದರಾಜು, ಮರಡಿಪುರ ನಾಗರಾಜು, ಮೂಗೂರು ಕುಮಾರ್ ,ಕುಮಾರ್, ಮತ್ತಿತರರು ಹಾಜರಿದ್ದರು .



Post Comment