ತಾಲ್ಲೂಕು ಮಟ್ಟದ ಅಧಿಕಾರಗಳು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವ ಬಾವಿ ಸಭೆಗೆ ಗೈರು ಹಾಜರಾಗಿದ್ದ ಕಾರಣ ಸಭೆ ಮುಖಂಡರ ಆಕ್ರೋಶಕ್ಕೆ ತುತ್ತಾಗಿ ರದ್ದಾಯಿತು
ತಿ.ನರಸೀಪುರ. ಅ.13:- ತಾಲ್ಲೂಕು ಮಟ್ಟದ ಅಧಿಕಾರಗಳು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವ ಬಾವಿ ಸಭೆಗೆ ಗೈರು ಹಾಜರಾಗಿದ್ದ ಕಾರಣ ಸಭೆ ಮುಖಂಡರ ಆಕ್ರೋಶಕ್ಕೆ ತುತ್ತಾಗಿ ರದ್ದಾಯಿತು.
ಪಟ್ಟಣದ ತಾಲ್ಲೂಕು ಕಛೇರಿಯ ದಂಡಾಧಿಕಾರಿಗಳ ನ್ಯಾಯಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ತಾಲ್ಲೂಕು ದಂಡಾಧಿಕಾರಿಗಳು ಆದ ಬಿ.ಗಿರಿಜಾ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪೂರ್ವ ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗಿದ್ದ ಕಾರಣ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು ಇದರ ಪರಿಣಾಮ ನಿಗದಿತ ಸಭೆ ರದ್ದಾಯಿತು.
ಸಭೆ ಪ್ರಾರಂಭದಲ್ಲಿ ಮಾಜಿ.ತಾ.ಪಂ.ಉಪಾಧ್ಯಕ್ಷ ಬಿ.ಮರಯ್ಯ ಮಾತನಾಡಿ ರಾಷ್ಟ್ರ ನಾಯಕರು ,ಚಿಂತಕರು ಸೇರಿದಂತೆ ದೇಶದ ಮಹನೀಯರ ಜಯಂತಿ ಕಾರ್ಯಕ್ರಮಗಳು ಹಾಗೂ ಕಾರ್ಯಕ್ರಮ ಅಯೋಜನೆಯ ಸಿದ್ದತೆ ಸಭೆಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ನಿರಂತರ ಗೈರು ಹಾಗುವ ಮೂಲಕ ನಿರಾಶಕ್ತಿ ತೋರುವ ಮೂಲಕ ಅವರ ಬೇಜವಾಬ್ದಾರಿತವನ್ನು ಪ್ರದರ್ಶನ ಮಾಡುತ್ತಿದ್ದಾರೆ ಇವರ ವರ್ತನೆಯಿಂದ ಸಭೆಗೆ ಹಾಜರಾಗಿರುವ ಮುಖಂಡರಿಗೆ ಅವಮಾನವಾಗುತ್ತಿದೆ ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು ಇದಕ್ಕೆ ಧ್ವನಿಗೂಡಿಸಿದ ತಾಲ್ಲೂಕು ದಲಿತ ಒಕ್ಕೂಟಗಳ ಸಂಚಾಲಕ ಡಾ.ಆಲಗೂಡು ಚಂದ್ರಶೇಖರ್ ತಾಲ್ಲೂಕು ಆಡಳಿತ ತಮ್ಮ ಅಧೀನ ಅಧಿಕಾರಿಗಳು ಸಭೆಯಲ್ಲಿ ಹಾಜರಿರಲು ಸೂಚನೆ ನೀಡುವ ಶಕ್ತಿ ಇಲ್ಲದಿದ್ದರೆ ಈ ರೀತಿಯ ಸಭೆ ಮಾಡಿ ಏನು ಪ್ರಯೋಜನವಿಲ್ಲ ಮೊದಲು ಸಭೆಗೆ ಅಧಿಕಾರಿಗಳನ್ನು ಕರೆ ತಂದು ಸಭೆ ಮಾಡಿ ಎಂದರು.
