ತಿ.ನರಸೀಪುರ ತಾಲ್ಲೂಕನ್ನು ಸಂಪೂರ್ಣ ಕೊರೊನಾ ಲಸಿಕಾ ಮುಕ್ತ ತಾಲ್ಲೂಕನ್ನಾಗಿಸಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ತಾಲ್ಲೂಕು ದಂಡಾಧಿಕಾರಿ ಬಿ.ಗಿರಿಜಾ ಮನವಿ.
ತಿ.ನರಸೀಪುರ. ಅ.13:- ತಿ.ನರಸೀಪುರ ತಾಲ್ಲೂಕನ್ನು ಸಂಪೂರ್ಣ ಕೊರೊನಾ ಲಸಿಕಾ ಮುಕ್ತ ತಾಲ್ಲೂಕನ್ನಾಗಿಸಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ತಾಲ್ಲೂಕು ದಂಡಾಧಿಕಾರಿ ಬಿ.ಗಿರಿಜಾ ಮನವಿ ಮಾಡಿದರು.
ಪಟ್ಟಣದ ಮಿನಿ ವಿಧಾನ ಸೌಧದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನೆಡಸಿ ಮಾತನಾಡಿದ ದಂಡಾಧಿಕಾರಿಗಳು ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದು ಅದರಂತೆ ತಾಲ್ಲೂಕಿನಲ್ಲಿ ಸರ್ಕಾರ ನೀಡಿರುವ ಕೋವಿಡ್ ನಿಯಮಾನುಸಾರ ಪ್ರತಿಯೊಬ್ಬ ಅರ್ಹರಿಗೂ ಕೊರೊನಾ ಲಸಿಕೆಯನ್ನು ನೀಡಲು ತಾಲ್ಲೂಕು ಆಡಳಿತ ಶ್ರಮಿಸುತ್ತಿದ್ದು, ಸಾರ್ವಜನಿಕರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ತಾಲ್ಲೂಕು ಆಡಳಿತಕ್ಕೆ ಸಹಕಾರ ನೀಡಬೇಕೆಂದರು.
ಪುರಸಭೆ ವ್ಯಾಪ್ತಿಯಲ್ಲಿ ಬೆಳಿಗ್ಗೆ 08 ರಿಂದ ಸಂಜೆ 05 ರವರೆಗೆ ಬೈರಾಪುರ, ಹೆಳವರಹುಂಡಿ,GSF ಕಾಲೋನಿಯ ಅಂಗನವಾಡಿ ಕೇಂದ್ರಗಳು ಹಾಗೂ ಶ್ರೀ ರಾಂಪುರ ಬೀದಿ,ಆರೋಗ್ಯ ಕೇಂದ್ರ, ಇಂದಿರಾ ಕಾಲೋನಿ,ಆರೋಗ್ಯ ಕೇಂದ್ರ,
ಆಲಗೂಡು ಆರೋಗ್ಯ ಕ್ಷೇಮ ಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತದೆ ಅಲ್ಲದೆ ಹೋಬಳಿ ಮಟ್ಟದ ಗ್ರಾಮಗಳ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ನೀಡುತ್ತಿದ್ದು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಲಸಿಕೆ ಪಡೆಯಬೇಕೆಂದು ತಿಳಿಸಿದರು.
ಮುಂದು ಮತನಾಡಿದ ದಂಡಾಧಿಕಾರಿಗಳು ತಾಲ್ಲೂಕನ್ನು ಕೊರೊನಾ ಮುಕ್ತವಾಗಿಸಲು ಪ್ರತಿಯೊಬ್ಬರ ಸಹಕಾರ ತಾಲ್ಲೂಕು ಆಡಳಿತಕ್ಕೆ ಅತ್ಯವಶ್ಯಕವಾಗಿರುವುದರಿಂದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಜನಪ್ರತಿನಿಧಿಗಳು, ಸರ್ಕಾರಿ ನೌಕರರು, ಎಲ್ಲಾ ಸಮುದಾಯದ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು, ಮಹಿಳಾ ಸ್ವಸಹಾಯ ಸಂಘದವರು ಸೇರಿದಂತೆ ಇತರೆ ಮುಖಂಡರು ಸಾರ್ವಜನಿಕರ ಮನವೊಲಿಸಿ ಲಸಿಕೆಯನ್ನು ಹಾಕಿಸಿಕೊಳ್ಳಲು ಉತ್ತೇಜಿಸಬೇಕೆಂದು ಮನವಿ ಮಾಡಿದರು.



Post Comment