Loading Now

ತಾಲೋಕ್ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ

ಹನೂರು :ಪ್ರತಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾಗಿ ಶೌಚಾಲಯವನ್ನು ನರೇಗಾ ಉದ್ಯೋಗ ಯೋಜನೆ ಯಲ್ಲಿ ನಿರ್ಮಿಸಬೇಕೆಂದು ಜಿಲ್ಲಾ ಪಂಚಾಯಿತಿ ಉಪನಿರ್ದೇಶಕರಾದ ಗುಡೂರ್ ಭೀಮಸೇನ ಅಧಿಕಾರಿಗಳಿಗೆ ಸೂಚಿಸಿದರು.

ಹನೂರು ತಾಲೋಕಿನ ತಾಲೋಕ್ ಪಂಚಾಯಿತಿ ಸಭಾಂಗಣದಲ್ಲಿ ನೆಡೆದ ಗ್ರಾಮ ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಯ ನೆಡೆಯಿತ್ತು.

ಈ ಸಂದರ್ಭದಲ್ಲಿ ಬಿಇಓ ಟಿ.ಆರ್. ಸ್ವಾಮಿ ಮಾತನಾಡಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಗಳಲ್ಲಿ 21.615 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಹಾಜರಾತಿ ಪ್ರಮಾಣ 90ರಷ್ಟಿದೆ
ಸುಮಾರು ಶಾಲೆಗಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರೆ,
ಅದರಿಂದ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪೋಷಕರಲ್ಲಿ ಮನವಿ ಮಾಡಲಾಗಿದೆ.

ಎಸ್ಟಿ ವರ್ಗದ ಪಲಾನುಭವಿ ಗಳಿಗೆ ಸುಮಾರು 70 ಟಾರ್ಪಲಿನ್ ಕೊಡಲು ತಾ.ಪಂ.ನಿಂದ ಅನುದಾನ ಕೊಡಲಾಗಿದೆ,ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದ್ರಮ್ಮ ತಿಳಿಸಿದರು.

ಈ ಸಂದರ್ಭದಲ್ಲಿ ತಾ. ಪಂ.ನಿರ್ವಾಹಕ ಅಧಿಕಾರಿ ಶ್ರೀನಿವಾಸ್,ಸಹಾಯಕ ನಿರ್ದೇಶಕ ರವೀಂದ್ರ,ಬಿಇಒ ಟಿ. ಆರ್. ಸ್ವಾಮಿ,ಲೆಕ್ಕಾಧೀಕ್ಷಕ ಮಹಾದೇವಪ್ರಸಾದ್,ವಿವಿಧ ಇಲಾಖೆಯ ಅಧಿಕಾರಿಗಳು ಪಿಡಿಓಗಳು ಮತ್ತು ಭಾಗವಹಿಸಿದರು.

Post Comment

You May Have Missed