ಮುಂದುವರೆದು ಮಾತನಾಡಿದ ಚಂದ್ರಶೇಖರ್ ಯಾವುದೇ ಸಭೆ ಸಮಾರಂಭಗಳಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಹಕಾರಣವಿಲ್ಲದೆ ಗೈರು ಹಾಜರಾದಾಗ ತಾಲ್ಲೂಕು ಆಡಳಿತದ ಮುಖ್ಯಸ್ಥರು ಅವರ ಮೇಲೆ ಶಿಸ್ತು ಕ್ರಮ ಜರುಗಿಸಿದ್ದರೆ ಈ ರೀತಿಯ ಪ್ರಸಂಗ ಮತ್ತೆ ಮತ್ತೆ ಮರುಕಳಿಸುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ ಈ ರೀತಿಯ ಕಾಟಚಾರದ ಸಭೆಗಳನ್ನು ಮಾಡುವ ಬದಲು ತಾವೇ ತಮಗಿಷ್ಟ ಬಂದ ಆಗೆ ಸಭೆ ಮಾಡಿಕೊಳ್ಳುವುದು ಉತ್ತಮ ಎಂದರು.
ಸಭೆಯಲ್ಲಿ ತಲಕಾಡು ಸುಂದರನಾಯಕ ಮಾತನಾಡಿ ಇಂದಿನ ವಾಲ್ಮೀಕಿ ಜಯಂತಿ ಆಚರಣೆ ಪೂರ್ವ ಬಾವಿ ಸಭೆಗೆ ದಲಿತ ಮುಖಂಡರು ಸೇರಿದಂತೆ ಇತರ ಸಮುದಾಯವರನ್ನು ಆಹ್ವಾನಿಸಿಲ್ಲ ಹಾಗೂ ಈ ಸಭೆಗೆ ಬಂದಿರುವ ದಲಿತ ಮುಖಂಡರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸಹ ಇಲ್ಲ ತಾಲ್ಲೂಕು ಆಡಳಿತ ವಾಲ್ಮೀಕಿ ಜಯಂತಿಯನ್ನು ಒಂದು ವರ್ಗಕ್ಕೆ ಸಿಮೀತ ಮಾಡಿದಂತಿದೆ ಹಾಗಾಗಿ ಇಂದಿನ ಪೂರ್ವ ಬಾವಿ ಸಭೆಯನ್ನು ರದ್ದು ಪಡಿಸಿ ಮತ್ತೊಂದು ದಿನಾಂಕವನ್ನು ನಿಗದಿಪಡಿಸುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಮುಖಂಡರ ಸಲಹೆ ಮತ್ತು ಒತ್ತಾಯದ ಮೇರೆಗೆ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪೂರ್ವ ಬಾವಿ ಸಭೆಯನ್ನು ಅ.16 ರ ಶನಿವಾರ ತಾ.ಪಂ.ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ನೆಡಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ತಹಶೀಲ್ದಾರ್ ಬಿ.ಗಿರಿಜಾ ,ತಾ.ಪಂ.ಇಒ ಕೃಷ್ಣ, ಉಪ ತಹಶೀಲ್ದಾರ್ ಜೆ.ಕೆ.ಪ್ರಭುರಾಜ್. ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆ ಮುಖ್ಯಸ್ಥೆ ಕೋಮಲ,ಪುರಸಭೆ ಯೋಜನಾಧಿಕಾರಿ ಕೆಂಪರಾಜು, ಬಿಸಿಎಂ ಅಧಿಕಾರಿ ರಾಜಣ್ಣ ಮುಖಂಡರಾದ ಸೋಸಲೆ ಶಶಿಕಾಂತ್, ಮಹದೇವಯ್ಯ, ಬನ್ನಹಳ್ಳಿ ಸೋಮಣ್ಣ, ಹೆಮ್ಮಿಗೆ ಹೊನ್ನನಾಯಕ, ಚಿನ್ನಸ್ವಾಮಿ,ಬನ್ನೂರು ಚಿಕ್ಕಣ್ಣ,ಶಶಿಧರ್,ಡಾ.ಮಹದೇವಯ್ಯ, ಲೋಕೇಶ್, ಇಂಡವಾಳು ಬಸವರಾಜು, ಗದ್ದೆಮೊಳೆ ಹೊನ್ನನಾಯಕ, ಗೋವಿಂದರಾಜ್ ಮತ್ತಿತರರು ಹಾಜರಿದ್ದರು




Post Comment